ಗೋವಾದಲ್ಲಿ ಮದುವೆ ನೋಂದಣಿಗೂ ಮೊದಲು ಕಡ್ಡಾಯವಾಗಲಿದೆ ಈ ಪರೀಕ್ಷೆ!

"ಗೋವಾದಲ್ಲಿ ಮದುವೆ ನೋಂದಣಿಗೆ ಮುಂಚಿತವಾಗಿ ಭವಿಷ್ಯದ ದಂಪತಿಗಳಿಗೆ ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ನಾವು ಯೋಚಿಸುತ್ತಿದ್ದೇವೆ" ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದರು.

Last Updated : Jul 9, 2019, 02:47 PM IST
ಗೋವಾದಲ್ಲಿ ಮದುವೆ ನೋಂದಣಿಗೂ ಮೊದಲು ಕಡ್ಡಾಯವಾಗಲಿದೆ ಈ ಪರೀಕ್ಷೆ! title=
Representational Image

ಪಣಜಿ: ಮದುವೆ ನೋಂದಣಿಗೆ ಮುಂಚಿತವಾಗಿ ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಂಗಳವಾರ ಹೇಳಿದ್ದಾರೆ. "ಗೋವಾದಲ್ಲಿ ಮದುವೆ ನೋಂದಣಿಗೆ ಮುಂಚಿತವಾಗಿ ಭವಿಷ್ಯದ ದಂಪತಿಗಳಿಗೆ ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ನಾವು ಯೋಚಿಸುತ್ತಿದ್ದೇವೆ" ರಾಣೆ ಐಎಎನ್‌ಎಸ್‌ಗೆ ಹೇಳಿದರು.

ಮದುವೆಗೆ ಮೊದಲು ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಕಾನೂನು ಇಲಾಖೆ ಪರಿಗಣಿಸುತ್ತಿದೆ ಎಂದು ಕಾನೂನು ಸಚಿವರೂ ಆಗಿರುವ ರಾಣೆ ತಿಳಿಸಿದ್ದಾರೆ.

"ಈ ಕಾನೂನನ್ನು ಇಲಾಖೆಯು ಶೀಘ್ರದಲ್ಲೇ ಅನುಮೋದಿಸಿದರೆ, ನಾವು ರಾಜ್ಯ ವಿಧಾನಸಭೆಯ ಮಾನ್ಸೂನ್ ಅಧಿವೇಶನದಲ್ಲಿ ಇದನ್ನು ಮಂಡಿಸುತ್ತೇವೆ" ಎಂದು ರಾಣೆ ತಿಳಿಸಿದರು. ಗೋವಾದಲ್ಲಿ ಮಾನ್ಸೂನ್ ಅಧಿವೇಶನ ಜುಲೈ 15 ರಿಂದ ಪ್ರಾರಂಭವಾಗಲಿದೆ.

2006 ರಲ್ಲಿ, ಅಂದಿನ ಆರೋಗ್ಯ ಸಚಿವರಾಗಿದ್ದ ದಯಾನಂದ್ ನರವೇಕರ್ ಅವರು ಪ್ರಸ್ತಾವನೆಯನ್ನು ಪ್ರಸ್ತಾಪಿಸಿದ್ದರು, ಗೋವಾ ಕ್ಯಾಬಿನೆಟ್ ಮದುವೆಗೆ ಮೊದಲು ಎಚ್ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಕಾನೂನನ್ನು ಅಂಗೀಕರಿಸಿತು, ಆದರೆ ಫಲಪ್ರದವಾಗಲಿಲ್ಲ.
 

Trending News