Indian Railways Recruitment 2021: 192 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ವಿವರ ಇಲ್ಲಿದೆ ನೋಡಿ…

ಅಭ್ಯರ್ಥಿಯು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

Written by - Puttaraj K Alur | Last Updated : Sep 12, 2021, 05:48 PM IST
  • ಭಾರತೀಯ ರೈಲ್ವೆ ಸಚಿವಾಲಯದ ರೈಲ್ವೆ ವ್ಹೀಲ್‌ ಫ್ಯಾಕ್ಟರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಒಟ್ಟು 192 ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನಾಂಕ
  • ಹುದ್ದೆಗಳ ವಿವರ, ಪ್ರಮುಖ ದಿನಾಂಕ, ಅರ್ಜಿ ಶುಲ್ಕ, ವಯೋಮಿತಿ ಅರ್ಹತೆ ಇತರ ಮಾಹಿತಿ ತಿಳಿದು ಅರ್ಜಿ ಸಲ್ಲಿಸಬಹುದು
Indian Railways Recruitment 2021: 192 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ವಿವರ ಇಲ್ಲಿದೆ ನೋಡಿ… title=
ಖಾಲಿ ಇರುವ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ (Photo Courtesy: @Zee News)

ನವದೆಹಲಿ: ಭಾರತೀಯ ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ರೈಲ್ವೆ ವ್ಹೀಲ್‌ ಫ್ಯಾಕ್ಟರಿ(Rail Wheel Factory)ಯಲ್ಲಿ ಖಾಲಿ ಇರುವ ವಿವಿಧ ಟ್ರೇಡ್‌ಗಳ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿ(Indian Railways Recruitment 2021)ಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ವಿವರ, ಪ್ರಮುಖ ದಿನಾಂಕಗಳು, ಅರ್ಜಿ ಶುಲ್ಕ, ವಯೋಮಿತಿ ಅರ್ಹತೆಗಳ ಮಾಹಿತಿಗಳನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು 192 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು(Indian Railways Recruitment), ಅರ್ಜಿ ಸಲ್ಲಿಸುವ ಗಡುವು ನಾಳೆಯೇ ಮುಕ್ತಾಯವಾಗಲಿದೆ. ಕೂಡಲೇ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯ ಹಾರ್ಡ್ ಕಾಪಿಯನ್ನು ಸಂಬಂಧಿತ ಪೂರಕ ದಾಖಲೆಗಳೊಂದಿಗೆ ಬೆಂಗಳೂರಿನ ರೈಲ್ವೆ ವ್ಹೀಲ್ ಫ್ಯಾಕ್ಟರಿ ಕಚೇರಿಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: PM Awas Yojana 2021 Update: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಿಗಲಿದೆ ಮತ್ತೊಂದು ದೊಡ್ಡ ಸೌಕರ್ಯ, ಫಟಾ-ಫಟ್ ಲಾಭ ಪಡೆದುಕೊಳ್ಳಿ

ಅರ್ಜಿ ಶುಲ್ಕ 100 ರೂ. ಆಗಿರುತ್ತದೆ. ಎಸ್‌ಸಿ(SC), ಎಸ್‌ಟಿ(ST), ಪಿಹೆಚ್‌ಡಿ(Phd), ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಇಂಡಿಯನ್‌ ಪೋಸ್ಟಲ್ ಆರ್ಡರ್‌ ಮೂಲಕ ಅಥವಾ ಡಿಡಿ ತೆಗೆಯುವ ಮೂಲಕ ಪಾವತಿಸಬಹುದಾಗಿದೆ.

ನೇಮಕಾತಿಯ ಪ್ರಮುಖ ದಿನಾಂಕಗಳು

ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ: 13-09-2021(ಸೋಮವಾರ)

ಆಯ್ಕೆಯಾದ ಅಭ್ಯರ್ಥಿಗಳ ಲಿಸ್ಟ್‌ ಬಿಡುಗಡೆ: ಅಪ್ಲಿಕೇಶನ್‌ ಸ್ವೀಕರಿಸಿದ 45 ದಿನಗಳ ಒಳಗೆ

ತರಬೇತಿ ಆರಂಭದ ಅವಧಿ: ಮೆರಿಟ್ ಲಿಸ್ಟ್‌ ಬಿಡುಗಡೆಯಾದ 15 ದಿನಗಳ ಒಳಗೆ

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಮೇಘಸ್ಫೋಟ: ಮಕ್ಕಳು ಸೇರಿ ನಾಲ್ವರ ಸಾವು, ಓರ್ವ ನಾಪತ್ತೆ

ರೈಲ್ವೆ ವ್ಹೀಲ್ ಫ್ಯಾಕ್ಟರಿ ನೇಮಕಾತಿ ಹುದ್ದೆಗಳು

ಫಿಟ್ಟರ್ (Fitter) - 85

ಮೆಕ್ಯಾನಿಸ್ಟ್ (Machinist) - 31

ಮೆಕ್ಯಾನಿಕ್ (ಮೋಟಾರ್ ವಾಹನ) - 08

ಟರ್ನರ್ (Turner) - 05

CNC ಪ್ರೋಗ್ರಾಮಿಂಗ್ ಕಮ್ ಆಪರೇಟರ್ (COE Group) - 23

ಎಲೆಕ್ಟ್ರಿಷಿಯನ್(Electrician) - 18

ಎಲೆಕ್ಟ್ರಾನಿಕ್ ಮೆಕ್ಯಾನಿಕ್(Electronic Mechanic) - 22

ನೇಮಕಾತಿಯ ವಯಸ್ಸಿನ ಮಿತಿ

ಕನಿಷ್ಠ ವಯಸ್ಸು: 15 ವರ್ಷಗಳು

ಗರಿಷ್ಠ ವಯಸ್ಸು: 24 ವರ್ಷಗಳು

ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ನೇಮಕಾತಿಗೆ ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಯು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News