ಭಾರತದಿಂದ ಯಶಸ್ವಿ ಅಗ್ನಿ-5 ಕ್ಷಿಪಣಿ ಪರೀಕ್ಷೆ

    

Last Updated : Jun 3, 2018, 05:09 PM IST
ಭಾರತದಿಂದ ಯಶಸ್ವಿ ಅಗ್ನಿ-5 ಕ್ಷಿಪಣಿ ಪರೀಕ್ಷೆ title=

ಬಾಲಸೋರ್: ಭಾನುವಾರದಂದು ಒಡಿಶಾದ ಡಾ. ಅಬ್ದುಲ್ ಕಲಾಮ್  ದ್ವೀಪ ಪ್ರದೇಶದಿಂದ 5,000 ಕಿ.ಮೀ.ಗಳ ಸ್ಟ್ರೈಕ್ ಸಾಮರ್ಥ್ಯವಿರುವ ದೇಶಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ -5 ಯಶಸ್ವಿಯಾಗಿ ಪರೀಕ್ಷಿಸಿದೆ.

ಇಂದು ಬೆಳಗ್ಗೆ 9.48 ಕ್ಕೆ ಬಂಗಾಳ ಕೊಲ್ಲಿಯ ಡಾ. ಅಬ್ದುಲ್ ಕಲಾಮ್ ದ್ವೀಪದಲ್ಲಿ ಐಟಿಆರ್ ನ ಲಾಂಚ್ ಪ್ಯಾಡ್ -4 ನಿಂದ ಮೊಬೈಲ್ ಲಾಂಚರ್ ಸಹಾಯದಿಂದ ಕ್ಷಿಪಣಿಗೆ ಪರಿಕ್ಷಣೆಗೆ ಚಾಲನೆ ನೀಡಲಾಯಿತು. ಇದು ಅಗ್ನಿ -5 ರ ಆರನೇ ಪ್ರಯೋಗವಾಗಿದ್ದು, ಪರೀಕ್ಷೆಯ ವೇಳೆ ಇದು ನಿಗದಿತ ಸಮಯದಲ್ಲಿ  ಕ್ಷಿಪಣಿ ತನ್ನ ಸಂಪೂರ್ಣ ದೂರವನ್ನು ತಲುಪಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. 

ಕ್ಷಿಪಣಿ ಹಾರಾಟದ ಕಾರ್ಯಕ್ಷಮತೆಯನ್ನು ರೇಡಾರ್ಗಳು, ಟ್ರ್ಯಾಕಿಂಗ್ ಮಷಿನ್  ಮತ್ತು ಅವಲೋಕನ ಕೇಂದ್ರಗಳ ಮೂಲಕ ಪರೀಕ್ಷಿಸಲಾಗುತ್ತಿತ್ತು ಹೇಳಲಾಗಿದೆ.ಅಗ್ನಿ -5 ಕ್ಷಿಪಣಿಯು ತಂತ್ರಜ್ಞಾನದಲ್ಲಿ ಇತರ ಸರಣಿ ಕ್ಷಿಪಣಿಗಿಂತಲೂ ಹೆಚ್ಚು ಮುಂದುವರೆದಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ತಿಳಿಸಿದೆ.

Trending News