ಕಿಡ್ನಾಪ್ ಮಾಡಿಯಾದರೂ ಹುಡುಗಿಯನ್ನು ನಿಮ್ಮ ಕೈಗೆ ಒಪ್ಪಿಸುತ್ತೇನೆ- ಬಿಜೆಪಿ ಶಾಸಕ

 ಬಿಜೆಪಿ ಶಾಸಕ ರಾಮ ಕದಂ ದಹಿ ಹಂಡಿ ಕಾರ್ಯಕ್ರಮದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ " ನಿಮಗೆ ಕಿಡ್ನಾಪ್ ಮಾಡಿಯಾದರು ಹುಡುಗಿಯನ್ನು ನಿಮ್ಮ ಕೈ ಗೆ ಒಪ್ಪಿಸುತ್ತೇನೆ ಎಂದು ಹೇಳಿ  ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

Last Updated : Sep 5, 2018, 07:01 AM IST
ಕಿಡ್ನಾಪ್ ಮಾಡಿಯಾದರೂ ಹುಡುಗಿಯನ್ನು ನಿಮ್ಮ ಕೈಗೆ ಒಪ್ಪಿಸುತ್ತೇನೆ- ಬಿಜೆಪಿ ಶಾಸಕ  title=
videograb

ಮುಂಬೈ: ಬಿಜೆಪಿ ಶಾಸಕ ರಾಮ ಕದಂ ದಹಿ ಹಂಡಿ ಕಾರ್ಯಕ್ರಮದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ " ನಿಮಗೆ ಕಿಡ್ನಾಪ್ ಮಾಡಿಯಾದರು ಹುಡುಗಿಯನ್ನು ನಿಮ್ಮ ಕೈ ಗೆ ಒಪ್ಪಿಸುತ್ತೇನೆ ಎಂದು ಹೇಳಿ  ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

ಮುಂಬೈ ನ ಉಪನಗರ ಘಾತಕ್ಪುರ್ ನಲ್ಲಿ ಸೋಮವಾರ ರಾತ್ರಿ  ದಹಿ ಹಂಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ" ನೀವೆಲ್ಲ ಯುವಕರು ನನ್ನನ್ನು ಯಾವ ಕೆಲಸಕ್ಕೆ ಯಾವಾಗಬೇಕಾದರೂ ಭೇಟಿಯಾಗಬಹುದು" ಎನ್ನುತ್ತಾ ನಾನು 100 ಪರ್ಸೆಂಟ್ ನಿಮಗೆ ಸಹಾಯ ಮಾಡುತ್ತೇನೆ,ನಿಮ್ಮ ಪೋಷಕರೊಂದಿಗೆ ಬನ್ನಿ,ಒಂದು ವೇಳೆ ಹುಡುಗಿ ಒಪ್ಪದಿದ್ದರೆ  ಆ ಹುಡುಗಿಯನ್ನು ಕಿಡ್ನಾಪ್ ಮಾಡಿಯಾದರೂ ಮದುವೆಗೆ ನಿಮ್ಮ ಕೈಗೆ ಒಪ್ಪಿಸುತ್ತೇನೆ ಎಂದು ಹೇಳಿದ್ದಾರೆ. 

ಈಗ ಈ ಹೇಳಿಕೆ ಮೈತ್ರಿ  ಪಕ್ಷವಾದ ಶಿವಸೇನಾ ಖಂಡಿಸಿದೆ.ಈ ಕುರಿತಾಗಿ ಪ್ರತಿಕ್ರಿಯಿಸಿರುವ ಆದಿತ್ಯ ಥಾಕ್ರೆ ಇದು ನಿಜಕ್ಕೂ ಅಸಹ್ಯ ಎಂದು ಖಂಡಿಸಿದ್ದಾರೆ.

 

Trending News