IIT Scientists Prediction Covid-19 Second Wave: ದೇಶದಲ್ಲಿ ಕೊರೊನಾ ಎರಡನೇ ಅಲೆಯ ಪೀಕ್ ಯಾವಾಗ? ವಿಜ್ಞಾನಿಗಳು ಹೇಳಿದ್ದೇನು?

IIT Scientists Prediction Covid-19 Second Wave: IIT ವಿಜ್ಞಾನಿಗಳು ಸಿದ್ಧಪಡಿಸಿರುವ ಗಣಿತದ ಮಾದರಿಯ ಪ್ರಕಾರ ಬರುವ ಮೇ ಅಂತ್ಯದ ವೇಳೆಗೆ ಕೊರೊನಾ ಸೋಂಕಿನ ವೇಗ ಶೀಘ್ರ ಕಡಿಮೆಯಾಗಲಿದೆ ಎನ್ನಲಾಗಿದೆ.  

Written by - Nitin Tabib | Last Updated : Apr 23, 2021, 07:28 PM IST
  • ಕೊರೊನಾ ವೈರಸ್ ನ ಎರಡನೆಯ ಅಲೆಯ ಗರಿಷ್ಠ ಮಟ್ಟ ಯಾವಾಗ?
  • ಮೇ 11 ರಿಂದ ಮೇ 15ರ ಮಧ್ಯೆ ಎರಡನೇ ಅಲೆ ಗರಿಷ್ಟ ಮಟ್ಟಕ್ಕೆ ತಲುಪಲಿದೆ.
  • ಎಷ್ಟು ವೇಗದಲ್ಲಿ ಏರಿಕೆ, ಅಷ್ಟೇ ವೇಗದಲ್ಲಿ ಇಳಿಕೆ ಕೂಡ ಸಾಧ್ಯ ಎಂದ ವಿಜ್ಞಾನಿಗಳು.
IIT Scientists Prediction Covid-19 Second Wave: ದೇಶದಲ್ಲಿ ಕೊರೊನಾ ಎರಡನೇ ಅಲೆಯ ಪೀಕ್ ಯಾವಾಗ? ವಿಜ್ಞಾನಿಗಳು ಹೇಳಿದ್ದೇನು? title=
IIT Scientists Prediction Covid-19 Second Wave (File Photo)

ನವದೆಹಲಿ: IIT Scientists Prediction Covid-19 Second Wave - ದೇಶದಲ್ಲಿ  ಕರೋನಾ ವೈರಸ್ (Covid-19) ನ ಎರಡನೇ ಅಲೆ (Coronavirus Second Wave) ಮೇ 11 ರಿಂದ 15 ರವರೆಗೆ ತನ್ನ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಈ ಸಮಯದಲ್ಲಿ ದೇಶದಲ್ಲಿ 33 ರಿಂದ 35 ಲಕ್ಷ ಸಕ್ರಿಯ ಪ್ರಕರಣಗಳು ವರದಿಯಾಗಳಿವೆ. ಐಐಟಿ ವಿಜ್ಞಾನಿಗಳು ಸಿದ್ಧಪಡಿಸಿದ ಗಣಿತದ ಮಾದರಿಯನ್ನು ಆಧರಿಸಿದ ವರದಿಯ ಪ್ರಕಾರ, ಮೇ ಅಂತ್ಯದಲ್ಲಿ, ಸೋಂಕಿನ ವೇಗವು ಶೀಘ್ರವಾಗಿ ಕಡಿಮೆಯಾಗುತ್ತದೆ. ಶುಕ್ರವಾರ, ದೇಶದಲ್ಲಿ 3.32 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದರೆ, ಸೋಂಕಿನಿಂದ 2,263 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ, ದೇಶದಲ್ಲಿ 24.28 ಲಕ್ಷ ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳಲ್ಲಿ 10 ಲಕ್ಷ ಪ್ರಕರಣಗಳ ಹೆಚ್ಚಳವಾಗಬಹುದು ಎಂದು ವರದಿ ಹೇಳಿದೆ. ಐಐಟಿ ಕಾನ್ಪುರ್ ಮತ್ತು ಹೈದರಾಬಾದ್‌ನ ವಿಜ್ಞಾನಿಗಳು ತಮ್ಮ ಮಾದರಿಗಾಗಿ SUTRA (Susceptible, Undetected, Tested (positive), and Removed Approach)ಸೂತ್ರವನ್ನು ಅನ್ವಯಿಸಿ ಈ ನಿಷ್ಕರ್ಷಕ್ಕೆ ತಲುಪಿದ್ದಾರೆ.

ಈ ರಾಜ್ಯಗಳಲ್ಲಿ ಹೆಚ್ಚು ಪ್ರಕೋಪ ಕಾಣಲು ಸಿಗಲಿದೆ
ವೈಜ್ಞಾನಿಕರು ಹೇಳುವ ಪ್ರಕಾರ ದೆಹಲಿ, ಹರಿಯಾಣಾ, ರಾಜಸ್ಥಾನ್, ತೆಲಂಗಾಣ ರಾಜ್ಯಗಳು ಹೊಸ ಪ್ರಕರಣಗಳ ಸಂದರ್ಭದಲ್ಲಿ ಏಪ್ರಿಲ್ 25 ರಿಂದ ಏಪ್ರಿಲ್ 30 ರಮಧ್ಯೆ ತನ್ನ ಗರಿಷ್ಟ ಮಟ್ಟವನ್ನು ತಲುಪಲಿವೆ ಎಂದಿದ್ದಾರೆ. ಕೊವಿಡ್ ಎರಡನೇ ಅಲೆಯ ವಿಷಯದಲ್ಲಿ ಮಹಾರಾಷ್ಟ್ರ ಹಾಗೂ ಚತ್ತೀಸ್ಗಡ್ ರಾಜ್ಯಗಳು ಈಗಾಗಲೇ ತನ್ನ ಗರಿಷ್ಟ ಮಟ್ಟವನ್ನು ತಲುಪಿವೆ. ಈ ಕುರಿತು PTI-ಭಾಷಾ ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿರುವ IIT ಕಾನ್ಪುರ್ ನ ಕಂಪ್ಯೂಟರ್ ಸೈನ್ಸ್ ವಿಘಾಗದ ಪ್ರೊ. ಮಣಿಂದರ್ ಅಗರ್ವಾಲ್, "ಮೇ 11 ರಿಂದ ಮೇ 15ರ ಮಧ್ಯೆ ಚಿಕಿತ್ಸೆಗೆ ಒಳಪಟ್ಟ ರೋಗಿಗಳ ಸಂಖ್ಯೆಯಲ್ಲಿ ವೃದ್ಧಿಯಾಗುವ ತಾರ್ಕಿಕ ಕಾರಣವಾಗಿದ್ದು, ಇದು ಸುಮಾರು 33 ಲಕ್ಷದಿಂದ ಸುಮಾರು 35 ಲಕ್ಷದವರೆಗೆ ಇರುವ ಸಾಧ್ಯತೆ ಇದೆ. ಇದು ಅತ್ಯಂತ ವೇಗದ ದರವಾಗಿದೆ. ಆದರೆ ಅಷ್ಟೇ ವೇಗದಲ್ಲಿ ಪ್ರಕರಣಗಳ ಸಂಖ್ಯೆ ಕೂಡ ಇಳಿಕೆಯಾಗಲಿದೆ. ಮೇ ಅಂತ್ಯದ ವೇಳೆಗೆ ಈ ಸಂಖ್ಯೆಯಲ್ಲಿ ನಾಟಕೀಯ ರೂಪದ ಇಳಿಕೆ ಕಂಡುಬರಲಿದೆ " ಎಂದಿದ್ದಾರೆ. 

ಆದರೆ ವಿಜ್ಞಾನಿಗಳು ತಮ್ಮ ಈ ಸಂಶೋಧನಾ ಪತ್ರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ ಹಾಗೂ SUTRA ಮಾಡೆಲ್ ನಲ್ಲಿ ಹಲವು ವಿಶೇಷತೆಗಳಿವೆ. ಆದರೆ, ಈ ಹಿಂದಿನ ಅಧ್ಯಯನದಲ್ಲಿ ರೋಗಿಗಳನ್ನು ಯಾವುದೇ ಲಕ್ಷಣಗಳಿಲ್ಲದ ಮತ್ತು ಸೋಂಕಿತ (Covid-19 Infection) ರೋಗಿಗಳಲ್ಲಿ ವಿಂಗಡಿಸಲಾಗಿತ್ತು. ಹೊಸ ಮಾದರಿಯಲ್ಲಿ ಈ ಅಂಶವನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಹೊಸ ಮಾದರಿಯಲ್ಲಿ ಲಕ್ಷಣವಿಲ್ಲದ ರೋಗಿಗಳ ಒಂದು ಭಾಗ, ಸೋಂಕಿತರ ಸಂಪರ್ಕಕ್ಕೆ ಬಂದ ಜನರ ಪರೀಕ್ಷೆ ಅಥವಾ ಇತರೆ ನಿಯಮಗಳ ಮೂಲಕ ಪತ್ತೆ ಹಚ್ಚಬಹುದು ಎನ್ನಲಾಗಿದೆ.

ಇದನ್ನೂ ಓದಿ- ಮೋದಿ ಸರ್ಕಾರದ ಮಹಾಘೋಷಣೆ, 80 ಕೋಟಿ ಜನರಿಗೆ 2 ತಿಂಗಳು ಉಚಿತ ರೇಷನ್

ಏಪ್ರಿಲ್ 15 ರ ಅಂದಾಜು ನಿಜವಾಗಿಲ್ಲ
ಈ ತಿಂಗಳ ಆರಂಭದಲ್ಲಿ ಈ ಗಣಿತದ ಮಾಡೆಲ್ ಮೂಲಕ ಏಪ್ರಿಲ್ 15 ರವರೆಗೆ ಕೊರೊನಾ ವೈರಸ್ ಸೋಂಕಿನ ವೃದ್ಧಿದರ ತನ್ನ ಗರಿಷ್ಟ ಮಟ್ಟ ತಲುಪಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಇದು ನಿಜ ಎಂದು ಸಾಬೀತಾಗಿರಲಿಲ್ಲ. "ಪ್ರಸ್ತುತ ಹಂತದಲ್ಲಿ ನಮ್ಮ ಮಾಡೆಲ್ ನ ಮಾನದಂಡಗಳಲ್ಲಿ ನಿರಂತರ ಬದಲಾವಣೆಯಾಗುತ್ತಿದೆ. ಹೀಗಾಗಿ ಸ್ಪಷ್ಟ ಅಂದಾಜು ವ್ಯಕ್ತಪಡಿಸುವುದು ಸ್ವಲ್ಪ ಕಷ್ಟದ ವಿಷಯವಾಗಿದೆ. ದಿನನಿತ್ಯ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ಮಾಮೂಲಿ ಬದಲಾವಣೆ ಕೂಡ ಹಂತದ ಸಂಖ್ಯೆಯಲ್ಲಿ ಸಾವಿರಾರು ಅಂಕಿಗಳ ಏರಿಕೆ ಮಾಡಬಹುದು" ಎಂದು ಅಗರವಾಲ್ ಹೇಳಿದ್ದಾರೆ. 

ಇದನ್ನೂ ಓದಿ- ಕೊರೊನಾ ಹೋರಾಟದಲ್ಲಿ ಭಾರತಕ್ಕೆ ಸಿಕ್ಕ ಮತ್ತೊಂದು ಅಸ್ತ್ರ, Virafin ಔಷಧಿಗೆ DCGI ಅನುಮತಿ

ಮಹಾಮಾರಿಯ (Covid-19 Pandemic) ಕುರಿತು ಮೊದಲೇ ಅಂದಾಜುಗಳನ್ನೂ ವ್ಯಕ್ತಪಡಿಸಲು ಮೂರು ಮಾನದಂಡಗಳ ಬಳಕೆ ಮಾಡಲಾಗಿದೆ. ಮೊದಲನೆಯದಾಗಿ ಬೀಟಾ ಅಂದರೆ ಸಂಪರ್ಕ,  ಅಂದರೆ ಓರ್ವ ಸೋಂಕಿತ ವ್ಯಕ್ತಿ ಇತರ ಎಷ್ಟು ಜನರನ್ನು ಸಂಪರ್ಕಿಸಿದ ಎಂಬ ಕುರಿತಾದ ಅಂದಾಜು ವ್ಯಕ್ತಪಡಿಸುತ್ತದೆ. ಎರಡನೆಯ ಮಾನದಂಡ ಮಹಾಮಾರಿಯ ಪ್ರಭಾವ ಕ್ಷೇತ್ರ ಎಷ್ಟು ಜನಸಂಖ್ಯೆಯನ್ನು ಹೊಂದಿದೆ ಎಂಬುದಾಗಿದೆ. ಮೂರನೆಯ ಮಾನದಂಡ ಖಚಿತ ಪಡಿಸಲಾದ ಹಾಗೂ ಖಚಿತವಲ್ಲದ ಸಂಭವನೀಯ ಗಳ ಅಂದಾಜಾಗಿದೆ. ಎಂದು ಅಗರವಾಲ್ ಹೇಳಿದ್ದಾರೆ.

ಇದನ್ನೂ ಓದಿ- Big Relief: ಇನ್ಮುಂದೆ ಕೊರೊನಾ ಚಿಕಿತ್ಸೆ ಕ್ಯಾಶ್ ಲೆಸ್, ವಿಮಾ ಕಂಪನಿಗಳಿಗೆ IRDAI ಆದೇಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News