ಭ್ರಷ್ಟ ಅಧಿಕಾರಿಗಳು & ರಾಜಕಾರಣಿಗಳಿಗೆ ನುಂಗಲಾರದ‌ ಬಿಸಿ ತುಪ್ಪ; ಇವರು ʼಊಟಿʼ ಉಳಿಸಿದ ಡಿಸಿ!!

IAS Innocent Divya: 2009ರ IAS ಬ್ಯಾಚ್‌ನ ದಿವ್ಯಾ ಅವರು 2017ರಲ್ಲಿ ನೀಲಗಿರಿ‌ ಜಿಲ್ಲೆಯ ಊಟಿ ಜಿಲ್ಲಾಧಿಕಾರಿಯಾಗಿ ನೇಮಕವಾದರು. ಅವರು ಎಷ್ಟು ಖಡಕ್ ಅಂದ್ರೆ ಒಬ್ಬೇ ಒಬ್ಬ ಎಂಎಲ್‌ಎ, ಎಂಪಿ, ಮಿನಿಸ್ಟರ್ ಬಾಲ ಬಿಚ್ಚುತ್ತಿರಲಿಲ್ಲ. 

Written by - Puttaraj K Alur | Last Updated : Jan 26, 2025, 04:49 PM IST
  • ಇನ್ನೋಸೆಂಟ್ ದಿವ್ಯಾ ಸುದೀರ್ಘ 5 ವರ್ಷ ಊಟಿ ಡಿಸಿಯಾಗಿ ಅಧಿಕಾರ ನಡೆಸಿದ ಏಕೈಕ ‌ಅಧಿಕಾರಿ..
  • 2009ರ IAS ಬ್ಯಾಚ್‌ನ ದಿವ್ಯಾ 2017ರಲ್ಲಿ ನೀಲಗಿರಿ‌ ಜಿಲ್ಲೆಯ ಊಟಿ ಜಿಲ್ಲಾಧಿಕಾರಿಯಾಗಿ ನೇಮಕವಾದರು
  • ದಿವ್ಯಾ ಎಷ್ಟು ಖಡಕ್ ಅಂದ್ರೆ ಒಬ್ಬೇ ಒಬ್ಬ ಎಂಎಲ್‌ಎ, ಎಂಪಿ, ಮಿನಿಸ್ಟರ್ ಬಾಲ ಬಿಚ್ಚುತ್ತಿರಲಿಲ್ಲ
ಭ್ರಷ್ಟ ಅಧಿಕಾರಿಗಳು & ರಾಜಕಾರಣಿಗಳಿಗೆ ನುಂಗಲಾರದ‌ ಬಿಸಿ ತುಪ್ಪ; ಇವರು ʼಊಟಿʼ ಉಳಿಸಿದ ಡಿಸಿ!! title=
ಊಟಿ ಉಳಿಸಿದ ಡಿಸಿ!!

J Innocent Divya IAS: ಇನ್ನೋಸೆಂಟ್ ದಿವ್ಯಾ... ಸುದೀರ್ಘ ಐದು ವರ್ಷ ಊಟಿ ಡಿಸಿಯಾಗಿ ಅಧಿಕಾರ ನಡೆಸಿದ ಏಕೈಕ ‌ಅಧಿಕಾರಿ.. 2009ರ IAS ಬ್ಯಾಚ್‌ನ ದಿವ್ಯಾ ಅವರು 2017ರಲ್ಲಿ ನೀಲಗಿರಿ‌ ಜಿಲ್ಲೆಯ ಊಟಿ ಜಿಲ್ಲಾಧಿಕಾರಿಯಾಗಿ ನೇಮಕವಾದರು. ಅವರು ಎಷ್ಟು ಖಡಕ್ ಅಂದ್ರೆ ಒಬ್ಬೇ ಒಬ್ಬ ಎಂಎಲ್‌ಎ, ಎಂಪಿ, ಮಿನಿಸ್ಟರ್ ಬಾಲ ಬಿಚ್ಚುತ್ತಿರಲಿಲ್ಲ. ಯಾವ ಮಂತ್ರಿಗೂ, ಜನಪ್ರತಿನಿಧಿಗೂ ಕ್ಯಾರೆ ಎನ್ನದೇ ಕೆಲಸ ಮಾಡಿದ ದಿವ್ಯಾ ಅವರು, ಊಟಿ ಡಿಸಿಯಾಗಿ ವರ್ಗಾವಣೆಯಾದಾಗ ಮಾಡಿದ ಮೊದಲ‌ ಕೆಲಸ 38 ಅನಧಿಕೃತ ರೆಸಾರ್ಟ್‌ಗಳನ್ನು ಮುಚ್ಚಿಸಿಬಿಟ್ಟರು.  

ಅನಧಿಕೃತ ರೆಸಾರ್ಟ್ ನಿರ್ಮಾಣಕ್ಕೆ ಅಧಿಕಾರಿಗಳ ಲಂಚಗುಳಿತನ, ರಾಜಕಾರಣಿಗಳ ‌ಒತ್ತಾಸೆ ಎಲ್ಲಾ ಸೇರಿ ಇಡೀ ಊಟಿಯ ಪ್ರಾಕೃತಿಕ ಸೌಂದರ್ಯಕ್ಕೆ ಭಾರೀ ಅಪಾಯದ ಗಂಟೆ ಬಡಿದಿತ್ತು. ಊಟಿಯು ಸಮುದ್ರ ಮಟ್ಟಕ್ಕಿಂತ ಸುಮಾರು 7,500 ಅಡಿ (2,286 ಮೀಟರ್) ಎತ್ತರದಲ್ಲಿದೆ. ಅದ್ಭುತ ಪ್ರಾಕೃತಿಕ ಸೌಂದರ್ಯ ಸೊಬಗು ಮತ್ತು ಭವ್ಯವಾದ ಹಸಿರು ಆಳ ಕಣಿವೆಗಳನ್ನು ಹೊಂದಿರುವ ನೀಲಗಿರಿಯನ್ನು ಕಾಪಾಡಿ ಎಂದು ಊಟಿ ಜನರ ಮೊರೆ ಕೇಳಿಸಿದಂತೆ ಕೆಲಸಕ್ಕಿಳಿದ ದಿವ್ಯಾ, ರೆಸಾರ್ಟ್‌ಗಳ ನಿರ್ಮಾಣಕ್ಕೆ ನೀಡಿದ್ದ ಅನುಮತಿ‌ ರದ್ದುಪಡಿಸಿದರು. ಹೊಸದಾಗಿ ‌ಕಟ್ಟಡ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿದರು. ಆನೆ ಕಾರಿಡಾರ್ ಕಾಪಾಡುವ ಕಠಿಣ ಕಾನೂನು ಜಾರಿಗೊಳಿಸಿದರು. ಇಡೀ ನೀಲಗಿರಿ ಜಿಲ್ಲೆಯಲ್ಲಿ ಬೋರೆವೆಲ್ ಕೊರೆಸುವುದನ್ನು ನಿಷೇಧಿಸಿದರು. 

ಇದನ್ನೂ ಓದಿ: ಆಟೋ ಡ್ರೈವರ್‌ನಿಂದ ಅತ್ಯಾಚಾರ; ತನ್ನ ಗುಪ್ತಾಂಗದಲ್ಲಿ ತಾನೇ ಬ್ಲೇಡ್ ಇಟ್ಟುಕೊಂಡ ಯುವತಿ!!

ಕುಡಿಯುವ ನೀರು ಪೂರೈಸುವುದಕ್ಕೆ ಸರ್ಕಾರದಿಂದಲೇ ವ್ಯವಸ್ಥೆ ಮಾಡಿದರು. ಅರ್ಧ ಲೀಟರ್, ಒಂದು ಲೀಟರ್ ನೀರು ಮಾರಾಟ ಬ್ಯಾನ್ ಮಾಡಿದರು. 5 ಲೀಟರ್ ಕ್ಯಾನ್‌ಗಳಲ್ಲಿ ನೀರು ಮಾರಬೇಕು ಮತ್ತು ಅದನ್ನೇ ಮರು‌ಬಳಕೆ ಮಾಡಬೇಕೆಂಬ ಕಟ್ಟಳೆಯನ್ನ ಜಾರಿ ಮಾಡಿ ಪ್ಲಾಸ್ಟಿಕ್ ಮುಕ್ತ ಊಟಿ ಕಟ್ಟಿದರು. ಮುಖ್ಯವಾಗಿ ನೀಲಗಿರಿ, ಊಟಿಯ ಆದಿವಾಸಿಗಳ ಪುನಃಶ್ಚೇತನಕ್ಕೆ ಮುಂದಾಗಿ 300 ಮನೆ ನಿರ್ಮಿಸಿಕೊಟ್ಟರು. ಡಿಸಿ ದಿವ್ಯಾರ ಒಂದೊಂದು ಆದೇಶವೂ ಭ್ರಷ್ಟ ಅಧಿಕಾರಿಗಳು,‌‌ ರಾಜಕಾರಣಿಗಳಿಗೆ ನುಂಗಲಾರದ‌ ಬಿಸಿ ತುಪ್ಪವಾಯ್ತು. ಎಷ್ಟೇ ಪ್ರಭಾವ ‌ಬಳಸಿದರೂ, ಒತ್ತಡ ಹೇರಿದರೂ ದಿವ್ಯಾ ಜಗ್ಗಲಿಲ್ಲ. ಕೊನೆಗೆ ರಾಜಕಾರಣಿಗಳೆಲ್ಲ ಸೇರಿ ದಿವ್ಯಾರನ್ನು ಟ್ರಾನ್ಸ್‌ಫರ್ ಮಾಡಿಸುವಲ್ಲಿ ಯಶಸ್ವಿಯಾಗಿಬಿಟ್ರು. 

ಇನ್ನೇನು ದಿವ್ಯಾ ಅವರು ಊಟಿ ಖಾಲಿ ಮಾಡುತ್ತಾರೆಂದು ಖುಷಿಪಡುತ್ತಿದ್ದವರ ಸಂಭ್ರಮಕ್ಕೆ ಸುಪ್ರೀಂಕೋರ್ಟ್ ತಣ್ಣೀರೆರಚಿತು. ಯಾವುದೇ ಕಾರಣಕ್ಕೂ ದಿವ್ಯಾ ಒಪ್ಪದ ‌ಹೊರತು ಅವರನ್ನು ವರ್ಗಾವಣೆ ಮಾಡದಂತೆ ಸುಪ್ರೀಂಕೋರ್ಟ್ ‌ಆದೇಶಿಸಿ ಇಡೀ ರಾಜಕಾರಣಿಗಳು, ಪ್ರಭಾವಿಗಳಿಗೆ ಮರ್ಮಾಘಾತ ನೀಡಿತು. ತಾನು ಇರುವವರೆಗೂ ಊಟಿಯನ್ನು ಕಾಪಾಡಲು ಶತಪ್ರಯತ್ನ ಮಾಡಿದ ದಿವ್ಯಾ ಅದರಲ್ಲಿ ಯಶಸ್ವಿಯಾದರು. ಕೆಲಸದಲ್ಲಿ ಸ್ಪಷ್ಟತೆ, ಅಭಿವೃದ್ಧಿಯ‌ ಕನಸು, ಪ್ರಾಮಾಣಿಕತೆ, ಸಾಧಿಸಬೇಕೆಂಬ ಛಲ‌ ಇದ್ದರೆ ಇಡೀ ಜಿಲ್ಲೆಯನ್ನೇ ಉದ್ಧರಿಸಬಹುದು ಎಂಬುದಕ್ಕೆ ದಿವ್ಯಾ ಸಾಕ್ಷಿ. ಊಟಿ ಪಾರಂಪರಿಕ ಸೌಂದರ್ಯ ಉಳಿಸಲು ಮಾಡಿದ ಪ್ರಯತ್ನಗಳಿಂದ ಮೊನ್ನೆ ವಯನಾಡಿನಲ್ಲಾದ ಪ್ರವಾಹ ದುರಂತದಿಂದ ಊಟಿ ಪಾರಾಯಿತು. 

ಇದನ್ನೂ ಓದಿ: ಮಹಾರಾಷ್ಟ್ರದ ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ಭಾರೀ ಸ್ಪೋಟ !ಹಲವು ಮಂದಿ ಸಾವನ್ನಪ್ಪಿರುವ ಶಂಕೆ

ದಿವ್ಯಾರಂತಹ ಖಡಕ್ ಅಧಿಕಾರಿಗಳು ರಾಜಕಾರಣಿಗಳಿಗೆ, ಆಳುವ ಸರ್ಕಾರಕ್ಕೆ ಬೇಕಾಗಿಲ್ಲ. ಅದೇ ಕಾರಣಕ್ಕೆ ‌ದಿವ್ಯಾ ಇಂದು Silk Development ಮಂಡಳಿಯ ಎಂಡಿಯಾಗಿ ವರ್ಗಾಯಿಸಿ ಸರ್ಕಾರ ಕೈ ತೊಳೆದುಕೊಂಡಿದೆ. ಪ್ರಾಮಾಣಿಕತೆ ‌ಬಿಟ್ಟು, ಅಭಿವೃದ್ಧಿ ‌ಕನಸು ಮರೆತು,‌ ಭ್ರಷ್ಟ ವ್ಯವಸ್ಥೆ ಜೊತೆ ಕೈಜೋಡಿಸಿ, ರಾಜಕಾರಣಿಗಳಿಗೆ ಸಲಾಂ ಹೊಡೆಯುವ ಅಧಿಕಾರಿಗಳು ಇರೋವರೆಗೂ, ʼಏಯ್ ಇಲ್ಯಾಕ್ ಕೂತಿದ್ದೀಯ, ಎದ್ದು ಹೋಗು..ʼ ಎಂದು ರಾಜಕಾರಣಿಗಳಿಂದ ಸಾರ್ವಜನಿಕವಾಗಿ ಅವಮಾನಿಸಿಕೊಳ್ಳುತ್ತಲೇ ಇರಬೇಕು.

(✍️ ಶೋಭಾ ಮಳವಳ್ಳಿ, ಇದು ಫೇಸ್‌ಬುಕ್‌ ಬರಹ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News