Job Alert! ಭಾರತೀಯ ರೈಲ್ವೆಯಲ್ಲಿ ಶೀಘ್ರದಲ್ಲೇ 4 ಲಕ್ಷ ಜನರಿಗೆ ಉದ್ಯೋಗ

2019ರಲ್ಲಿ 53 ಸಾವಿರ ಮತ್ತು 2010ರಲಿ 46 ಸಾವಿರ ಹುದ್ದೆಗಳು ನಿವೃತ್ತಿ ಹಾಗೂ ಇತರ ಕಾರಣಗಳಿಂದ ಖಾಲಿಯಾಗಲಿವೆ. ಹಾಗಾಗಿ ಇನ್ನೆರಡು ವರ್ಷಗಳಲ್ಲಿ 99 ಸಾವಿರ ಹುದ್ದೆಗಳು ಖಾಲಿಯಾಗಲಿದ್ದು, 2.3 ಲಕ್ಷ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. 

Last Updated : Jan 24, 2019, 01:14 PM IST
Job Alert! ಭಾರತೀಯ ರೈಲ್ವೆಯಲ್ಲಿ ಶೀಘ್ರದಲ್ಲೇ 4 ಲಕ್ಷ ಜನರಿಗೆ ಉದ್ಯೋಗ title=

ನವದೆಹಲಿ: 2021ರ ವೇಳೆಗೆ ಭಾರತೀಯ ರೈಲ್ವೆಯಲ್ಲಿ 4 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯುಶ್ ಗೋಯಲ್ ತಿಳಿಸಿದ್ದಾರೆ. 

ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈಲ್ವೆ ಇಲಾಖೆಯಲ್ಲಿ ಮಂಜೂರಾಗಿರುವ 15.06 ಲಕ್ಷ ಉದ್ಯೋಗಿಗಳಲ್ಲಿ ಪ್ರಸ್ತುತ 12.23 ಲಕ್ಷ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ 2.82 ಲಕ್ಷ ಸ್ಥಾನಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು ಎಂದು ಹೇಳಿದರು.

"ಕಳೆದ ವರ್ಷ ನಾವು 1.31 ಲಕ್ಷ ಹುದ್ದೆಗಳನ್ನು ಹಾಗೆ ಉಳಿಸಿ, 1.51 ಲಕ್ಷ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಂಡಿದ್ದೆವು. ಉಳಿದಂತೆ 2019ರಲ್ಲಿ 53 ಸಾವಿರ ಮತ್ತು 2010ರಲ್ಲಿ 46 ಸಾವಿರ ಹುದ್ದೆಗಳು ನಿವೃತ್ತಿ ಹಾಗೂ ಇತರ ಕಾರಣಗಳಿಂದ ಖಾಲಿಯಾಗಲಿವೆ. ಹಾಗಾಗಿ ಇನ್ನೆರಡು ವರ್ಷಗಳಲ್ಲಿ 99 ಸಾವಿರ ಹುದ್ದೆಗಳು ಖಾಲಿಯಾಗಲಿದ್ದು, 2.3 ಲಕ್ಷ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಇದರಿಂದಾಗಿ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ಗೋಯಲ್ ಹೇಳಿದ್ದಾರೆ.

Trending News