ನೌಕಾದಳದ ಬಲವರ್ಧನೆಗೆ ರಫೇಲ್ - ಎಂ ಯುದ್ಧ ವಿಮಾನಕ್ಕೆ ಬೆಲೆಯ ಪ್ರಸ್ತಾವನೆ ಪಡೆದ ಭಾರತ: ಸಾಗರ ರಕ್ಷಣೆಯಿನ್ನು ಖಚಿತ

ಭಾರತದ ಮನವಿಗೆ ಫ್ರಾನ್ಸ್ ಲೆಟರ್ ಆಫ್ ಅಕ್ಸೆಪ್ಟೆನ್ಸ್ (ಅನುಮತಿ ಪತ್ರ) ನೀಡುವ ಮೂಲಕ ಪ್ರತಿಕ್ರಿಯಿಸಿದೆ. ಇದರಲ್ಲಿ ಭಾರತೀಯ ನೌಕಾಪಡೆಯ ಎರಡು ವಿಮಾನ ವಾಹಕ ನೌಕೆಗಳಲ್ಲಿ ಬಳಸುವ ಸಲುವಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗುವ 26 ರಫೇಲ್ ಎಂ ಯುದ್ಧ ವಿಮಾನಗಳ ಬೆಲೆ ಮತ್ತು ಇತರ ಮಾಹಿತಿಗಳನ್ನು ಒಳಗೊಂಡಿದೆ. ಇದರೊಡನೆ, ಎಂಡಿಎಲ್ ಭಾರತೀಯ ನೌಕಾಪಡೆಗೆ ಹೆಚ್ಚುವರಿ ಮೂರು ಸ್ಕಾರ್ಪೀನ್ ವರ್ಗದ ಸಬ್‌ಮರೀನ್ ನಿರ್ಮಿಸಲು ವಾಣಿಜ್ಯಿಕ ಪ್ರಸ್ತಾವನೆಯನ್ನು ಸಲ್ಲಿಸಿದೆ.

Written by - Girish Linganna | Last Updated : Dec 24, 2023, 01:27 PM IST
  • ರಫೇಲ್ ಎಂ ಒಂದು ಗಮನಾರ್ಹ ಯುದ್ಧ ವಿಮಾನ
  • ಅವಳಿ ಇಂಜಿನ್‌ಗಳು ಮತ್ತು ಒಂಟಿ ಆಸನದ ರಚನೆಯನ್ನು ಹೊಂದಿದೆ.
  • ಇದು ಕ್ಷಿಪ್ರ ಪ್ರತಿಕ್ರಿಯೆ, ವಾಯು ರಕ್ಷಣೆ, ವಾಯು ಗಸ್ತು, ಭೂ ಬೆಂಬಲ, ಹಾಗೂ ವಿಚಕ್ಷಣೆ ಸೇರಿದಂತೆ ಹಲವು ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ.
ನೌಕಾದಳದ ಬಲವರ್ಧನೆಗೆ ರಫೇಲ್ - ಎಂ ಯುದ್ಧ ವಿಮಾನಕ್ಕೆ ಬೆಲೆಯ ಪ್ರಸ್ತಾವನೆ ಪಡೆದ ಭಾರತ: ಸಾಗರ ರಕ್ಷಣೆಯಿನ್ನು ಖಚಿತ title=

ಭಾರತ ಇತ್ತೀಚೆಗೆ ವಿಮಾನ ವಾಹಕ ನೌಕೆಯಿಂದ ಕಾರ್ಯಾಚರಿಸಬಲ್ಲ 26 ರಫೇಲ್ ಎಂ ಯುದ್ಧ ವಿಮಾನದ ಖರೀದಿಗಾಗಿ ಮತ್ತು ಮೂರು ಹೆಚ್ಚುವರಿ ಸ್ಕಾರ್ಪೀನ್ ವರ್ಗದ ಜಲಾಂತರ್ಗಾಮಿ ಖರೀದಿಗಾಗಿ ಫ್ರಾನ್ಸ್‌ನಿಂದ ಬೆಲೆಯ ಪ್ರಸ್ತಾವನೆ ಪಡೆದುಕೊಂಡಿದೆ. ರಫೇಲ್ ಎಂ ಯುದ್ಧ ವಿಮಾನದ ಖರೀದಿ ಪ್ರಕ್ರಿಯೆ ಸರ್ಕಾರಗಳ ನಡುವಿನ ಒಪ್ಪಂದದ ರೂಪದಲ್ಲಿ ನೆರವೇರಲಿದೆ. ಆದರೆ ಜಲಾಂತರ್ಗಾಮಿಗಳ (ಸಬ್‌ಮರೀನ್) ಖರೀದಿ ಈ ಹಿಂದಿನ ನೇವಲ್ ಗ್ರೂಪ್ ಜೊತೆಗಿನ ಒಪ್ಪಂದದ ವಿಸ್ತರಿತ ಒಪ್ಪಂದವಾಗಿದೆ. ಈ ಒಪ್ಪಂದದಡಿ ಈಗಾಗಲೇ ಮುಂಬೈನ ಮಡಗಾಂವ್ ಡಾಕ್‌ಯಾರ್ಡ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್) ಆರು ಸಬ್‌ಮರೀನ್‌ಗಳನ್ನು ನಿರ್ಮಿಸಿದೆ.

ಭಾರತದ ಮನವಿಗೆ ಫ್ರಾನ್ಸ್ ಲೆಟರ್ ಆಫ್ ಅಕ್ಸೆಪ್ಟೆನ್ಸ್ (ಅನುಮತಿ ಪತ್ರ) ನೀಡುವ ಮೂಲಕ ಪ್ರತಿಕ್ರಿಯಿಸಿದೆ. ಇದರಲ್ಲಿ ಭಾರತೀಯ ನೌಕಾಪಡೆಯ ಎರಡು ವಿಮಾನ ವಾಹಕ ನೌಕೆಗಳಲ್ಲಿ ಬಳಸುವ ಸಲುವಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗುವ 26 ರಫೇಲ್ ಎಂ ಯುದ್ಧ ವಿಮಾನಗಳ ಬೆಲೆ ಮತ್ತು ಇತರ ಮಾಹಿತಿಗಳನ್ನು ಒಳಗೊಂಡಿದೆ. ಇದರೊಡನೆ, ಎಂಡಿಎಲ್ ಭಾರತೀಯ ನೌಕಾಪಡೆಗೆ ಹೆಚ್ಚುವರಿ ಮೂರು ಸ್ಕಾರ್ಪೀನ್ ವರ್ಗದ ಸಬ್‌ಮರೀನ್ ನಿರ್ಮಿಸಲು ವಾಣಿಜ್ಯಿಕ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಬಿಡ್ ಪಡೆದುಕೊಂಡ ಬಳಿಕ, ರಫೇಲ್ ಯುದ್ಧ ವಿಮಾನದ ಔಪಚಾರಿಕ ಖರೀದಿ ಪ್ರಕ್ರಿಯೆ ಆರಂಭಗೊಂಡಿದ್ದು, ಇದಕ್ಕಾಗಿ ಖರ್ಚು ವೆಚ್ಚ ಸಮಿತಿಯನ್ನು ಸ್ಥಾಪಿಸಲಾಗುತ್ತದೆಯೇ ಎಂದು ಇನ್ನೂ ಖಚಿತವಾಗಿಲ್ಲ. ಈ ಕುರಿತು ಮಾಹಿತಿ ನೀಡಿದ ರಕ್ಷಣಾ ಸಚಿವಾಲಯ, ಇತರ ದೇಶಗಳ ವಿಮಾನ ಖರೀದಿಗಾಗಿ ಬೆಲೆಯ ಹೋಲಿಕೆಯೂ ಸೇರಿದಂತೆ, ಇತರ ಅಂಶಗಳನ್ನೂ ಪರಿಗಣಿಸಲಾಗುತ್ತದೆ ಎಂದಿದೆ.

ಜುಲೈ 13ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದ ರಕ್ಷಣಾ ಖರೀದಿ ಸಮಿತಿ, ಪ್ರಧಾನಿ ಮೋದಿಯವರೊಡನೆ ಚರ್ಚಿಸಿ, ಫ್ರಾನ್ಸ್‌ನಿಂದ 26 ರಫೇಲ್ ಎಂ ಯುದ್ಧ ವಿಮಾನದ ಖರೀದಿಗೆ ಮತ್ತು ಮೂರು ಸ್ಕಾರ್ಪೀನ್ ವರ್ಗದ ಸಬ್‌ಮರೀನ್ ಖರೀದಿಗೆ ಅನುಮತಿ ಸೂಚಿಸಿದೆ.

ಇದನ್ನೂ ಓದಿ- ಮೋದಿ ಆಡಳಿತದಲ್ಲಿ ಭಾರತ : ಬದಲಾಗುತ್ತಿರುವ ರಾಷ್ಟ್ರದಲ್ಲಿ ನಾಯಕತ್ವ, ಪ್ರಗತಿಗಳೊಡನೆ ವಿವಾದಗಳ ಹುತ್ತ

ರಫೇಲ್ ಒಪ್ಪಂದದಲ್ಲಿ 22 ಒಂಟಿ ಆಸನಗಳ ರಫೇಲ್ ಎಂ ಯುದ್ಧ ವಿಮಾನಗಳು ಮತ್ತು ನಾಲ್ಕು ಅವಳಿ ಆಸನಗಳ ರಫೇಲ್ ತರಬೇತಿ ಯುದ್ಧ ವಿಮಾನಗಳ ಖರೀದಿ ಸೇರಿದೆ. ಈ ತರಬೇತಿ ವಿಮಾನಗಳು ವಿಮಾನ ವಾಹಕ ನೌಕೆಯಲ್ಲಿ ಕಾರ್ಯಾಚರಿಸಲು ಪೂರಕವಾಗಿಲ್ಲ. ರಫೇಲ್ ಎಂ ಆವೃತ್ತಿ ನೌಕಾಪಡೆಯ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ವಿಮಾನ ವಾಹಕ ನೌಕೆಯಲ್ಲಿ ಕಾರ್ಯಾಚರಿಸುವ ಸಲುವಾಗಿ ಶಕ್ತಿಯುತ ಲ್ಯಾಂಡಿಂಗ್ ಗೇರ್‌ಗಳನ್ನು ಹೊಂದಿದೆ. ರಫೇಲ್ ಯುದ್ಧ ವಿಮಾನ ಎರಡು ಆವೃತ್ತಿಗಳಲ್ಲಿದ್ದು, ರಫೇಲ್ ಸಿ ಆವೃತ್ತಿ ಭಾರತೀಯ ವಾಯುಪಡೆಗೆ ಮತ್ತು ಎರಡು ಆಸನಗಳ ರಫೇಲ್ ಬಿ ತರಬೇತಿ ಪ್ರಕ್ರಿಯೆಗೆ ಪೂರಕವಾಗಿದೆ.

ರಫೇಲ್ ಯುದ್ಧ ವಿಮಾನದ ಉತ್ಪಾದಕ ಸಂಸ್ಥೆಯಾದ ಡಸಾಲ್ಟ್ ಏವಿಯೇಷನ್ ಯುದ್ಧ ವಿಮಾನದ ಎಲ್ಲ ಆವೃತ್ತಿಗಳಲ್ಲಿರುವ ಏರ್ ಫ್ರೇಮ್‌ಗಳಲ್ಲಿರುವ ಹೋಲಿಕೆಗಳನ್ನು ವಿವರಿಸಿದ್ದು, ಎಲ್ಲ ಆವೃತ್ತಿಗಳಲ್ಲೂ ನಿರಂತರತೆ ಮತ್ತು ದಕ್ಷತೆ ಹೊಂದಿರುವುದನ್ನು ಸೂಚಿಸುತ್ತದೆ. ಪ್ರಸ್ತುತ ಭಾರತೀಯ ವಾಯುಪಡೆಯ ಬಳಿ 36 ರಫೇಲ್ ಯುದ್ಧ ವಿಮಾನಗಳಿದ್ದು (ರಫೇಲ್ ಸಿ) ವಿಮಾನಗಳನ್ನು ಬಳಸುತ್ತಿದೆ. ಇನ್ನು ರಫೇಲ್ ಎಂ ಯುದ್ಧ ವಿಮಾನಗಳು ವಿಶಾಖಪಟ್ಟಣಂ ನಲ್ಲಿರುವ ಐಎನ್ಎಸ್ ವಿಕ್ರಾಂತ್‌ನಲ್ಲಿ ನೆಲೆಯಾಗುವ ನಿರೀಕ್ಷೆಗಳಿವೆ. ಮಿಲಿಟರಿ ವೈಮಾನಿಕ ತಜ್ಞರು ರಫೇಲ್ ಎಂ ಯುದ್ಧ ವಿಮಾನವನ್ನು ಜಾಗತಿಕವಾಗಿ ಅತ್ಯಂತ ಆಧುನಿಕ ಯುದ್ಧ ವಿಮಾನಗಳಲ್ಲಿ ಒಂದು ಎಂದು ಪರಿಗಣಿಸಿದ್ದಾರೆ. ಇದು ಶತ್ರುಗಳ ಮೇಲೆ ದಾಳಿ ನಡೆಸುವ, ವಾಯು ರಕ್ಷಣೆ ಒದಗಿಸುವ ಮತ್ತು ವಿಚಕ್ಷಣಾ ಕಾರ್ಯಾಚರಣೆ‌ ನಡೆಸುವ ಸಾಮರ್ಥ್ಯಗಳನ್ನು ಹೊಂದಿದೆ.

ರಕ್ಷಣಾ ಅಧಿಕಾರಿಗಳ ಪ್ರಕಾರ, ಭಾರತೀಯ ವಾಯುಪಡೆಯ ಪ್ರಸ್ತುತ 36 ರಫೇಲ್ ಯುದ್ಧ ವಿಮಾನಗಳನ್ನು ಕಾರ್ಯಾಚರಿಸುತ್ತಿದ್ದು, ನೌಕಾಪಡೆ ಬಳಸಲಿರುವ ರಫೇಲ್ ಎಂ ಯುದ್ಧ ವಿಮಾನ ಮತ್ತು ಇದರಲ್ಲಿರುವ ಬಿಡಿಭಾಗಗಳು 80% ಹೋಲಿಕೆ ಹೊಂದಿವೆ. ಈ ಹೋಲಿಕೆಗಳು ತರಬೇತಿ ಮತ್ತು ನಿರ್ವಹಣಾ ವೆಚ್ಚದಲ್ಲಿ ಸಾಕಷ್ಟು ಉಳಿತಾಯ ಮಾಡಲು ನೆರವಾಗುವ ನಿರೀಕ್ಷೆಗಳಿವೆ.

ರಫೇಲ್ ಎಂ ಈಗಾಗಲೇ ಹಲವಾರು ವ್ಯಾಪಕ ಸಾಮರ್ಥ್ಯ ಪರೀಕ್ಷಾ ಪ್ರಯೋಗಗಳಿಗೆ ಒಳಗಾಗಿದ್ದು, ಇದರಲ್ಲಿ ಸ್ಟ್ರೋಬಾರ್ ಎಂದು ಕರೆಯಲಾಗುವ (ಶಾರ್ಟ್ ಟೇಕಾಫ್ ಬಟ್ ಅರೆಸ್ಟೆಡ್ ರಿಕವರಿ - STROBAR) ಸ್ಕೈ ಜಂಪ್ ರಾಂಪ್‌ನಿಂದ ಶಾರ್ಟ್ ಟೇಕಾಫ್ ಸಹ ಸೇರಿದೆ. ಈ ತಂತ್ರ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್‌ನಂತಹ ವಿಮಾನ ವಾಹಕ ನೌಕೆಗಳಿಗೆ ಸೂಕ್ತವಾಗಿದೆ.

ಇದನ್ನೂ ಓದಿ- ಕೆಂಪು ಸಮುದ್ರದ ಕ್ಷೋಭೆ: ಭೌಗೋಳಿಕ ರಾಜಕಾರಣದ ಪರಿಣಾಮವಾಗಿ ನಲುಗುತ್ತಿದೆ ಜಾಗತಿಕ ಪೂರೈಕೆ ಸರಪಳಿ

ರಫೇಲ್ ಎಂ ಒಂದು ಗಮನಾರ್ಹ ಯುದ್ಧ ವಿಮಾನವಾಗಿದ್ದು, ಅವಳಿ ಇಂಜಿನ್‌ಗಳು ಮತ್ತು ಒಂಟಿ ಆಸನದ ರಚನೆಯನ್ನು ಹೊಂದಿದೆ. ಇದು ಕ್ಷಿಪ್ರ ಪ್ರತಿಕ್ರಿಯೆ, ವಾಯು ರಕ್ಷಣೆ, ವಾಯು ಗಸ್ತು, ಭೂ ಬೆಂಬಲ, ಹಾಗೂ ವಿಚಕ್ಷಣೆ ಸೇರಿದಂತೆ ಹಲವು ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ. ಇದು ಗರಿಷ್ಠ 50,000 ಅಡಿಗಳ ಎತ್ತರದಲ್ಲಿ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿದ್ದು, ಇದು ಶತ್ರು ಪ್ರದೇಶಗಳೊಳಗೆ ದಾಳಿ, ಪವರ್ ಪ್ರೊಜೆಕ್ಷನ್, ಮತ್ತು ಅಣ್ವಸ್ತ್ರ ನಿರೋಧಕ ಸೇರಿದಂತೆ, ಹಲವು ಸಂಕೀರ್ಣ ಸನ್ನಿವೇಶಗಳಲ್ಲೂ ಸಮರ್ಥವಾಗಿ ಕಾರ್ಯಾಚರಿಸಬಲ್ಲದು.

13 ಬಾಹ್ಯ ಹಾರ್ಡ್ ಪಾಯಿಂಟ್‌ಗಳನ್ನು (ಆಯುಧ ಸಂಗ್ರಹಣಾ ಸ್ಥಳಗಳು) ಹೊಂದಿರುವ ರಫೇಲ್ ಎಂ ಯುದ್ಧ ವಿಮಾನ ವಿವಿಧ ರೀತಿಯ ಆಯುಧಗಳು, ಇಂಧನ ಟ್ಯಾಂಕ್‌ಗಳು, 9.5 ಟನ್ ತನಕ ತೂಕ ಹೊಂದಿರುವ ಪಾಡ್‌ಗಳ ಸಂಯೋಜನೆಯನ್ನು ಒಯ್ಯಬಲ್ಲದು. ಇದು ಕೆಳ ಹಂತದ, ಅತ್ಯಂತ ವೇಗದ ಕುಶಲ ಚಲನೆಯನ್ನು ಹೊಂದಿದ್ದು, ಶತ್ರುಗಳ ರೇಡಾರ್ ಕಣ್ಣಿಗೆ ಬೀಳದಂತೆ ಕಾರ್ಯಾಚರಿಸುವ ಸ್ಟೆಲ್ತ್ ಸಾಮರ್ಥ್ಯವನ್ನು ಹೊಂದಿದೆ.

ಹಿರಿಯ ನೌಕಾಪಡೆಯ ಅಧಿಕಾರಿಯೊಬ್ಬರ ಪ್ರಕಾರ, ನೌಕಾಪಡೆಯ ವಿಮಾನ ವಾಹಕ ನೌಕೆಗಳಲ್ಲಿ ಕಾರ್ಯಾಚರಿಸುವ ಈ ಯುದ್ಧ ವಿಮಾನಗಳು ನೌಕಾಪಡೆಯ ಕಣ್ಣುಗಳು, ಕಿವಿಗಳು ಮತ್ತು ಆತ್ಮಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇವುಗಳು ವಿಮಾನ ವಾಹಕ ಬಳಗದ ಸುರಕ್ಷತೆಯನ್ನೂ ಖಾತ್ರಿಪಡಿಸುವ ಸಾಮರ್ಥ್ಯಗಳನ್ನು ಹೊಂದಿವೆ. 26 ರಫೇಲ್ ಎಂ ಯುದ್ಧ ವಿಮಾನಗಳ ಸೇರ್ಪಡೆಯಿಂದ, ಭಾರತೀಯ ನೌಕಾಪಡೆಯ ಸಾಗರ ರಕ್ಷಣಾ ಗುರಿಗಳನ್ನು ಸಾಧಿಸಲು ಅನುಕೂಲವಾಗಲಿದೆ.

ಒಟ್ಟಾರೆಯಾಗಿ, ಫ್ರಾನ್ಸ್‌ನಿಂದ ವಿಮಾನ ವಾಹಕ ನೌಕೆಗಳ ಮೇಲಿಂದ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿರುವ 26 ರಫೇಲ್ ಎಂ ಯುದ್ಧ ವಿಮಾನಗಳ ಮತ್ತು ಮೂರು ಹೆಚ್ಚುವರಿ ಸ್ಕಾರ್ಪೀನ್ ವರ್ಗದ ಜಲಾಂತರ್ಗಾಮಿಗಳ ಖರೀದಿಯಿಂದ ದಾಳಿಯ ಉದ್ದೇಶ, ವಾಯು ರಕ್ಷಣೆ ಮತ್ತು ವಿಚಕ್ಷಣಾ ಉದ್ದೇಶಗಳಿಗೆ ಪುಷ್ಟಿ ನೀಡಲಿವೆ. ರಫೇಲ್ ಎಂ ಯುದ್ಧ ವಿಮಾನಗಳು ಜಗತ್ತಿನ ಅತ್ಯಾಧುನಿಕ ಯುದ್ಧ ವಿಮಾನಗಳಲ್ಲಿ ಒಂದಾಗಿದ್ದು, ಭಾರತೀಯ ನೌಕಾಪಡೆಗೆ ಇವುಗಳ ಸೇರ್ಪಡೆ ನೌಕಾಪಡೆಗೆ ತನ್ನ ಗುರಿಗಳನ್ನು ಸಾಧಿಸಲು ನೆರವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News