Indian Railways :ರೈಲ್ವೆ ಇಲಾಖೆಯ 4660 ಹುದ್ದೆಗಳಿಗೆ ಅರ್ಜಿ ಆಹ್ವಾನ : ಮಾಹಿತಿ ಇಲ್ಲಿದೆ

 Indian Railways : ಭಾರತೀಯ ರೈಲ್ವೆಯು ಇಲಾಖೆಯು ಈ ವರ್ಷದಲ್ಲಿ ೩ನೇ ಅಧಿಸೂಚನೆ ಹೊರಡಿಸುವ ಮೂಲಕ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

Written by - Zee Kannada News Desk | Last Updated : Feb 26, 2024, 11:19 PM IST
  • ಭಾರತೀಯ ರೈಲ್ವೆಯು ಇಲಾಖೆಯು ಈ ವರ್ಷದಲ್ಲಿ ೩ನೇ ಅಧಿಸೂಚನೆ ಹೊರಡಿಸುವ ಮೂಲಕ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
  • ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು
  • ಈ ಮೇಲಿನ ಹುದ್ದೆಗಳಿಗೆ ಅರ್ಜಿ ಲಿಂಕ್‌ ಅನ್ನು 2024ರ ಏಪ್ರಿಲ್ 15 ರಂದು ಆಯಾ ರೈಲ್ವೆ ವಲಯಗಳ ಪ್ರಾದೇಶಿಕ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
Indian Railways :ರೈಲ್ವೆ ಇಲಾಖೆಯ 4660 ಹುದ್ದೆಗಳಿಗೆ ಅರ್ಜಿ ಆಹ್ವಾನ : ಮಾಹಿತಿ ಇಲ್ಲಿದೆ  title=

 Application Invitation for Railway Department : ಭಾರತೀಯ ರೈಲ್ವೆಯು ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಮತ್ತೊಂದು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ವರ್ಷದಲ್ಲಿ ಮೂರನೇ ಅಧಿಸೂಚನೆ ಹೊರಡಿಸುವ ಮೂಲಕ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದ್ದು, ನೇಮಕಾತಿ ಸಂಪೂರ್ಣ ವಿವರ ಈ ಕೆಳಕಂಡಂತಿದೆ. 

ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ರೈಲ್ವೆಯ ರಕ್ಷಣಾ ಸಿಬ್ಬಂದಿ ಪಡೆಯ ರೈಲ್ವೆ ಸಬ್‌ಇನ್ಸ್‌ಪೆಕ್ಟರ್, ರೈಲ್ವೆ ಕಾನ್ಸ್‌ಟೇಬಲ್‌ ಸೇರಿ ಒಟ್ಟು 4660 ಖಾಲಿ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಲ್ಲದೆ ಆರ್‌ಆರ್‌ಬಿ ಆರ್‌ಪಿಎಫ್‌ನ ಎಸ್‌ಐ, ಕಾನ್ಸ್‌ಟೇಬಲ್‌ ಹುದ್ದೆಗಳ ಕುರಿತು ಆಸಕ್ತಿ ಇರುವವರು ಈ ಕೆಳಕಂಡ ಮಾಹಿತಿಯಲ್ಲಿ ತಿಳಿಯಬಹುದಾಗಿದೆ. 

ಇದನ್ನು ಓದಿ : Lucky Zodiac Signs: ಮಾರ್ಚ್ ತಿಂಗಳಿನಲ್ಲಿ ಈ 4 ರಾಶಿಯ ಜನರ ಜೀವನವೇ ಬದಲಾಗಲಿದೆ!

ನೇಮಕಾತಿ ವಿವರ 
ಸಂಸ್ಥೆ ಹೆಸರು: ಭಾರತೀಯ ರೈಲ್ವೆ (RRB) 
ಹುದ್ದೆ ಹೆಸರು: ಆರ್‌ಪಿಎಫ್‌ ಸಬ್‌ ಇನ್ಸ್‌ಪೆಕ್ಟರ್, ಆರ್‌ಪಿಎಸ್‌ ಕಾನ್ಸ್‌ಟೇಬಲ್‌
ರೈಲ್ವೆ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳ ಸಂಖ್ಯೆ: 452 
ರೈಲ್ವೆ ಕಾನ್ಸ್‌ಟೇಬಲ್‌ ಹುದ್ದೆಗಳ ಸಂಖ್ಯೆ: 4208 
ಖಾಲಿ ಹುದ್ದೆ ಒಟ್ಟು ಸಂಖ್ಯೆ: 4660
ಮಾಸಿಕ ವೇತನ: 21700 ರಿಂದ 35,400 ರೂಪಾಯಿ 
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಏಪ್ರಿಲ್ 14 
ಪೋಸ್ಟಿಂಗ್- ದೇಶದ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಎಲ್ಲಿಯಾದರೂ

ಇದನ್ನು ಓದಿ : Shruti Haasan : ಚಂದಿರನ ಹೊಳಪಲ್ಲಿ 'ಮೂನು' ಚಿತ್ರದ ಬೆಡಗಿಯ ಫೋಟೋಸ್ ಇಲ್ಲಿವೆ ನೋಡಿ

ವಿದ್ಯಾರ್ಹತೆ : ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿರಬೇಕು.
 ಕಾನ್ಸ್‌ಟೇಬಲ್‌ ಹುದ್ದೆಗೆ ಅಭ್ಯರ್ಥಿಗಳು ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣಗೊಳಿಸಿರಬೇಕು ಎಂದು ಅಧಿಸೂಚನೆ ನೀಡಲಾಗಿದೆ.

ವಯೋಮಿತಿ :  ಸಬ್‌ಇನ್ಸ್‌ಪೆಕ್ಟರ್ ಹುದ್ದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮುಂದಿನ ಜುಲೈ 01ಕ್ಕೆ 20-28 ವರ್ಷವಾಗಿರಬೇಕು.
 ಉಳಿದಂತೆ ಕಾನ್ಸ್‌ಟೇಬಲ್‌ ಹುದ್ದೆಯ ಅಭ್ಯರ್ಥಿಗಳಿಗೆ ಅದೇ ದಿನಾಂಕಕ್ಕೆ 18-28 ವರ್ಷ ವಯಸ್ಸಾಗಿರಬೇಕು. 

ಅರ್ಜಿ ಶುಲ್ಕ :  ಸಾಮಾನ್ಯ ಅಭ್ಯರ್ಥಿಗಳು, ಒಬಿಸಿ ಅಭ್ಯರ್ಥಿಗಳಿಗೆ ಶುಲ್ಕ: 500 ರೂ. 
ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ: 250 ರೂ.

ಪ್ರಮುಖ ದಿನಾಂಕಗಳು 
ಆನ್‌ಲೈನ್‌ ಅಪ್ಲಿಕೇಶನ್‌ ಸ್ವೀಕಾರ ಆರಂಭಿಕ ದಿನಾಂಕ : 15-04-2024 
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 14-05-2024
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಲಿಂಕ್‌ ಅನ್ನು 2024ರ ಏಪ್ರಿಲ್ 15 ರಂದು ಆಯಾ ರೈಲ್ವೆ ವಲಯಗಳ ಪ್ರಾದೇಶಿಕ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಲಿಂಕ್ ಗೆ ಭೇಟಿ www.rrbbnc.gov.in ಗೆ ನೀಡಿ ಪಡೆದುಕೊಳ್ಳಬೇಕು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News