ಅಮೆರಿಕಾದೊಂದಿಗೆ ಶೀಘ್ರದಲ್ಲೇ ವಾಣಿಜ್ಯ ಒಪ್ಪಂದ: ನಿರ್ಮಲಾ ಸೀತಾರಾಮನ್

ವಾಣಿಜ್ಯ ಸಚಿವಾಲಯವು ವಾಷಿಂಗ್ಟನ್‌ನೊಂದಿಗಿನ ವ್ಯಾಪಾರ ಒಪ್ಪಂದದ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ. ಶೀಘ್ರದಲ್ಲೇ ಮಾತುಕತೆಗಳನ್ನು ಮುಕ್ತಾಯಗೊಳಿಸುವ ಭರವಸೆಯಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Last Updated : Oct 18, 2019, 11:13 AM IST
ಅಮೆರಿಕಾದೊಂದಿಗೆ ಶೀಘ್ರದಲ್ಲೇ ವಾಣಿಜ್ಯ ಒಪ್ಪಂದ: ನಿರ್ಮಲಾ ಸೀತಾರಾಮನ್ title=
File Photo

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಭಿನ್ನಾಭಿಪ್ರಾಯಗಳು ಕಡಿಮೆಯಾಗಿದ್ದು, ಶೀಘ್ರದಲ್ಲಿಯೇ ಉಭಯ ದೇಶಗಳು ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲೈವ್ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳ ಬಳಿಕ  ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೀತಾರಾಮನ್, ವಾಣಿಜ್ಯ ಸಚಿವಾಲಯವು ವಾಷಿಂಗ್ಟನ್‌ನೊಂದಿಗಿನ ವ್ಯಾಪಾರ ಒಪ್ಪಂದದ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ. ಶೀಘ್ರದಲ್ಲೇ ಮಾತುಕತೆಗಳನ್ನು ಮುಕ್ತಾಯಗೊಳಿಸುವ ಭರವಸೆಯಿದೆ ಎಂದು ಹೇಳಿದರು.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದ್ಯತೆಯ ವ್ಯಾಪಾರ ಸವಲತ್ತುಗಳನ್ನು ರದ್ದುಪಡಿಸಿದ ನಂತರ ಜೂನ್‌ನಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಮುಂದುವರೆಸುವಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಬಾದಾಮಿ ಮತ್ತು ಸೇಬು ಸೇರಿದಂತೆ 28 ಯುಎಸ್ ಉತ್ಪನ್ನಗಳಿಗೆ ಸುಂಕವನ್ನು ವಿಧಿಸಿತ್ತು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲು ಸದ್ಯ ವಾಷಿಂಗ್ಟನ್‌ ಪ್ರವಾಸದಲ್ಲಿದ್ದಾರೆ.
 

Trending News