Indian Railways: ರೈಲಿನಲ್ಲಿ ನಿಮ್ಮ ಸಾಮಾನು ಕಳುವಾದರೆ, ಹೀಗೆ ಮಾಡಿ

Indian Railways: ರೈಲು ಪ್ರಯಾಣದ ವೇಳೆ ನಿಮ್ಮ ಯಾವುದೇ ಸಾಮಾನು ಕಳುವಾದರೆ ಅದನ್ನು ಮರಳಿ ಪಡೆಯುವ ಭರವಸೆಯನ್ನು ಬಿಡಬೇಡಿ. ಕಳೆದುಹೋದ ವಸ್ತುವಿನ ಬಗ್ಗೆ ನೀವು ತಕ್ಷಣ ದೂರು ನೀಡಿದರೆ ನೀವು ಅದನ್ನು ಮರಳಿ ಪಡೆಯಬಹುದು.  

Written by - Yashaswini V | Last Updated : Mar 23, 2021, 11:10 AM IST
  • ಮುಂದಿನ ಬಾರಿ ನೀವು ಯಾವುದೇ ರೈಲಿನಲ್ಲಿ ನಿಮ್ಮ ಸಾಮಾನನ್ನು ಕಳೆದುಕೊಂಡಾಗ, ಅದನ್ನು ಮರಳಿ ಪಡೆಯುವ ಯಾವುದೇ ಭರವಸೆಯನ್ನು ಬಿಡಬೇಡಿ
  • ಕಳೆದುಹೋದ ವಸ್ತುವಿನ ಬಗ್ಗೆ ನೀವು ತಕ್ಷಣ ದೂರು ನೀಡಿದರೆ ನೀವು ಅದನ್ನು ಮರಳಿ ಪಡೆಯಬಹುದು.
  • ನೀವು ಆರ್‌ಪಿಎಫ್‌ನಲ್ಲಿ ಎಫ್‌ಐಆರ್ ಸಹ ನೋಂದಾಯಿಸಬಹುದು
Indian Railways: ರೈಲಿನಲ್ಲಿ ನಿಮ್ಮ ಸಾಮಾನು ಕಳುವಾದರೆ, ಹೀಗೆ ಮಾಡಿ title=
Follow this method if you miss the luggage in the train

Indian Railways: ಸಾಮಾನ್ಯವಾಗಿ ರೈಲು ಪ್ರಯಾಣದ ವೇಳೆ ನಮ್ಮ ಸಾಮಾಗ್ರಿ ಕಳೆದುಹೋದರೆ ನಾವು ಒಂದಿಷ್ಟು ಹುಡುಕಾಡುತ್ತೇವೆ. ನಂತರ ಸಿಗದಿದ್ದಾಗ ನಮ್ಮ ಹಣೆಬರಹ ಎಂದು ಸುಮ್ಮನಾಗುತ್ತೇವೆ. ಆದರೆ ಹಾಗೆ ಮಾಡಬಾರದು. ಮುಂದಿನ ಬಾರಿ ನೀವು ಯಾವುದೇ ರೈಲಿನಲ್ಲಿ ನಿಮ್ಮ ಸಾಮಾನನ್ನು ಕಳೆದುಕೊಂಡಾಗ, ಅದನ್ನು ಮರಳಿ ಪಡೆಯುವ ಯಾವುದೇ ಭರವಸೆಯನ್ನು ಬಿಡಬೇಡಿ. ಕಳೆದುಹೋದ ವಸ್ತುವಿನ ಬಗ್ಗೆ ನೀವು ತಕ್ಷಣ ದೂರು ನೀಡಿದರೆ ನೀವು ಅದನ್ನು ಮರಳಿ ಪಡೆಯಬಹುದು.
 
ತಕ್ಷಣ ದೂರು ನೀಡಿ  (Complain immediately):
ನೀವು ರೈಲು ಪ್ರಯಾಣದ (Travel) ಸಂದರ್ಭದಲ್ಲಿ ನಿಮ್ಮ ಸಾಮಾನನ್ನು ಕಳೆದುಕೊಂಡರೆ ಅಥವಾ ರೈಲು ಇಳಿಯುವ ಸಂದರ್ಭದಲ್ಲಿ ನಿಮ್ಮ ಸರಕುಗಳನ್ನು ಬಿಟ್ಟಿದ್ದೀರಿ ಎಂದು ತಿಳಿದ ತಕ್ಷಣ ಪ್ಲಾಟ್‌ಫಾರ್ಮ್‌ಗೆ ಮರಳಿ. ನಿಲ್ದಾಣದಲ್ಲಿ ಮೊದಲು ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿ ಅವರೊಂದಿಗೆ ಹೋಗಿ ಆರ್‌ಪಿಎಫ್‌ಗೆ ತಿಳಿಸಿ. ನೀವು ಆರ್‌ಪಿಎಫ್‌ನಲ್ಲಿ ಎಫ್‌ಐಆರ್ ಸಹ ನೋಂದಾಯಿಸಬಹುದು. ಇದರ ನಂತರ, ಸರಕುಗಳನ್ನು ಹುಡುಕಲು ತಕ್ಷಣ ತನಿಖೆ ನಡೆಸುವುದು.

ಇದರ ನಂತರ ತನಿಖಾ ತಂಡವು ಮೊದಲು ನೀವು ಹೇಳಿದ ರೈಲಿನ (Indian Railways) ಸೀಟ್ ಸಂಖ್ಯೆಯನ್ನು ಪರಿಶೀಲಿಸುತ್ತದೆ. ಅಲ್ಲಿ ಸರಕುಗಳು ಕಂಡುಬಂದರೆ, ಅದನ್ನು ಹತ್ತಿರದ ಆರ್‌ಪಿಎಫ್ ಪೊಲೀಸ್ ಠಾಣೆಯಲ್ಲಿ ಇಡಲಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಸರಕುಗಳನ್ನು ದೂರುದಾರ ಎಫ್‌ಐಆರ್ ದಾಖಲಿಸಿದ ಅದೇ ನಿಲ್ದಾಣಕ್ಕೆ ತಲುಪಿಸಲಾಗುತ್ತದೆ.

ಇದನ್ನೂ ಓದಿ - ರೈಲ್ವೆಯಲ್ಲಿ ಮಹಿಳೆ ವಿರುದ್ಧದ ಕ್ರೈಂ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ

ಇದು ಮುಂದಿನ ಪ್ರಕ್ರಿಯೆ  (This is the process): 
ಸರಕುಗಳ ಮಾಹಿತಿಯನ್ನು ಪಡೆದ ನಂತರ, ಪ್ರಯಾಣಿಕರನ್ನು ಕರೆಸಲಾಗುತ್ತದೆ ಮತ್ತು ಅವನ ಮಾಹಿತಿಯನ್ನು ನೀಡುವ ಜೊತೆಗೆ, ಅಗತ್ಯವಿರುವ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಅದರ ನಂತರ ನಿಮ್ಮ ಸಾಮಾನುಗಳನ್ನು ನಿಮಗೆ ಹಿಂತಿರುಗಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವು ನಿಲ್ದಾಣಗಳಲ್ಲಿ ಸರಕುಗಳನ್ನು ವಶಪಡಿಸಿಕೊಂಡ ನಂತರ ಸರಕುಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ - Passenger Train: ರೈಲು ಪ್ರಯಾಣಿಕರಿಗೆ 'ಗುಡ್‌ ನ್ಯೂಸ್' ನೀಡಿದ ಕೇಂದ್ರ ರೈಲ್ವೆ ಸಚಿವ!

ಕಳೆದುಹೋದ ಯಾವುದೇ ಸಾಮಾನುಗಳನ್ನು ಸ್ವೀಕರಿಸಿದ ನಂತರ... (What happens to get lost goods?)
ಕಳೆದುಹೋದ ಯಾವುದೇ ಸಾಮಾನುಗಳನ್ನು ಸ್ವೀಕರಿಸಿದ ನಂತರ, ಅದನ್ನು ರೈಲ್ವೆ ನಿಲ್ದಾಣದಲ್ಲಿ ಇಡಲಾಗುತ್ತದೆ. ಜೊತೆಗೆ ಸರಕುಗಳನ್ನು ಪರಿಶೀಲಿಸಲಾಗುತ್ತದೆ. ಈ ಸಾಮಾನು ಸರಂಜಾಮುಗಳಲ್ಲಿ ಯಾವುದಾದರೂ ಅಮೂಲ್ಯವಾದ ವಸ್ತು ಇದ್ದರೆ, ಅಂತಹ ಸರಕುಗಳನ್ನು 24 ಗಂಟೆಗಳವರೆಗೆ ರೈಲ್ವೆ ನಿಲ್ದಾಣದಲ್ಲಿ ಇರಿಸಲಾಗುತ್ತದೆ. ಅಂತಹ ಸಮಯದಲ್ಲಿ, ಸರಕುಗಳ ಮಾಲೀಕರು ಅದರ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ನಂತರ ಇಲ್ಲಿ ಕೋರಿದ ಅಗತ್ಯ ದಾಖಲೆಗಳನ್ನು ಸಹ ತೋರಿಸಬೇಕಾಗುತ್ತದೆ. ಆಗ ಮಾತ್ರ ಸರಕುಗಳನ್ನು ಹಿಂತಿರುಗಿಸಲಾಗುತ್ತದೆ. 24 ಗಂಟೆಗಳ ನಂತರ ಸರಕುಗಳನ್ನು ವಲಯ ಕಚೇರಿಗೆ ಕಳುಹಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News