ನವದೆಹಲಿ: ಸೋಮವಾರದಂದು ಬೆಳಗ್ಗೆ ಭಾರಿ ಮಂಜು ಕವಿದ ವಾತಾವರಣದಿಂದಾಗಿ ಸುಮಾರು 27 ರೈಲು ಹಾಗೂ ಹಲವು ವಿಮಾನ ಸಂಚಾರದಲ್ಲಿ ವಿಳಂಭ ಉಂಟಾಗಿದೆ ಎನ್ನುವ ಅಂಶ ತಿಳಿದುಬಂದಿದೆ.
Delhi, NCR witnessing season’s worst fog today. Zero visibility on the roads. Drive safe! #DelhiNCR pic.twitter.com/py8YmhWDcX
— Jatin Dodeja (@DodejaJatin) February 4, 2019
ದೆಹಲಿ ಹಾಗೂ ಎನ್ಸಿಆರ್ ಸುತ್ತಮುತ್ತ ಶೂನ್ಯ ಗೋಚರತೆ ಉಂಟಾಗಿರುವ ಕಾರಣ ಹಲವಾರು ವಿಮಾನಗಳನ್ನು ತಡೆಹಿಡಿಯಲಾಗಿದೆ.ಏರ್ ಲೈನ್ಸ್ ಗಳು ಸಹಿತ ವಿಮಾನಯಾನ ಸ್ಥಿತಿಯನ್ನು ಪರೀಕ್ಷಿಸಲು ಪ್ರಯಾಣಿಕರಿಗೆ ಟ್ವೀಟ್ ಮೂಲಕ ಸಲಹೆ ನೀಡಿವೆ ಎನ್ನಲಾಗಿದೆ.ದಟ್ಟ ಮಂಜು ಕವಿದ ವಾತಾವರಣದಿಂದ ದೆಹಲಿ (ಡೆಲ್), ವಾರಣಾಸಿ (ವಿಎನ್ಎಸ್), ಪಾಟ್ನಾ (ಪ್ಯಾಟ್), ಶ್ರೀನಗರ (ಎಸ್ಎಕ್ಸ್ಆರ್), ಪಾಕ್ಯಾಂಗ್ (ಪಿವೈಜಿ), ಟುಟಿಕಾರಿನ್ (ಟಿಸಿಆರ್), ಪಾಂಡಿಚೆರಿ (ಪಿಎನ್ವೈ), ಜಬಲ್ಪುರ್ (ಜೆಎಲ್ಆರ್) ಭೋಪಾಲ್ (ಬಿಎಚ್ಒ), ಶಿರಡಿ (ಎಸ್ಎಜಿ), ಜೈಸಲ್ಮೇರ್ (ಜೆಎಸ್ಎ) ಮತ್ತು ಧರ್ಮಶಾಲಾ (ಡಿಹೆಚ್ಎಂ) ಎಲ್ಲಾ ನಿರ್ಗಮನಗಳು / ಆಗಮನಗಳ ಸ್ಥಿತಿಗತಿಯ ಪರಿಣಾಮ ಬೀರಬಹುದು ಎಂದು http: // spicejet.com, "ಸ್ಪೈಸ್ ಜೆಟ್ ಭಾನುವಾರ ರಾತ್ರಿ ಟ್ವೀಟ್ ಮಾಡಿದೆ.
Delhi to Ambala highway so.much dense fog at. 2AM today. @ANI pic.twitter.com/ZK0BAyWq5g
— Vipingarg (@vipin2garg) February 3, 2019
ಇನ್ನೊಂದೆಡೆಗೆ ವಿಸ್ತಾರಾ ಸಹ ಇದೇ ರೀತಿಯ ಎಚ್ಚರಿಕೆಯನ್ನು ಪ್ರಯಾಣಿಕರಿಗೆ ನೀಡಿದೆ. ಇನ್ನು ಹಲವರು ದಟ್ಟ ಮಂಜಿನ ಚಿತ್ರಗಳನ್ನು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.