ಒಂದೇ ದಿನದಲ್ಲಿ 9,996 COVID-19 ಪ್ರಕರಣ, 357 ಸಾವುಗಳೊಂದಿಗೆ ದಾಖಲೆ ಬರೆದ ಭಾರತ

ದೇಶದಲ್ಲಿ ಗುಣಪಡಿಸಿದ ಪ್ರಕರಣಗಳ ಸಂಖ್ಯೆ 1,41,029 ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 1,37,448 ರಷ್ಟಿದೆ.   

Last Updated : Jun 11, 2020, 01:45 PM IST
ಒಂದೇ ದಿನದಲ್ಲಿ 9,996 COVID-19 ಪ್ರಕರಣ, 357 ಸಾವುಗಳೊಂದಿಗೆ ದಾಖಲೆ ಬರೆದ ಭಾರತ title=

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು ಅತಿ ಹೆಚ್ಚು 9,996 ಹೊಸ ಕರೋನಾವೈರಸ್ (Coronavirus)  ಪ್ರಕರಣಗಳು ಮತ್ತು 357 COVID-19 ಸಾವುಗಳನ್ನು ದಾಖಲಿಸಿದೆ. ಈ ಮೂಲಕ ಒಟ್ಟು ಸೋಂಕುಗಳ ಸಂಖ್ಯೆ 2,86,579 ಕ್ಕೆ ತಲುಪಿದೆ ಮತ್ತು ಸಾವಿನ ಸಂಖ್ಯೆ 8,102 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. 

ಚೇತರಿಕೆ ದರ 49.21% ದಾಖಲಾಗಿದೆ. ಗುಣಪಡಿಸಿದ ಪ್ರಕರಣಗಳ ಸಂಖ್ಯೆ 1,41,029 ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 1,37,448 ರಷ್ಟಿದೆ. 

3,438 ಸಾವುಗಳು ಮತ್ತು 44,517 ಚೇತರಿಕೆ ಕಂಡವರು ಸೇರಿದಂತೆ ಒಟ್ಟು 94,041 ಪ್ರಕರಣಗಳಲ್ಲಿ ಮಹಾರಾಷ್ಟ್ರವು ದೇಶದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿದೆ. ಇದರ ನಂತರದ ಸ್ಥಾನದಲ್ಲಿ  ತಮಿಳುನಾಡು (36,841) ಪ್ರಕರಣಗಳನ್ನು ದಾಖಲಿಸಿದೆ.

ದೆಹಲಿಯಲ್ಲಿ ಒಟ್ಟು 32,810 ಪ್ರಕರಣಗಳಿವೆ, ಇದರಲ್ಲಿ 984 ಸಾವುಗಳು ಮತ್ತು 12,245 ಗುಣಮುಖರಾದವರೂ ಸೇರಿದ್ದಾರೆ. ಮುಂಬೈ ಮತ್ತು ದೆಹಲಿ ಎರಡೂ ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ 1,500 ಕ್ಕೂ ಹೆಚ್ಚು ಪ್ರಕರಣಕ್ಕೆ ಸಾಕ್ಷಿಯಾಗಿದೆ.

ಜಾಗತಿಕ   ಕೋವಿಡ್ -19 (Covid-19) ಪ್ರಕರಣಗಳು 7.3 ದಶಲಕ್ಷಕ್ಕೂ ಹೆಚ್ಚಾಗಿದೆ, ಆದರೆ ಸಾವುಗಳು 416,201 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

Trending News