ನಾನಿನ್ನು ರಾಜಕಾರಣಿಯಲ್ಲ,ಆದ್ದರಿಂದ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲಾರೆ-ರಜನಿಕಾಂತ್

     

Last Updated : Mar 13, 2018, 04:08 PM IST
ನಾನಿನ್ನು ರಾಜಕಾರಣಿಯಲ್ಲ,ಆದ್ದರಿಂದ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲಾರೆ-ರಜನಿಕಾಂತ್ title=

ಡೆಹ್ರಾಡೂನ್: ಸೂಪರ್ ಸ್ಟಾರ್ ರಜನಿಕಾಂತ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಹೇಳುವ ಮೂಲಕ ಒಂದು ಕ್ಷಣ ಪತ್ರಕರ್ತರನ್ನು ಆಶ್ಚರ್ಯಗೊಳಪಡಿಸಿದರು.

ಇತ್ತೀಚಿಗೆ ಸಕ್ರೀಯ ರಾಜಕಾರಣಕ್ಕೆ  ಕಾಲಿಟ್ಟಿರುವ ಸೂಪರ್ ಸ್ಟಾರ್ ರಜನಿಕಾಂತ್ ಗೆ ರಾಜಕೀಯ ವಿಧ್ಯಮಾನಗಳ ಕುರಿತಾಗಿ ಪತ್ರಕರ್ತರು ಪ್ರಶ್ನೆಗಳನ್ನು ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ರಜನೀಕಾಂತ್ " ನಾನಿನ್ನು ಪೂರ್ಣ ಪ್ರಮಾಣದ ರಾಜಕಾರಣಿಯಲ್ಲ ಮತ್ತು ಇನ್ನು ಯಾವುದೇ ಪಕ್ಷವನ್ನು ಸ್ಥಾಪಿಸಿಲ್ಲ, ಆದ್ದರಿಂದ ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಪ್ರತೀಕ್ರಯಿಸಿದ್ದಾರೆ. 

ತಮಿಳುನಾಡಿನ ರಾಜಕಾರಣ ಮತ್ತೆ ತನ್ನ ಸಿನಿ ರಾಜಕಾರಣದಿಂದ ಸದ್ದು ಮಾಡುತ್ತಿದೆ. ಒಂದು ಕಡೆ ರಜನಿಕಾಂತ್, ಇನ್ನೊಂದೆಡೆ ಕಮಲ್ ಹಾಸನ್ ರಾಜಕೀಯ ಪ್ರವೇಶದಿಂದ ಇದಕ್ಕೆ ಇನ್ನಷ್ಟು ತಾರಾ ಮೆರಗು ಬಂದಿದೆ.

Trending News