ಮುಂದಿನ 48 ಗಂಟೆಗಳಲ್ಲಿ ಬಿಹಾರದಲ್ಲಿ ಭಾರೀ ಮಳೆ; 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಮಧ್ಯ ಬಿಹಾರ ಮತ್ತು ರಾಜಧಾನಿ ಪಾಟ್ನಾದ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.   

Last Updated : Oct 2, 2019, 05:38 PM IST
ಮುಂದಿನ 48 ಗಂಟೆಗಳಲ್ಲಿ ಬಿಹಾರದಲ್ಲಿ ಭಾರೀ ಮಳೆ; 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ title=

ನವದೆಹಲಿ: ಮುಂದಿನ 48 ಗಂಟೆಗಳಲ್ಲಿ ಬಿಹಾರದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಎಚ್ಚರಿಕೆ ನೀಡಿದೆ. 

ಮಧ್ಯ ಬಿಹಾರ ಮತ್ತು ರಾಜಧಾನಿ ಪಾಟ್ನಾದ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ. 

ಬಿಹಾರದ ನೈರುತ್ಯ ಜಿಲ್ಲೆಗಳಲ್ಲಿ ಅಕ್ಟೋಬರ್ 3 ರಂದು ಮಳೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಆಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್ 3 ಮತ್ತು 4 ರವರೆಗೆ ಪಾಟ್ನಾ, ವೈಶಾಲಿ, ಬೆಗುಸರಾಯ್ ಮತ್ತು ಖಗೇರಿಯಾ ಜಿಲ್ಲೆಗಳಲ್ಲಿ ಕಿತ್ತಳೆ ಎಚ್ಚರಿಕೆ ನೀಡಲಾಗಿದೆ.

ಇದೇ ವೇಳೆ, ಪಾಟ್ನಾ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಸರ್ಕಾರದ ನಿರ್ಲಕ್ಷದಿಂದಾಗಿ ಪ್ರವಾಹದಂತಹ ಪರಿಸ್ಥಿತಿ ಮಿತಿಮೀರಿದೆ.  ಇದು ಸರ್ಕಾರದ ವೈಫಲ್ಯ ಮತ್ತು ಪಾಟ್ನಾದಲ್ಲಿ ನೀರು ಹರಿಯುವುದಕ್ಕೆ ನಿರಂತರ ಮಳೆಯ ಆರೋಪ ಮಾಡುವುದು ತಪ್ಪು ಎಂದು ಬಿಜೆಪಿ ಸಂಸದ ಗಿರರಾಜ್ ಸಿಂಗ್ ಹೇಳಿದ್ದಾರೆ.

ಬಿಹಾರದಲ್ಲಿ ಮಳೆ ಸಂಬಂಧಿತ ಘಟನೆಗಳಿಂದ ಇದುವರೆಗೆ 42 ಜನರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಪಾಟ್ನಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Trending News