ಮುಂದಿನ ಎರಡು ದಿನಗಳವರೆಗೆ ಈ ಭಾಗದಲ್ಲಿ ಭಾರೀ ಮಳೆ ! ಜಲ ಪ್ರಳಯದ ಮುನ್ಸೂಚನೆ

Today Rain update :  2020 ರಿಂದ, ಪ್ರಕೃತಿ ಎಲ್ಲ  ನಿರೀಕ್ಷೆ, ಅಂದಾಜುಗಳನ್ನು ಮೀರಿ ರೌದ್ರಾವತಾರ ತೋರುತ್ತಿದೆ. ಕೆಲವು ಭಾಗಗಳಲ್ಲಿ ಎರಡು ದಿನಗಳವರೆಗೆ ಭಾರೀ ಮಳೆಯಾಗಲಿದೆ.  ಭೂಕುಸಿತದ ಅಪಾಯದ ನಡುವೆ ಮತ್ತೆ ಭಾರೀ ಮಳೆ ಸಾಧ್ಯತೆ  ಆಗಸ್ಟ್ 26 ರಿಂದ  ಕೊಂಚ ಬಿಡುವು ನೀಡಲಿದ್ದಾನೆ ವರುಣ 

Written by - Ranjitha R K | Last Updated : Aug 25, 2023, 09:45 AM IST
  • ಹಿಮಾಚಲ ಪ್ರದೇಶದಲ್ಲಿ ಇಂದು ಕೂಡಾ ಅಲರ್ಟ್
  • ಭೂಕುಸಿತದ ಅಪಾಯದ ನಡುವೆ ಮತ್ತೆ ಭಾರೀ ಮಳೆ ಸಾಧ್ಯತೆ
  • ಆಗಸ್ಟ್ 26 ರಿಂದ ಕೊಂಚ ಬಿಡುವು ನೀಡಲಿದ್ದಾನೆ ವರುಣ
ಮುಂದಿನ ಎರಡು ದಿನಗಳವರೆಗೆ ಈ ಭಾಗದಲ್ಲಿ ಭಾರೀ ಮಳೆ ! ಜಲ ಪ್ರಳಯದ ಮುನ್ಸೂಚನೆ  title=

Today Rain update : ಕೆಲವು ದಶಕಗಳ ಹಿಂದೆ ಇಂದಿನಷ್ಟು ಮಾಲಿನ್ಯ ಇರಲಿಲ್ಲ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಅಡ್ಡಪರಿಣಾಮಗಳು ಕಡಿಮೆ ಇತ್ತು. 2020 ರಿಂದ, ಪ್ರಕೃತಿ ಎಲ್ಲ  ನಿರೀಕ್ಷೆ, ಅಂದಾಜುಗಳನ್ನು ಮೀರಿ ರೌದ್ರಾವತಾರ ತೋರುತ್ತಿದೆ. 

ಹಿಮಾಚಲ ಪ್ರದೇಶದಲ್ಲಿ ಇಂದು ಕೂಡಾ ಅಲರ್ಟ್ : 
ಭಾರತೀಯ ಹವಾಮಾನ ಇಲಾಖೆ (IMD) ಇಂದು ಹಿಮಾಚಲ ಪ್ರದೇಶಕ್ಕೆ ಯೆಲ್ಲೋ  ಅಲರ್ಟ್ ನೀಡಲಾಗಿದೆ. ಗುಡ್ಡಗಾಡು ರಾಜ್ಯದ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿರುವ ಹಠಾತ್ ಪ್ರವಾಹ ಮತ್ತು ಭೂಕುಸಿತದ ಅಪಾಯದ ನಡುವೆ ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ರಾಜ್ಯಾದ್ಯಂತ ಕೆಲ ಜಿಲ್ಲೆಗಳ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ. 

ಇದನ್ನೂ ಓದಿ : Viral News: ವರಾಹ ಲಕ್ಷ್ಮೀನರಸಿಂಹ ದೇವಸ್ಥಾನದ ಹುಂಡಿಯಲ್ಲಿ 100 ಕೋಟಿ ರೂ. ಚೆಕ್ ಪತ್ತೆ!

ಸೋಲನ್, ಶಿಮ್ಲಾ, ಸಿರ್ಮೌರ್, ಮಂಡಿ, ಕುಲು, ಉನಾ, ಬಿಲಾಸ್‌ಪುರ ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ವಿಜ್ಞಾನಿ ಸಂದೀಪ್ ಕುಮಾರ್ ಹೇಳಿದ್ದಾರೆ. ಗಮನಾರ್ಹವೆಂದರೆ ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದ ಉಂಟಾದ ‘ಜಲ ಪ್ರಳಯ’ಭಾರೀ ವಿನಾಶವನ್ನುಂಟು ಮಾಡಿದೆ. ಇದೇ ವೇಳೆ ಕೆಲವೆಡೆ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಆಗಸ್ಟ್ 26 ರಿಂದ  ಕೊಂಚ ಬಿಡುವು ನೀಡಲಿದ್ದಾನೆ ವರುಣ : 
ಆಗಸ್ಟ್ 26 ರಿಂದ ಹಿಮಾಚಲದಲ್ಲಿ ಹವಾಮಾನ ಬದಲಾಗುತ್ತದೆ. ಕೇಂದ್ರ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ. ಆಗಸ್ಟ್ 26 ರಿಂದ 30 ರವರೆಗೆ ಮಳೆಯ ಅಬ್ಬರ ಕಡಿಮೆಯಾಗುತ್ತವೆ.

ಇದನ್ನೂ ಓದಿ : 40ನೇ ವಯಸ್ಸಿನಲ್ಲಿ 18ನೇ ಮದುವೆಗೆ ಸಿದ್ಧನಾದ ಖ್ಯಾತ ನಟ! ವಧು ಯಾರು ಗೊತ್ತಾ?

ರಾಜಧಾನಿ ದೆಹಲಿಯಲ್ಲಿ ಮಳೆ ಇರುವುದಿಲ್ಲ. ಬಿಸಿಲು ಇಲ್ಲಿನ ಜನರನ್ನು ಮತ್ತಷ್ಟು ತೊಂದರೆಗೀಡು ಮಾಡಲಿದೆ. ಶುಕ್ರವಾರ, ದಿನವಿಡೀ  ಆದ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ತಾಪಮಾನವು 35 ಡಿಗ್ರಿಗಳಿಗೆ ಹೆಚ್ಚಾಗಬಹುದು ಮತ್ತು ಕನಿಷ್ಠ 26 ಡಿಗ್ರಿಗಳಾಗಬಹುದು. ಇದರ ನಂತರ, ಆಗಸ್ಟ್ 26 ರಿಂದ 30 ರ ನಡುವೆ ಹವಾಮಾನವು ಸಂಪೂರ್ಣವಾಗಿ ಶುಷ್ಕವಾಗಿರುತ್ತದೆ.

ದೇಶದಾದ್ಯಂತ ಹವಾಮಾನ ಪರಿಸ್ಥಿತಿಗಳು :
ಆಗಸ್ಟ್ 25 ರಿಂದ 26 ರವರೆಗೆ ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಬಿಹಾರದ ವಿವಿಧ ಸ್ಥಳಗಳಲ್ಲಿ ಧಾರಾಕಾರ ಮಳೆಯ ಎಚ್ಚರಿಕೆ ನೀಡಲಾಗಿದೆ.  ಅದೇ ಸಮಯದಲ್ಲಿ, ಅಸ್ಸಾಂ ಮತ್ತು ಮೇಘಾಲಯದ ಜೊತೆಗೆ ಅರುಣಾಚಲ ಪ್ರದೇಶವು ಆಗಸ್ಟ್ 25-26 ರವರೆಗೆ ಧಾರಾಕಾರ ಮಳೆಯ ಎಚ್ಚರಿಕೆಯನ್ನು ನೀಡಿದೆ. ದೇಶದ ಉಳಿದ ಭಾಗಗಳಲ್ಲಿಯೂ ಪ್ರಸ್ತುತ ಹವಾಮಾನವು ಮುಂದಿನ ಕೆಲವು ದಿನಗಳವರೆಗೆ ಹೀಗಿಯೇ ಇರಲಿದೆ. 

ಇದನ್ನೂ ಓದಿ : 18 ಸೆಕೆಂಡುಗಳಲ್ಲಿ ಧರಾಶಾಹಿಯಾಯಿತು 9 ಬಹುಮಹಡಿ ಕಟ್ಟಡಗಳು : ಕುಲ್ಲುವಿನ ಭೂಕುಸಿತದ ಭಯಾನಕ ದೃಶ್ಯ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News