ಅಗರ್ತಲಾ: ತ್ರಿಪುರಾದ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ರಾಜ್ಯದ 60 ಕ್ಷೇತ್ರಗಳ ಚುನಾವಣೆಯ ಪೈಕಿ 59ಕ್ಷೇತ್ರಗಳ ಮತಗಳನ್ನು ಇಂದು ಎಣಿಸಲಾಗುತ್ತಿದೆ. ಚರೂಲಂ ಕ್ಷೇತ್ರದ ಸಿಪಿಐ (ಎಮ್) ಅಭ್ಯರ್ಥಿ ರಾಮಂದ್ರ ನಾರಾಯಣ್ ದೇಬರ್ಮ ಅವರ ಮರಣದ ಕಾರಣ ಈ ಕ್ಷೇತ್ರಕ್ಕೆ ಮಾರ್ಚ್ 12 ರಂದು ಮತ ಚಲಾಯಿಸಲಾಗುವುದು. ತ್ರಿಪುರ ಅಸೆಂಬ್ಲಿ ಚುನಾವಣೆಗಳ ಆರಂಭಿಕ ಪ್ರವೃತ್ತಿಗಳು ಪ್ರಾರಂಭವಾಗಿದ್ದು, ಮಧ್ಯಾಹ್ನದ ನಂತರ ಫಲಿತಾಂಶಗಳು ಸ್ಪಷ್ಟವಾಗಿ ಹೊರಬೀಳಲಿದೆ. ಪ್ರಸ್ತುತ 57 ಸ್ಥಾನಗಳ ಪೈಕಿ 27 ಸ್ಥಾನಗಳಲ್ಲಿ ಸಿಪಿಎಂ ಹಾಗೂ 28 ಸ್ಥಾನಗಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 2 ಸ್ಥಾನಗಳಲ್ಲಿ ಮುಂದಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕ ಬೃಂದಾ ಕಾರತ್ ಅವರು ಸಂತೋಷವನ್ನು ವ್ಯಕ್ತಪಡಿಸಿದರು. 'ನಮ್ಮ ಬೆಳವಣಿಗೆ ಇನ್ನಷ್ಟು ಹೆಚ್ಚಾಗುತ್ತದೆ ಎಂಬ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ' ಎಂದು ಅವರು ಹೇಳಿದರು. ಮತ್ತೊಂದೆಡೆ, ಬಿಜೆಪಿ ಪ್ರವೃತ್ತಿಯು ಪ್ರೋತ್ಸಾಹದಾಯಕವಾಗಿದೆ ಎಂದು ಹೇಳಿದರು. ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಅವರು, "ನಾವು ತುಂಬಾ ಆಶಾವಾದಿಯಾಗಿದ್ದೇವೆ ಮತ್ತು ತ್ರಿಪುರದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ನಾವು ಖಚಿತವಾಗಿ ಭಾವಿಸುತ್ತೇವೆ" ಎಂದು ಹೇಳಿದರು.
We are very confident, let more rounds of counting complete, our leads are going to get much bigger: Brinda Karat,CPI on #TripuraElection2018 pic.twitter.com/kacKtClpnx
— ANI (@ANI) March 3, 2018
Trends are encouraging, I am hopeful and confident that BJP will form the Govt in Tripura: Himanta Biswa Sarma,BJP #TripuraElection2018 pic.twitter.com/NQFaGsNwZ2
— ANI (@ANI) March 3, 2018
ತ್ರಿಪುರದಲ್ಲಿ ಫೆಬ್ರವರಿ 18 ರಂದು ವಿಧಾನಸಭೆ ಚುನಾವಣೆಯಲ್ಲಿ 2,536,589 ಮತದಾರರ ಪೈಕಿ ಶೇ. 75 ರಷ್ಟು ಮತದಾನ ನಡೆದಿದೆ. ಈ ಬಾರಿ ಶೇಕಡಾವಾರು ಮತದಾನ ಕಳೆದ ಎರಡು ವಿಧಾನಸಭೆ ಚುನಾವಣೆಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ. ತ್ರಿಪುರಾದಲ್ಲಿ 2008 ಮತ್ತು 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ.91 ಮತ್ತು ಶೇ. 92 ಮತದಾನವಾಗಿತ್ತು.