ಪ್ರಧಾನಿ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿಗೆ ಸೋಲು

ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕ್ಷೇತ್ರದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ, ಇದೇ ಮೊದಲ ಬಾರಿಗೆ 10 ವರ್ಷಗಳ ನಂತರ ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ. 

Last Updated : Dec 6, 2020, 03:49 PM IST
ಪ್ರಧಾನಿ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿಗೆ ಸೋಲು title=
file photo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕ್ಷೇತ್ರದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ, ಇದೇ ಮೊದಲ ಬಾರಿಗೆ 10 ವರ್ಷಗಳ ನಂತರ ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ. 

ಮೋದಿ ಜಿ ಸೈನ್ಯ ಎಂದ ಸಿಎಂ ಯೋಗಿ ಹೇಳಿಕೆಗೆ ವರದಿ ಕೇಳಿದ ಚುನಾವಣಾ ಆಯೋಗ

ಎರಡೂ ಸ್ಥಾನಗಳಲ್ಲಿ ಒಂದು ಶಿಕ್ಷಕರಿಗೆ ಮತ್ತು ಇನ್ನೊಂದು ಪದವೀಧರರಿಗೆ ಮೀಸಲಾಗಿದೆ. ಈ ಎರಡು ಸ್ಥಾನಗಳು ಈಗ ಸಮಾಜವಾದಿ ಪಕ್ಷದ ಪಾಲಾಗಿವೆ.ಶನಿವಾರ, ಸಮಾಜವಾದಿ ಪಕ್ಷದ ಅಶುತೋಷ್ ಸಿನ್ಹಾ ಅವರು ತಮ್ಮ ಪಕ್ಷದ ಸಹೋದ್ಯೋಗಿ ಲಾಲ್ ಬಿಹಾರಿ ಯಾದವ್ ಅವರಿಂದ ವಾರಣಾಸಿ ವಿಭಾಗದ ಪದವೀಧರರ ಶಿಕ್ಷಕರ ಕ್ಷೇತ್ರವನ್ನು ಗೆದ್ದರು.

ಎರಡು ವರ್ಷದ ಬಿಜೆಪಿ ಅಧಿಕಾರವಧಿಯಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ: ಯೋಗಿ ರಿಪೋರ್ಟ್ ಕಾರ್ಡ್

ಉತ್ತರಪ್ರದೇಶದ ವಿಧಾನ ಪರಿಷತ್ತು -ಮಂಗಳವಾರ 11 ಸ್ಥಾನಗಳನ್ನು ಹೊಂದಿದೆ. ಅದರಲ್ಲಿ ಐದು ಕಾಯ್ದಿರಿಸಿದ ಪದವೀಧರರು ಮತ್ತು ಆರು ಶಿಕ್ಷಕರನ್ನು ಹೊಂದಿದೆ. ಒಟ್ಟು 199 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು ಎನ್ನಲಾಗಿದೆ."ಇದು ದೊಡ್ಡ ಗೆಲುವು. ನಮ್ಮ ಫಲಿತಾಂಶದಿಂದ ನನಗೆ ಸಂತೋಷವಾಗಿದೆ" ಎಂದು ವಾರಣಾಸಿ ವಿಭಾಗ ಶಿಕ್ಷಕರ ಕ್ಷೇತ್ರದ ಸಮಾಜವಾದಿ ಅಭ್ಯರ್ಥಿ ಲಾಲ್ ಬಿಹಾರಿ ಯಾದವ್ ಹೇಳಿದ್ದಾರೆ.

ಉತ್ತರಪ್ರದೇಶವು ದ್ವಿಪಕ್ಷೀಯ ಶಾಸಕಾಂಗ, ಎರಡು ಸದನಗಳನ್ನು ಹೊಂದಿರುವ ಭಾರತದ ಆರು ರಾಜ್ಯಗಳಲ್ಲಿ ಒಂದಾಗಿದೆ.ವಿಧಾನ ಪರಿಷತ್ತಿನಲ್ಲಿ 100 ಸದಸ್ಯರಿದ್ದಾರೆ.
 

Trending News