Hyderabad Goshamahal road collapse: ಮಾರುಕಟ್ಟೆ ಬಳಿ ದಿಢೀರ್ ಕುಸಿದ ಭೂಮಿ: ಮಣ್ಣಿನಡಿ ಸಿಕ್ಕಿಹಾಕಿಕೊಂಡ ವ್ಯಾಪಾರಸ್ಥರು

Hyderabad Goshamahal road collapse: ಪೊಲೀಸರ ಪ್ರಕಾರ, ಗೋಶಾಮಹಲ್ ಪ್ರದೇಶದಲ್ಲಿನ ಚರಂಡಿಯ ಮೇಲೆ ರಸ್ತೆ ನಿರ್ಮಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಣ್ಣು ಮತ್ತು ತರಕಾರಿಗಳ ಮಾರಾಟ ಮಾಡುತ್ತಿದ್ದ ಜನರು ಈ ಭೂಕುಸಿತದಿಂದ ನೆಲಕ್ಕೆ ಬಿದ್ದಿದ್ದಾರೆ. ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿಸಿಕೊಂಡಿದ್ದು ರಸ್ತೆ ಮಧ್ಯವೇ ಒಡೆದುಹೋಗಿದೆ. ಹಣ್ಣುಗಳು ಮತ್ತು ತರಕಾರಿಗಳನ್ನು ತುಂಬಿದ ಚೀಲಗಳು ಹೊಂಡದಲ್ಲಿ ಹೂತುಹೋಗಿವೆ. ರಸ್ತೆಯಲ್ಲಿ ನಿಂತಿದ್ದ ವಾಹನಗಳೂ ಹೊಂಡಕ್ಕೆ ಬಿದ್ದಿವೆ. ಅಪಘಾತದ ವೇಳೆ ರಸ್ತೆಯಲ್ಲಿ ನಿಂತಿದ್ದ ಹಲವರು ಗುಂಡಿಗೆ ಬಿದ್ದಿದ್ದು, ನಂತರ ಅವರನ್ನು ರಕ್ಷಿಸಲಾಗಿದೆ.

Written by - Bhavishya Shetty | Last Updated : Dec 24, 2022, 05:47 AM IST
    • ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಭಯಾನಕ ಘಟನೆ
    • ನಗರದ ಗೋಶಾಮಹಲ್ ಪ್ರದೇಶದಲ್ಲಿ ರಸ್ತೆಯೊಂದು ದಿಢೀರ್ ಕುಸಿತ
    • ವಾಹನಗಳು, ಹಣ್ಣು, ತರಕಾರಿ ತುಂಬಿದ್ದ ಚೀಲಗಳು ಮಣ್ಣಿನಡಿ ಸಿಲುಕಿಕೊಂಡಿವೆ
Hyderabad Goshamahal road collapse: ಮಾರುಕಟ್ಟೆ ಬಳಿ ದಿಢೀರ್ ಕುಸಿದ ಭೂಮಿ: ಮಣ್ಣಿನಡಿ ಸಿಕ್ಕಿಹಾಕಿಕೊಂಡ ವ್ಯಾಪಾರಸ್ಥರು title=
goshamahal

Hyderabad Goshamahal road collapse: ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ನಗರದ ಗೋಶಾಮಹಲ್ ಪ್ರದೇಶದಲ್ಲಿ ರಸ್ತೆಯೊಂದು ದಿಢೀರ್ ಕುಸಿದಿದ್ದು, ವಾಹನಗಳು, ಹಣ್ಣು, ತರಕಾರಿ ತುಂಬಿದ್ದ ಚೀಲಗಳು ಮಣ್ಣಿನಡಿ ಸಿಲುಕಿಕೊಂಡಿವೆ. ಈ ಘಟನೆ ಡಿಸೆಂಬರ್ 24ರಂದು ನಡೆದಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನಗಳನ್ನು ಹೊರತರುವ ಕಾರ್ಯ ಆರಂಭಿಸಿದರು. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪೊಲೀಸರ ಪ್ರಕಾರ, ಗೋಶಾಮಹಲ್ ಪ್ರದೇಶದಲ್ಲಿನ ಚರಂಡಿಯ ಮೇಲೆ ರಸ್ತೆ ನಿರ್ಮಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಣ್ಣು ಮತ್ತು ತರಕಾರಿಗಳ ಮಾರಾಟ ಮಾಡುತ್ತಿದ್ದ ಜನರು ಈ ಭೂಕುಸಿತದಿಂದ ನೆಲಕ್ಕೆ ಬಿದ್ದಿದ್ದಾರೆ. ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿಸಿಕೊಂಡಿದ್ದು ರಸ್ತೆ ಮಧ್ಯವೇ ಒಡೆದುಹೋಗಿದೆ. ಹಣ್ಣುಗಳು ಮತ್ತು ತರಕಾರಿಗಳನ್ನು ತುಂಬಿದ ಚೀಲಗಳು ಹೊಂಡದಲ್ಲಿ ಹೂತುಹೋಗಿವೆ. ರಸ್ತೆಯಲ್ಲಿ ನಿಂತಿದ್ದ ವಾಹನಗಳೂ ಹೊಂಡಕ್ಕೆ ಬಿದ್ದಿವೆ. ಅಪಘಾತದ ವೇಳೆ ರಸ್ತೆಯಲ್ಲಿ ನಿಂತಿದ್ದ ಹಲವರು ಗುಂಡಿಗೆ ಬಿದ್ದಿದ್ದು, ನಂತರ ಅವರನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ: Shocking Video: ಈ ಹುಚ್ಚಾಟಿ ಪ್ರೇಮಿಯ ಹುಚ್ಚಾಟ ನೋಡಿ ತಲೆ ಒಂದು ಕ್ಷಣ ದಿಮ್ಮೆನ್ನುವುದು ಗ್ಯಾರಂಟಿ.. ವಿಡಿಯೋ ನೋಡಿ

ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಶಾಹಿನಾಥಗಂಜ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ತಿಳಿಸಿದ್ದಾರೆ. ಈ ವೇಳೆ ಓರ್ವ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಬಿಡುಗಡೆ ಮಾಡಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಬಂದ ಕೂಡಲೇ ಕ್ರೇನ್‌ಗಳ ಸಹಾಯದಿಂದ ವಾಹನಗಳು ಮತ್ತು ಬಂಡಿಗಳನ್ನು ಹೊರತೆಗೆಯುವ ಕಾರ್ಯ ಪ್ರಾರಂಭಿಸಲಾಯಿತು ಎಂದು ಅವರು ಹೇಳಿದರು. ಈ ಘಟನೆ ಹೇಗೆ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಈ ರಸ್ತೆಯನ್ನು 2009 ರಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನಿರ್ಮಿಸಲಾಗಿದೆ ಎಂದು ಗೋಶಾಮಹಲ್ ಪ್ರದೇಶದ ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿದ್ದಾರೆ. ಈ ಸೇತುವೆ ನಿರ್ಮಾಣಕ್ಕೆ ಕಳಪೆ ಕಬ್ಬಿಣ ಬಳಸಲಾಗಿದ್ದು, ಇದರಿಂದ ಜನರ ಭಾರ ತಾಳಲಾರದೆ ಕ್ಷಣಾರ್ಧದಲ್ಲಿ ಕುಸಿದು ಬಿದ್ದಿದೆ ಎಂದು ಆರೋಪಿಸಿದ್ದಾರೆ. ಇದು ನೇರ ಭ್ರಷ್ಟಾಚಾರವಾಗಿದ್ದು, ತನಿಖೆಯಾಗಬೇಕು ಎಂದು ಇಲ್ಲಿನ ಶಾಸಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Free Ration: ಬಡವರಿಗೆ ಪ್ರಧಾನಿ ಮೋದಿಯಿಂದ ದೊಡ್ಡ ಕೊಡುಗೆ, 81 ಕೋಟಿ ಜನರಿಗೆ 1 ವರ್ಷ ಉಚಿತ ರೇಷನ್!

ರಸ್ತೆ ಕುಸಿತದ ವಿಡಿಯೋ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಘಟನೆಯ ಬಗ್ಗೆ ಜನರು ಆಶ್ಚರ್ಯ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದ್ದರು. ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹಣದ ದುರುಪಯೋಗವನ್ನು ನಿಲ್ಲಿಸುವವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಈ ಘಟನೆಯು ಸಾಕಷ್ಟು ಭಯಾನಕವಾಗಿದೆ ಎಂದು ಇಂಟರ್ನೆಟ್ ಬಳಕೆದಾರರು ಹೇಳಿದ್ದಾರೆ. ಏಕಾಏಕಿ ರಸ್ತೆ ಕುಸಿದು ವಾಹನಗಳು ಸಿಲುಕಿ ಹಲವು ಮಂದಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News