Intelligence Alert: ISI ಹಾಗೂ ಉಗ್ರ ಸಂಚಿನ ಮಹತ್ವದ ಮಾಹಿತಿ ಬಹಿರಂಗ, ಇಲ್ಲಿವೆ ಭಾರತದ ವಿರುದ್ಧ ರಚಿಸಲಾದ 5 ಮಾಸ್ಟರ್ ಪ್ಲಾನ್

Intelligence Alert: ನಮ್ಮ ಅಂಗ ಸಂಸ್ಥೆಯಾಗಿರುವ Zee Newsಗೆ ISI ಹಾಗೂ ಭೂಗತ ಲೋಕದ  (Underworld)  ಟೆರರ್ ಮಾಡ್ಯೂಲ್ ನ (Terror Module) ಮಾಸ್ಟರ್ ಪ್ಲಾನ್ (Master Plan) ದೊರೆತಿದ್ದು, ಭಾರತದಲ್ಲಿ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲು ISI ಸೈಬರ್ ಅಟ್ಯಾಕ್ (Cyber AttacK) ಸಂಚು ರೂಪಿಸುತ್ತಿದೆ. ಇದಲ್ಲದೆ ಪವರ್ ಗ್ರಿಡ್ ಗಳು ಸೇರಿದಂತೆ ಹಿಂದೂ ಮುಖಂಡರನ್ನು ಗುರಿಯಾಗಿಸುವ ಸಾಧ್ಯತೆ ಇದೆ.

Written by - Nitin Tabib | Last Updated : Oct 8, 2021, 02:46 PM IST
  • ಭಾರತದ ವಿರುದ್ಧ Pakistan-ISI ಉಗ್ರಸಂಚಿನ ಮಹತ್ವದ ಮಾಹಿತಿ ಬಹಿರಂಗ
  • ಭಾರತದ ವಿರುದ್ದ ಒಟ್ಟು 5 ಸಂಚುಗಳಿಗಾಗಿ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ.
  • ನಮ್ಮ ಅಂಗ ಸಂಸ್ಥೆಯಾಗಿರುವ Zee Newsಗೆ ISI ಹಾಗೂ Underworld ಟೆರರ್ ಮಾಡ್ಯೂಲ್ ನ ಮಾಸ್ಟರ್ ಪ್ಲಾನ್ ದೊರೆತಿದೆ.
Intelligence Alert: ISI ಹಾಗೂ ಉಗ್ರ ಸಂಚಿನ ಮಹತ್ವದ ಮಾಹಿತಿ ಬಹಿರಂಗ, ಇಲ್ಲಿವೆ ಭಾರತದ ವಿರುದ್ಧ ರಚಿಸಲಾದ 5 ಮಾಸ್ಟರ್ ಪ್ಲಾನ್ title=
Intelligence Agency Alert (File Photo)

ನವದೆಹಲಿ: Intelligence Alert - ಇತ್ತೀಚೆಗಷ್ಟೇ ದೆಹಲಿ ಪೋಲೀಸರ ವಿಶೇಷ ತಂಡ ದೆಹಲಿ ಹಾಗೂ ದೇಶದ ಇತರೆ ರಾಜ್ಯಗಳಿಂದ ಉಗ್ರರ ದೊಡ್ಡ ಮಾಡ್ಯೂಲ್ ಬಣ್ಣ ಬಹಿರಂಗಪಡಿಸಿತ್ತು. ಈ ಉಗ್ರರ ವಿಚಾರಣೆಯ ವೇಳೆ ಪಾಕಿಸ್ತಾನ ಹಾಗೂ ISI ರಚಿಸಿದ್ದ ಸಂಚಿನ ಕುರಿತು ಮಾಹಿತಿ ಬಹಿರಂಗಗೊಂಡಿತ್ತು. ಆದರೆ ಇದೇ ಮೊದಲ ಬಾರಿಗೆ  ಐಎಸ್‌ಐ ಹೊಸ ಯೋಜನೆಯೊಂದು ಬಹಿರಂಗಗೊಂಡಿದ್ದು, ಇದನ್ನು ಗುಪ್ತಚರ ಸಂಸ್ಥೆಗಳು Alert ರೂಪದಲ್ಲಿ ಹಂಚಿಕೊಂಡಿವೆ.

Intelligence Agency Alert
Intelligence Alert: ನಮ್ಮ ಅಂಗ ಸಂಸ್ಥೆಯಾಗಿರುವ Zee Newsಗೆ ISI ಹಾಗೂ ಭೂಗತ ಲೋಕದ  (Underworld)  ಟೆರರ್ ಮಾಡ್ಯೂಲ್ ನ (Terror Module) ಮಾಸ್ಟರ್ ಪ್ಲಾನ್ (Master Plan) ದೊರೆತಿದ್ದು, ಭಾರತದಲ್ಲಿ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲು ISI ಸೈಬರ್ ಅಟ್ಯಾಕ್ (Cyber AttacK) ಸಂಚು ರೂಪಿಸುತ್ತಿದೆ. ಇದಲ್ಲದೆ ಪವರ್ ಗ್ರಿಡ್ ಗಳು ಸೇರಿದಂತೆ ಹಿಂದೂ ಮುಖಂಡರನ್ನು ಗುರಿಯಾಗಿಸುವ ಸಾಧ್ಯತೆ ಇದೆ. ಈ ಕುರಿತು ಗುಪ್ತಚರ ಇಲಾಖೆ ಅಲರ್ಟ್ ಜಾರಿಗೊಳಿಸಿದೆ.

ಭಾರತದ ವಿರುದ್ಧ ಬಹುದೊಡ್ಡ ಸಂಚಿನ 5 ಮಾಸ್ಟರ್ ಪ್ಲಾನ್ ಗಳು
ಮೊದಲ ಸಂಚು

ಭಾರತೀಯ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲು ISI ಸೈಬರ್ ದಾಳಿಗೆ ಸಂಚು ರೂಪಿಸಿದೆ. ATS (Air Traffic Control Room)ನಲ್ಲಿ ಕಾರ್ಯನಿರತ ಓರ್ವ ವ್ಯಕ್ತಿಗೆ ಪೆನ್ ಡ್ರೈವ್ ನೀಡುವ ಮೂಲಕ ಏರ್ ಟ್ರ್ಯಾಫಿಕ್ ಸಿಸ್ಟಂ ಕಂಟ್ರೋಲ್ ನಲ್ಲಿ ಸಾಫ್ಟ್ ವೆಯರ್ ವೊಂದನ್ನು ಇನ್ಸ್ಟಾಲ್ ಮಾಡಿ, ಇಡೀ ಸಿಸ್ಟಂ ಹಾಳು ಮಾಡುವ ಸಂಚು ಇದಾಗಿದೆ. ಇದರಿಂದ ಬಹುದೊಡ್ಡ ಪ್ರಮಾಣದಲ್ಲಿ ವಿಮಾನ ಅಪಘಾತಗಳು ಸಂಭವಿಸಲಿವೆ.

ಎರಡನೇ ಸಂಚು 
ಐಎಸ್‌ಐ ರೂಪಿಸಿರುವ ಸಂಚುಗಳಲ್ಲಿ ಆರ್‌ಎಸ್‌ಎಸ್ (RSS) ಶಾಖೆಗಳು, ಹಿಂದೂ ಧಾರ್ಮಿಕ ಸ್ಥಳಗಳು ಮತ್ತು ಸಾರ್ವಜನಿಕ ಸಭೆಗಳ ಮೇಲೆ ದಾಳಿ ನಡೆಸುವ ಯೋಜನೆ ಕೂಡ ಶಾಮೀಲಾಗಿದೆ.

ಮೂರನೇ ಸಂಚು
ಪಾಟ್ನಾದಲ್ಲಿ, ಮಹಾತ್ಮ ಗಾಂಧಿ ಸೇತು, ಸೇತುವೆಗಳು, ರೈಲ್ವೇ ಟ್ರ್ಯಾಕ್ ಇತ್ಯಾದಿಗಳು ಭಯೋತ್ಪಾದಕರ ರೇಡಾರ್‌ನಲ್ಲಿವೆ, ಇದರಿಂದ ಭಾರಿ ಪ್ರಮಾಣದಲ್ಲಿ ಸಂಪರ್ಕಗಳು ಕಡಿತಗೊಳ್ಳಲಿದೆ.

ನಾಲ್ಕನೇ ಸಂಚು
ದೇಶದ ಪವರ್ ಗ್ರಿಡ್ ಅನ್ನು ಕೂಡ ವಿಫಲಗೊಳಿಸಲು ISI ಸಂಚು ರೂಪಿಸಿದೆ. ಇದರಿಂದ ದೇಶಾದ್ಯಂತ ವಿದ್ಯುತ್ ಸಂಕಷ್ಟ ಎದುರಾಗಿ ಬ್ಲಾಕ್ ಔಟ್ ಮಾಡುವ ಸಂಚು ಇದಾಗಿದೆ.

ಇದನ್ನೂ ಓದಿ-Corona Vaccine: ಭಾರತದ ಕಠಿಣತೆಗೆ ತಲೆಬಾಗಿದ ಬ್ರಿಟನ್, ಲಸಿಕೆ ಪಡೆದ ಭಾರತೀಯರಿಗೆ ನೀಡಿದೆ ಈ ವಿನಾಯಿತಿ

ಐದನೇ ಸಂಚು
ಬಲ ಪಂಥೀಯ (Right Wing Leaders) ಪ್ರಮುಖ ಮುಖಂಡರನ್ನು ISI ಗುರಿಯಾಗಿಸಿದೆ. ಇದಲ್ಲದೆ ಇಸ್ಲಾಂ ವಿರುದ್ಧ ಮಾತನಾಡುವವರು ಕೂಡ ISI ಹಿಟ್ ಲಿಸ್ಟ್ ನಲ್ಲಿದ್ದಾರೆ.

ಇದನ್ನೂ ಓದಿ-NASA's Psyche Mission: ಬಹಿರಂಗಗೊಳ್ಳಲಿದೆಯೇ 'ಬಾಹ್ಯಾಕಾಶದ ಗಣಿ'ಯ ರಹಸ್ಯ? ಭೂಮಿಯಿಂದಲೇ ಟ್ರಿಲಿಯನ್ ಮೊತ್ತದ ಸಂಪತ್ತಿನ ಕಣ್ಗಾವಲು

ISI ಸಂಚುಗಳನ್ನು ವಿಫಲಗೊಳಿಸಲು ಏಜೆನ್ಸಿಗಳೂ ಕೂಡ ಯೋಜನೆ ರೂಪಿಸಿವೆ
ಇನ್ನೊಂದೆಡೆ ಭಾರತೀಯ ಭದ್ರತಾ ಸಂಸ್ಥೆಗಳು ಕೂಡ ಪಾಕಿಸ್ತಾನ ಮತ್ತು ಐಎಸ್ಐನ (ISI) (Pakistan-ISI) ಈ ಸಂಚುಗಳನ್ನೂ ವಿಫಲಗೊಳಿಸಲು ಯೋಜನೆಗಳನ್ನು ರೂಪಿಸಿವೆ. ಗುಪ್ತಚರ ಸಂಸ್ಥೆಗಳ ಎಚ್ಚರಿಕೆಯ ನಂತರ, ಸೇತುವೆಗಳು, ಅಣೆಕಟ್ಟುಗಳು, ಡಿಪೋಗಳು ಮತ್ತು ಗೋದಾಮುಗಳಂತಹ ಪ್ರಮುಖ ಸ್ಥಳಗಳಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಯ ಪ್ರೊಫೈಲ್ ಅನ್ನು ಪರಿಶೀಲಿಸಲು ATCಯನ್ನು ಸಂಪರ್ಕಿಸಲಾಗಿದೆ. ಗಲ್ಫ್ ದೇಶಗಳಿಂದ ಗಡೀಪಾರು ಮಾಡಿದವರು ಅಥವಾ ಈ ಹಿಂದೆ ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿದವರ ಮೇಲೆ ನಿಗಾ ಇಡುವಂತೆ ಭದ್ರತಾ ಏಜೆನ್ಸಿಗಳು ಹೇಳಿವೆ. ಏಕೆಂದರೆ ಇಂತಹ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಐಎಸ್ಐ ಆರ್ಥಿಕ ಸಹಾಯ, ಸ್ಫೋಟಕಗಳು ಮತ್ತು ಲಾಜಿಸ್ಟಿಕ್ಸ್ ನೆರವು ಒದಗಿಸಲು ಭೂಗತ ಜಗತ್ತಿನ ಜನರನ್ನು ಕೂಡ ಬಳಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ-ಗಡಿ ನಿಯಂತ್ರಣ ರೇಖೆಯುದ್ದಕ್ಕೂ ವಾಯುಪಡೆ ನಿಯೋಜಿಸಿದ ಚೀನಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News