Indian Railway Recruitment 2021: 10ನೇ ತರಗತಿ ಪಾಸ್ ಆದವರಿಗೆ ಭಾರತೀಯ ರೈಲ್ವೆಯಲ್ಲಿ ಬಂಪರ್ ಉದ್ಯೋಗಾವಕಾಶ

Indian Railway Recruitment 2021: ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಯು ಈ ಎಲ್ಲಾ ಪ್ರಮುಖ ವಿಷಯಗಳನ್ನು ಎಚ್ಚರಿಕೆಯಿಂದ ಓದಬೇಕು. 

Written by - Zee Kannada News Desk | Last Updated : Oct 1, 2021, 02:09 PM IST
  • ಭಾರತೀಯ ರೈಲ್ವೆ ನೇಮಕಾತಿ 2021 ಪ್ರಕ್ರಿಯೆಯ ಅಡಿಯಲ್ಲಿ ಒಟ್ಟು 3093 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ
  • ಈ ಹುದ್ದೆಗಳಿಗೆ ಸಪ್ಟೆಂಬರ್ 20 ರಿಂದ ಅರ್ಜಿ ಪ್ರಕ್ರಿಯ ಆರಂಭ
  • ಅಕ್ಟೋಬರ್ 20, 2021 ರಂದು ಅರ್ಜಿ ಸಲ್ಲಿಸಲು ಕೊನೆ ದಿನಾಂಕ
Indian Railway Recruitment 2021: 10ನೇ ತರಗತಿ ಪಾಸ್ ಆದವರಿಗೆ ಭಾರತೀಯ ರೈಲ್ವೆಯಲ್ಲಿ ಬಂಪರ್ ಉದ್ಯೋಗಾವಕಾಶ title=
Indian Railway Recruitment 2021

Indian Railway Recruitment 2021:  ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಲು ಯೋಜಿಸುತ್ತಿರುವ ಯುವಕರಿಗೆ ಉತ್ತಮ ಅವಕಾಶವಿದೆ.  ಭಾರತೀಯ ರೈಲ್ವೆ ನೇಮಕಾತಿ 2021 (Indian Railway Recruitment 2021) ರಲ್ಲಿ  ಉತ್ತರ ರೈಲ್ವೇ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್, rrcnr.org ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 

ಭಾರತೀಯ ರೈಲ್ವೆ ನೇಮಕಾತಿ 2021 (Indian Railway Recruitment 2021) ಅಡಿಯಲ್ಲಿ ಈ ಹುದ್ದೆಗಳಿಗೆ ಸಪ್ಟೆಂಬರ್ 20 ರಿಂದ ಅರ್ಜಿ ಪ್ರಕ್ರಿಯ ಆರಂಭವಾಗಿದೆ.  ಅಕ್ಟೋಬರ್ 20, 2021 ರಂದು ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಆಗಿದೆ.

ಇದನ್ನೂ ಓದಿ- Indian Army Recruitment 2021: ಭಾರತೀಯ ಸೇನೆಯಲ್ಲಿ ಪರೀಕ್ಷೆ ಇಲ್ಲದೆ ಅಧಿಕಾರಿ ಆಗುವ ಸುವರ್ಣಾವಕಾಶ, ಶೀಘ್ರದಲ್ಲೇ ಅರ್ಜಿ ಸಲ್ಲಿಸಿ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು.ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ http://www.rrcnr.org/Default.aspx  ಭಾರತೀಯ ರೈಲ್ವೆ (Indian Railways) ನೇಮಕಾತಿ 2021 (Indian Railway Recruitment 2021) ಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೆಯೇ, ನೀವು ಅಧಿಕೃತ ಅಧಿಸೂಚನೆಯನ್ನು http://www.rrcnr.org/rrcnr_pdf/Apprentice2021/Act ಈ ಲಿಂಕ್ ಮೂಲಕ ನೋಡಬಹುದು. ಭಾರತೀಯ ರೈಲ್ವೆ ನೇಮಕಾತಿ 2021 ಪ್ರಕ್ರಿಯೆಯ ಅಡಿಯಲ್ಲಿ ಒಟ್ಟು 3093 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 

ಭಾರತೀಯ ರೈಲ್ವೇ ನೇಮಕಾತಿ 2021 ರ ಪ್ರಮುಖ ದಿನಾಂಕಗಳು :
>> ಅರ್ಜಿ ಸಲ್ಲಿಸಲು ಆರಂಭ ದಿನಾಂಕ - 20 ಸೆಪ್ಟೆಂಬರ್ 
>> ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 20 ಅಕ್ಟೋಬರ್

ಇದನ್ನೂ ಓದಿ- Cyclone Shaheen: ಗುಲಾಬ್ ನಂತರ, ಈಗ ಶಾಹೀನ್ ಚಂಡಮಾರುತದ ಭೀತಿ

ಒಟ್ಟು ಹುದ್ದೆಗಳ ಸಂಖ್ಯೆ - 3093 ಹುದ್ದೆಗಳು

ಭಾರತೀಯ ರೈಲ್ವೇ ನೇಮಕಾತಿ 2021 ಕ್ಕೆ ಅರ್ಹತಾ ಮಾನದಂಡ :
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ಟ್ರೇಡ್‌ಗಳಲ್ಲಿ ಐಟಿಐ ಕೋರ್ಸ್ ಉತ್ತೀರ್ಣರಾಗಿರಬೇಕು.

2021 ಭಾರತೀಯ ರೈಲ್ವೆ ನೇಮಕಾತಿಗೆ ವಯಸ್ಸಿನ ಮಿತಿ:
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ 15 ವರ್ಷಕ್ಕಿಂತ ಹೆಚ್ಚಿರಬೇಕು ಮತ್ತು 24 ವರ್ಷಕ್ಕಿಂತ ಕಡಿಮೆ ಇರಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News