ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆಯು ಭಾನುವಾರ ದಾಳಿ ನಡೆಸಿದೆ. ಭಾರತೀಯ ಸೇನೆಯ ದಾಳಿಯ ನಂತರ ಪಾಕಿಸ್ತಾನ ಕಡೆಯಿಂದ ಭಾರಿ ಹಾನಿ ಮತ್ತು ಸಾವುನೋವು ಸಂಭವಿಸಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ಘಾಟ್ನಲ್ಲಿ ಭಯೋತ್ಪಾದಕ ಉಡಾವಣಾ ಪ್ಯಾಡ್ಗಳು ಮತ್ತು ಪೋಸ್ಟ್ಗಳನ್ನು ಭಾರತೀಯ ಸೇನೆಯು ಗುರಿಯಾಗಿಸಿತ್ತು.
ಪಿಒಕೆ ಯಲ್ಲಿ ಭಾರತೀಯ ಸೇನೆಯು ನಡೆಸಿದ ದಾಳಿಯಲ್ಲಿ ಕನಿಷ್ಠ ನಾಲ್ಕು ಭಯೋತ್ಪಾದಕ ಉಡಾವಣಾ ಪ್ಯಾಡ್ಗಳು, ನಾಲ್ಕರಿಂದ ಐದು ಪಾಕಿಸ್ತಾನಿ ಸೇನಾ ಸೈನಿಕರು ಮತ್ತು ಹಲವಾರು ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೋಯಿಬಾ ಭಯೋತ್ಪಾದಕರು ಸಹ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಸೇನಾಧಿಕಾರಿಗಳಿಂದ ಅದೇ ಅವಶೇಷಗಳ ಬಗ್ಗೆ ಅಧಿಕೃತ ಧೃಡಿಕಾರಣಕ್ಕಾಗಿ ಕಾಯುತ್ತಿದೆ ಎನ್ನಲಾಗಿದೆ. ಕುಪ್ವಾರಾದ ತಂಗ್ಧಾರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಸೇನೆಯು ಇಂದು ಕದನ ವಿರಾಮ ಉಲ್ಲಂಘಿಸಿ ಇಬ್ಬರು ಭಾರತೀಯ ಸೈನಿಕರು ಹುತಾತ್ಮರಾದ ನಂತರ ಒಬ್ಬ ನಾಗರಿಕನನ್ನು ಹತ್ಯೆಗೈಯ್ಯಲಾಯಿತು. ಈ ಹಿನ್ನಲೆಯಲ್ಲಿ ಭಾರತೀಯ ಸೇನೆ ಇದಕ್ಕೆ ಪ್ರತಿಕಾರವಾಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.
ಅಲ್ಲದೆ ಪಾಕಿಸ್ತಾನವು ಭಯೋತ್ಪಾದಕರನ್ನು ಭಾರತೀಯ ಭೂಪ್ರದೇಶಕ್ಕೆ ತಳ್ಳಲು ಅಲ್ಲಿನ ಸೇನೆಯು ಪ್ರಯತ್ನಿಸುತ್ತಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಭಾರತ ಈ ದಾಳಿಯನ್ನು ನಡೆಸಿದೆ. "ತಂಗ್ಧಾರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘನೆಯಲ್ಲಿ ಇಬ್ಬರು ಭಾರತೀಯ ಸೈನಿಕರು ಮತ್ತು ಓರ್ವ ನಾಗರಿಕರು ಸಾವನ್ನಪ್ಪಿದ ನಂತರ ಭಾರತೀಯ ಪಡೆಗಳು ಪಾಕಿಸ್ತಾನಕ್ಕೆ ಭಾರಿ ಹಾನಿ ಮತ್ತು ಸಾವುನೋವುಗಳನ್ನು ಉಂಟುಮಾಡಿದೆ" ಎಂದು ಭಾರತೀಯ ಸೇನೆಯ ವಕ್ತಾರರು ತಿಳಿಸಿದ್ದಾರೆ.
ಪಿಒಕೆ ನೀಲಂ ಘಾಟ್ನಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಲು ಭಾರತೀಯ ಸೇನೆಯು ಫಿರಂಗಿ ಬಂದೂಕುಗಳನ್ನು ಬಳಸಿತು. ಈ ಮಧ್ಯೆ, ಎಲ್ಒಸಿಯಲ್ಲಿ ಭಯೋತ್ಪಾದಕ ಉಡಾವಣಾ ಪ್ಯಾಡ್ಗಳು ಮತ್ತು ಶಿಬಿರಗಳ ಮೇಲೆ ಭಾರತೀಯ ಸೇನೆಯು ದಾಳಿ ನಡೆಸಿದ ಬೆನ್ನಲ್ಲೇ ರಾಜಸ್ಥಾನದ ಜೈಸಲ್ಮೇರ್ನ ಗಡಿ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಎಚ್ಚರಿಕೆ ವಹಿಸಿವೆ ಎಂದು ವರದಿಯಾಗಿದೆ.