ಎಸ್‌ಬಿಐನ ಈ ಸಲಹೆಗಳನ್ನು ಅನುಸರಿಸಿದರೆ ಸದಾ ಸುರಕ್ಷಿತವಾಗಿರುತ್ತೆ ನಿಮ್ಮ ಹಣ

ದೇಶಾದ್ಯಂತ ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಆನ್‌ಲೈನ್ ಹಗರಣಕಾರರು ಬಳಕೆದಾರರ ಖಾತೆಗಳ ವಿವರಗಳನ್ನು ಕದಿಯಲು ಹೊಸ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.

Last Updated : Jul 21, 2020, 12:44 PM IST
ಎಸ್‌ಬಿಐನ ಈ ಸಲಹೆಗಳನ್ನು ಅನುಸರಿಸಿದರೆ ಸದಾ ಸುರಕ್ಷಿತವಾಗಿರುತ್ತೆ ನಿಮ್ಮ ಹಣ title=

ನವದೆಹಲಿ: ದೇಶಾದ್ಯಂತ ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಆನ್‌ಲೈನ್ ಹಗರಣಕಾರರು ಬಳಕೆದಾರರ ಖಾತೆಗಳ ವಿವರಗಳನ್ನು ಕದಿಯಲು ಹೊಸ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಈ ಸಮಯದಲ್ಲಿ ಬ್ಯಾಂಕಿಂಗ್ ವಲಯವು ಸೈಬರ್ ವಂಚನೆಯ ದೊಡ್ಡ ಗುರಿಯಾಗಿದೆ. ಹೀಗಾಗಿ ವಂಚನೆಯಿಂದ ತನ್ನ ಗ್ರಾಹಕರನ್ನು ರಕ್ಷಿಸಲು ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ತನ್ನ ಗ್ರಾಹಕರನ್ನು ಎಚ್ಚರಿಸುತ್ತಲೇ ಇರುತ್ತಾದೆ. ಇಂದು ಸಹ ಎಸ್‌ಬಿಐ ಸುರಕ್ಷಿತ ಬ್ಯಾಂಕಿಂಗ್ ಸಲಹೆಗಳನ್ನು ನೀಡಿದೆ-

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಟ್ವಿಟ್ಟರ್ ಖಾತೆಯಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಸುರಕ್ಷಿತ ಬ್ಯಾಂಕಿಂಗ್ ಸಲಹೆಗಳನ್ನು ನೀಡಿದೆ. ಇದಕ್ಕಾಗಿ ಬ್ಯಾಂಕ್ ವಿಡಿಯೋ  ಒಂದನ್ನು ಬಿಡುಗಡೆ ಮಾಡಿದೆ. ಈ 45 ಸೆಕೆಂಡುಗಳ ವೀಡಿಯೊದಲ್ಲಿ ಸುರಕ್ಷಿತ ಆನ್‌ಲೈನ್ ಬ್ಯಾಂಕಿಂಗ್‌ನ ಹಂತಗಳನ್ನು ಎಸ್‌ಬಿಐ ವಿವರಿಸಿದೆ.

ಎಸ್‌ಬಿಐ ಹಂಚಿಕೊಂಡ ವೀಡಿಯೊ ಮೂರು ವಿಭಿನ್ನ ಸಮಯಗಳನ್ನು ತೋರಿಸುತ್ತದೆ -

  • ನೀವು ವಂಚನೆ ಕರೆ, ಇಮೇಲ್ ಮತ್ತು ಸಂದೇಶವನ್ನು ಪಡೆದರೆ ಅದರಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳಲಾಗುತ್ತದೆ ಅಥವಾ ಪಾವತಿ ಬಗ್ಗೆ ಕೇಳಲಾಗುತ್ತದೆ.
  • ಇದಲ್ಲದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಮಾಡದ ವ್ಯವಹಾರಗಳನ್ನು ಕಾಣುವುದು.
  • ನೀವು ವೈಯಕ್ತಿಕ ಮಾಹಿತಿ ಅಥವಾ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಂಡಿದ್ದರೆ...

ಎಸ್‌ಬಿಐನಲ್ಲಿ ಈ ಖಾತೆ ತೆರೆದರೆ ಸಿಗುತ್ತೆ ಬಂಪರ್ ಲಾಭ, ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ

ಬ್ಯಾಂಕ್ ಸಲಹೆ-
ನೆಟ್ ಬ್ಯಾಂಕಿಂಗ್ ಬಳಸುವ ಬಳಕೆದಾರರು ತಮ್ಮ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಸ್‌ಬಿಐ (SBI) ಸಲಹೆ ನೀಡಿದೆ. ಇದಲ್ಲದೆ ನೀವು ಸೈಬರ್ ಅಪರಾಧದ ಬಗ್ಗೆ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ (https://cybercrime.gov.in/) ದೂರು ನೀಡಬಹುದು.

ಎಸ್‌ಬಿಐ ಟ್ವೀಟ್ :
ಎಸ್‌ಬಿಐ ತನ್ನ ಟ್ವೀಟ್‌ನಲ್ಲಿ ಜಾಗರೂಕರಾಗಿರಿ ಮತ್ತು ಸೈಬರ್-ಅಪರಾಧಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಇದಲ್ಲದೆ ಹೆಚ್ಚಿನ ಮಾಹಿತಿಗಾಗಿ ನೀವು ಈ ಲಿಂಕ್ https://bit.ly/3h0jWie ಗೆ ಭೇಟಿ ನೀಡಬಹುದು.

ಸರ್ಕಾರಿ ಪೋರ್ಟಲ್‌ನಲ್ಲಿ ದೂರು ನೀಡಿ:
ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ಗ್ರಾಹಕರು ವಂಚನೆ ವಿರುದ್ಧ ದೂರು ನೀಡುತ್ತಾರೆ. ಗ್ರಾಹಕರು ಸೈಬರ್ ಅಪರಾಧ ದೂರನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಈ ಪೋರ್ಟಲ್ ದೇಶದ ಗೃಹ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ.

Trending News