ನವದೆಹಲಿ: ದಕ್ಷಿಣ ಮಧ್ಯ ರೈಲ್ವೆ 4,000ಕ್ಕೂ ಅಧಿಕ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ(Indian Railway Recruitment 2021)ಗಳನ್ನು ಆಹ್ವಾನಿಸಿದೆ. ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ವಿವರವಾದ ಅಧಿಸೂಚನೆಯನ್ನು scr.indianrailways.gov.in ನಲ್ಲಿ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದುವ ಮೂಲಕ ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹುದ್ದೆಗಳ ಹೆಸರು, ಖಾಲಿ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆಗಳು, ವಯಸ್ಸಿನ ಮಿತಿ ಮತ್ತು ಇತರ ಪ್ರಮುಖ ವಿವರಗಳನ್ನು ಕೆಳಗೆ ಪರಿಶೀಲಿಸಿ.
ಇದನ್ನೂ ಓದಿ: Big initiative: ರೈಲು ಆಧಾರಿತ ಪ್ರವಾಸೋದ್ಯಮ ವಿಸ್ತರಿಸಲು ಭಾರತೀಯ ರೈಲ್ವೆ ಇಲಾಖೆ ಯೋಚನೆ
ನೇಮಕಾತಿ ಹೆಸರು ಮತ್ತು ಹುದ್ದೆಗಳ ಸಂಖ್ಯೆ
ಎಸಿ ಮೆಕ್ಯಾನಿಕ್(AC Mechanic) - 250 ಹುದ್ದೆ
ಕಾರ್ಪೆಂಟರ್(Carpenter) - 18 ಹುದ್ದೆ
ಡೀಸೆಲ್ ಮೆಕ್ಯಾನಿಕ್(Diesel Mechanic) - 531 ಹುದ್ದೆ
ಎಲೆಕ್ಟ್ರಿಷಿಯನ್(Electrician) - 1,019 ಹುದ್ದೆ
ಎಲೆಕ್ಟ್ರಾನಿಕ್ ಮೆಕ್ಯಾನಿಕ್(Electronic Mechanic) - 92 ಹುದ್ದೆ
ಫಿಟ್ಟರ್(Fitter) - 1,460 ಹುದ್ದೆ
ಮೆಷಿನಿಸ್ಟ್(Machinist) - 71 ಹುದ್ದೆ
ಎಂಎಂಟಿಎಂ(MMTM) - 5 ಹುದ್ದೆ
ಎಂಎಂಡಬ್ಲ್ಯೂ(MMW) - 24 ಹುದ್ದೆ
ಪೇಂಟರ್(Painter) - 80 ಹುದ್ದೆ
ವೆಲ್ಡರ್(Welder) - 553 ಹುದ್ದೆ
ನೇಮಕಾತಿ ಶೈಕ್ಷಣಿಕ ಅರ್ಹತೆಗಳು
ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10ನೇ ತರಗತಿ ಅಥವಾ ತತ್ಸಮಾನ (Under 10+2 Examination System) ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು ಮಾನ್ಯತೆ ಪಡೆದ ಸಂಸ್ಥೆಯಿಂದ ಐಟಿಐ ಟ್ರೇಡ್ ಪ್ರಮಾಣಪತ್ರವನ್ನು ಹೊಂದಿರಬೇಕು.
ಇದನ್ನೂ ಓದಿ: Indian Railways: ರೈಲು ಯಾತ್ರಿಗಳಿಗೊಂದು ಮಹತ್ವದ ಮಾಹಿತಿ, ಇನ್ಮುಂದೆ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ
ನೇಮಕಾತಿ ವಯಸ್ಸಿನ ಮಿತಿ
ಅಭ್ಯರ್ಥಿಯು ಅಕ್ಟೋಬರ್ 4, 2021ಕ್ಕೆ 15 ರಿಂದ 24 ವರ್ಷ ವಯಸ್ಸಿನವರಾಗಿರಬೇಕು. ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ನೇಮಕಾತಿ ಕೊನೆಯ ದಿನಾಂಕ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 3, 2021 (11:59 PM) ವರೆಗೆ ಅರ್ಜಿ ಸಲ್ಲಿಸಬಹುದು.
Click here to check detailed Indian Railway Recruitment notification
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.