ನಿಮ್ಮ PF ಖಾತೆಯಲ್ಲಿ ಎಷ್ಟು ಹಣ ಜಮಾ ಮಾಡಲಾಗಿದೆ? ಒಂದು ಮಿಸ್ಡ್ ಕಾಲ್‌ನಲ್ಲಿ ತಿಳಿಯಿರಿ

ನಿಮ್ಮ ಕಂಪನಿ ಖಾಸಗಿ ಟ್ರಸ್ಟ್ ಆಗಿದ್ದರೆ ನಿಮಗೆ ಬಾಕಿ ವಿವರಗಳು ಸಿಗುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ಕಂಪನಿಯನ್ನು ಸಂಪರ್ಕಿಸಬೇಕು.

Last Updated : Jul 22, 2020, 01:15 PM IST
ನಿಮ್ಮ PF ಖಾತೆಯಲ್ಲಿ ಎಷ್ಟು ಹಣ ಜಮಾ ಮಾಡಲಾಗಿದೆ? ಒಂದು ಮಿಸ್ಡ್ ಕಾಲ್‌ನಲ್ಲಿ ತಿಳಿಯಿರಿ title=

ನವದೆಹಲಿ : ಕೆಲಸ ಮಾಡುವಾಗ, ಪ್ರತಿಯೊಬ್ಬ ಉದ್ಯೋಗಿ ಮತ್ತು ಕಂಪನಿಯು ಪಿಎಫ್ ಪ್ರಮಾಣವನ್ನು ಇಪಿಎಫ್‌ಒಗೆ (EPFO) ಜಮಾ ಮಾಡಬೇಕು. ಪ್ರತಿ ತಿಂಗಳು ಉದ್ಯೋಗಿಗಳ ಸಂಬಳದಿಂದ ಕಡಿತಗೊಳಿಸುವ ಹಣವನ್ನು ನಿವೃತ್ತಿಯ ನಂತರ ಅವರಿಗೆ ನೀಡಲಾಗುತ್ತದೆ.  ಆದರೆ ಉದ್ಯೋಗಗಳನ್ನು ಬದಲಾಯಿಸುವಾಗ ಅಥವಾ ಪಿಎಫ್ ಹಣವನ್ನು ವರ್ಗಾಯಿಸುವಾಗ ಜನರು ತಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿದಿರುವುದಿಲ್ಲ. ಕೆಲಸ ಮಾಡುವಾಗ ಅಥವಾ ಅದರ ನಂತರ ನಿಮ್ಮ ಪಿಎಫ್ ಪ್ರಮಾಣವನ್ನು ತಿಳಿದುಕೊಳ್ಳುವುದು ತುಂಬಾ ಸುಲಭವಾಗಿದ್ದು ಅದಕ್ಕಾಗಿಯೇ ಹಲವು ಮಾರ್ಗಗಳಿವೆ. ನೌಕರರು ಒಂದು ಮಿಸ್ಡ್ ಕಾಲ್ ನೀಡುವ ಮೂಲಕವೂ ತಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣ ಜಮಾ ಮಾಡಲಾಗಿದೆ ಎಂಬುದನ್ನು ತಿಳಿಯಬಹುದು. ಇದಕ್ಕಾಗಿ ಇಪಿಎಫ್‌ಒ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಇದಲ್ಲದ, ಪಿಎಫ್ (PF) ಮೊತ್ತವನ್ನು ಆನ್‌ಲೈನ್ ಅಥವಾ ಎಸ್‌ಎಂಎಸ್ ಮೂಲಕವೂ ಕಂಡುಹಿಡಿಯಬಹುದು.

ಆನ್‌ಲೈನ್‌ನಲ್ಲಿ ಇಪಿಎಫ್ ಬ್ಯಾಲೆನ್ಸ್ ಮತ್ತು ಪಾಸ್‌ಬುಕ್ ಅನ್ನು ಹೇಗೆ ಪರಿಶೀಲಿಸುವುದು

1- ಇಪಿಎಫ್ಒ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವ ಸೌಲಭ್ಯವನ್ನು ನೀಡಿದೆ. ವೆಬ್‌ಸೈಟ್‌ನ ಮೇಲಿನ ಬಲ ಭಾಗದಲ್ಲಿ ಇ-ಪಾಸ್‌ಬುಕ್‌ನ ಲಿಂಕ್ ಅನ್ನು ನೀವು ಕಾಣಬಹುದು.
2- ಇದರ ನಂತರ ವ್ಯಕ್ತಿಯು ಯುಎಎನ್ (UAN) ಸಂಖ್ಯೆ ಮತ್ತು ಅವನ ಪಾಸ್‌ವರ್ಡ್ ಅನ್ನು ನಮೂದಿಸಬೇಕು.
3- ವೆಬ್‌ಸೈಟ್‌ನಲ್ಲಿ ಯುಎಎನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಹಾಕಿದ ನಂತರ ನೀವು ಪಾಸ್‌ಬುಕ್ ವೀಕ್ಷಣೆ ಬಟನ್ ಕ್ಲಿಕ್ ಮಾಡಬೇಕಾಗುತ್ತದೆ ಮತ್ತು ಅಲ್ಲಿ ನಿಮಗೆ ಬ್ಯಾಲೆನ್ಸ್ ತಿಳಿಯುತ್ತದೆ.

ಅಪ್ಲಿಕೇಶನ್‌ನಿಂದ ಬ್ಯಾಲೆನ್ಸ್ ಚೆಕ್ ಮಾಡಬಹುದು:
ಇದಲ್ಲದೆ ಪಿಎಫ್ ಬ್ಯಾಲೆನ್ಸ್ ಅನ್ನು ಇಪಿಎಫ್‌ಒ ಆ್ಯಪ್ ಮೂಲಕವೂ ಕಂಡುಹಿಡಿಯಬಹುದು. ಇದಕ್ಕಾಗಿ ಮೊದಲು ಸದಸ್ಯರ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಯುಎಎನ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ.

ಮಿಸ್ಡ್ ಕಾಲ್‌ನಲ್ಲಿ ಪಿಎಫ್ ಬ್ಯಾಲೆನ್ಸ್ ತಿಳಿಯುವುದು ಹೇಗೆ?
ನಿಮ್ಮ ಪಿಎಫ್ ಬ್ಯಾಲೆನ್ಸ್ ಬಗ್ಗೆ ನೀವು ತಿಳಿದುಕೊಳ್ಳಲು ಬಯಸಿದರೆ ಮಿಸ್ಡ್ ಕಾಲ್‌ ನೀಡುವ ಮೂಲಕವೂ ಕಂಡುಹಿಡಿಯಬಹುದು. 011-22901406 ಗೆ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ಕೊಡಬೇಕಾಗುತ್ತದೆ ಎಂದು ಇಪಿಎಫ್‌ಒ ಹೇಳಿದೆ. 

ಮಿಸ್ಡ್ ಕಾಲ್ ನೀಡಿದ ಕೂಡಲೇ ನಿಮಗೆ ಸಂದೇಶ ಬರುತ್ತದೆ. ಈ ಸಂದೇಶವು  AM-EPFOHO ನಿಂದ ಬರುತ್ತದೆ. ಇದರಲ್ಲಿ ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ಸಂದೇಶದ ಮೂಲಕ ತಿಳಿಯುತ್ತದೆ. ಈ ಸಂದೇಶವು ನಿಮ್ಮ ಖಾತೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಒಳಗೊಂಡಿದ್ದು ಸದಸ್ಯರ ಐಡಿ, ಪಿಎಫ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ, ಇಪಿಎಫ್ ಬ್ಯಾಲೆನ್ಸ್, ಅಂತಿಮ ಕೊಡುಗೆ ಎಲ್ಲವನ್ನೂ ವಿವರವಾಗಿ ತಿಳಿಸುತ್ತದೆ.

ನಿಮ್ಮ ಕಂಪನಿ ಖಾಸಗಿ ಟ್ರಸ್ಟ್ ಆಗಿದ್ದರೆ ನಿಮಗೆ ಬಾಕಿ ವಿವರಗಳು ಸಿಗುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ಕಂಪನಿಯನ್ನು ಸಂಪರ್ಕಿಸಬೇಕು.

ಮಿಸ್ಡ್ ಕಾಲ್ ಸುಲಭ ಮಾರ್ಗ ಹೇಗೆ?
ಮಿಸ್ಡ್ ಕಾಲ್ ವಿಧಾನವನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಏಕೆಂದರೆ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಉತ್ತಮ ವಿಧಾನವಾಗಿದೆ. ಯಾವುದೇ ಮೊಬೈಲ್ ಅಪ್ಲಿಕೇಶನ್ ಮತ್ತು ಎಸ್‌ಎಂಎಸ್ ಸೇವೆಗಿಂತ ಇದು ಉತ್ತಮವಾಗಿದೆ. ಇದಕ್ಕಾಗಿ ಸ್ಮಾರ್ಟ್ ಫೋನ್ ಅಗತ್ಯವಿಲ್ಲ. ನೀವು ಯಾವುದೇ ಫೋನ್‌ನಿಂದ ಮಿಸ್ಡ್ ಕಾಲ್ ನೀಡಬಹುದು ಮತ್ತು ಅಪ್ಲಿಕೇಶನ್‌ನ ಅಗತ್ಯವೂ ಇಲ್ಲ. ಸಂದೇಶ ಕಳುಹಿಸುವುದಕ್ಕಿಂತ ಮಿಸ್ಡ್ ಕಾಲ್ ನೀಡುವುದು ಸುಲಭ.

Trending News