Haryana Politics: ಮುಂಬರುವ ಲೋಕಸಭೆ ಚುನಾವಣೆಗಾಗಿ ಎಲ್ಲಾ ಪಕ್ಷಗಳ ಸಿದ್ಧತೆಗಳು ತೀವ್ರಗೊಂಡಿವೆ, ಆದರೆ ಹರಿಯಾಣದಲ್ಲಿ ಬಿಜೆಪಿ ಮತ್ತು ಜೆಜೆಪಿ ಸಮ್ಮಿಶ್ರ ಸರ್ಕಾರದ ನಡುವೆ ಹಣಾಹಣಿಯ ಸುದ್ದಿಗಳು ಇದೀಗ ಕೇಳಿಬರಲಾರಂಭಿಸಿವೆ. ಮುಂದಿನ ದಿನಗಳಲ್ಲಿ ಖಟ್ಟರ್ ಸರ್ಕಾರದ ಸಂಕಷ್ಟಗಳು ಹೆಚ್ಚಾಗಲಿವೆ ಎಂಬುದು ಹರ್ಯಾಣಾ ರಾಜಕೀಯದಲ್ಲಿ ಚರ್ಚೆಗಳು ಆರಂಭಗೊಂಡಿವೆ. ಹರಿಯಾಣ ಬಿಜೆಪಿಯ ರಾಜ್ಯ ಉಸ್ತುವಾರಿ ಬಿಪ್ಲವ್ ದೇವ್ ಅವರು ಪಕ್ಷದ ನಾಯಕಿ ಪ್ರೇಮಲತಾ ಅವರನ್ನು ಉಚ್ಚನಕಲನ್ ಕ್ಷೇತ್ರದಿಂದ ಶಾಸಕಿ ಎಂದು ಘೋಷಿಸಿದಾಗ ಈ ಹಣಾಹಣಿ ಆರಂಭಗೊಂಡಿದೆ ಎನ್ನಲಾಗಿದೆ. ಇದಕ್ಕೆ ಜೆಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಈ ವಿಷಯವು ಶಾಂತವಾಗುವ ಮಾತೆ ಎತ್ತುತ್ತಿಲ್ಲ. ಎರಡೂ ಪಕ್ಷಗಳ ಮುಖಂಡರುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯುತ್ತಲೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಖಟ್ಟರ್ ಸರ್ಕಾರದ ಅಸ್ತಿತ್ವಕ್ಕೆ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಕೇಳಿಬರಲಾರಂಭಿಸಿವೆ.
ಹರ್ಯಾಣಾದಲ್ಲಿ ಸಮೀಕರಣ ಹೇಗಿದೆ?
90 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಹರ್ಯಾಣಾದಲ್ಲಿ ಬಹುಮತಕ್ಕೆ 46 ಸ್ಥಾನಗಳ ಅವಶ್ಯಕತೆ ಇದೆ. ಪ್ರಸ್ತುತ, ಬಿಜೆಪಿ 41 ಸ್ಥಾನಗಳನ್ನು ಹೊಂದಿದ್ದರೆ, ಜೆಜೆಪಿ 10 ಸ್ಥಾನಗಳಲ್ಲಿ ಶಾಸಕರನ್ನು ಹೊಂದಿದೆ. ಜೆಜೆಪಿ ಶಾಸಕರ ಅಸಮಾಧಾನ ಶಮನವಾಗದಿದ್ದರೆ ಬಿಜೆಪಿಗೆ ಹೊಡೆತ ಬೀಳಬಹುದು. 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೂ ಮುನ್ನ ಈ ರೀತಿಯ ವೈಮನಸ್ಯದಿಂದ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಹಿನ್ನಡೆಯಾಗಲಿದೆ ಎನ್ನುತ್ತಾರೆ ರಾಜಕೀಯ ತಜ್ಞರು.
ಸ್ವತಂತ್ರ ಶಾಸಕರು ಬಿಜೆಪಿಯನ್ನು ನಂಬಿದ್ದಾರೆ
ಮತ್ತೊಂದೆಡೆ, ಹರಿಯಾಣದಲ್ಲಿ 6 ಸ್ವತಂತ್ರ ಶಾಸಕರು ಬಿಜೆಪಿ ಸರ್ಕಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಎಂದು ಕೆಲವು ರಾಜಕೀಯ ತಜ್ಞರು ನಂಬಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹರಿಯಾಣದ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲ ಅವರು ತಮ್ಮ ಶಾಸಕರ ಜೊತೆಗಿನ ಮೈತ್ರಿಯನ್ನು ಮುರಿದರೆ, ಬಿಜೆಪಿಯು ಯಾವುದೇ ವಿಶೇಷ ಪರಿಣಾಮಗಳನ್ನು ಅನುಭವಿಸಬೇಕಾಗಿಲ್ಲ ಏಕೆಂದರೆ ಆರು ಸ್ವತಂತ್ರ ಶಾಸಕರ ಸಂಖ್ಯೆಯಿಂದ ಭಾರತೀಯ ಜನತಾ ಪಕ್ಷವು ಇನ್ನೂ 47 ಬಲವನ್ನು ಹೊಂದಿರಲಿದೆ. ಇದಲ್ಲದೇ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಶಾಸಕ ಗೋಪಾಲ್ ಕಾಂಡ ಅವರ ಬೆಂಬಲವೂ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ- Amarnath Yatra: ಅಮರನಾಥ್ ಯಾತ್ರೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಅಮಿತ್ ಶಾ ಮಹತ್ವದ ಸಭೆ, ಐಬಿ ಮುಖ್ಯಸ್ಥರು ಉಪಸ್ಥಿತ
ಮುಖಂಡರ ನಡುವೆ ವಾಗ್ವಾದ
ಜೆಜೆಪಿ ಮತ್ತು ಬಿಜೆಪಿಯ ಮುಖಂಡರ ನಡುವಿನ ವಾಗ್ವಾದ ಈ ಕಾರಣದಿಂದಾಗಿ ಮತ್ತಷ್ಟು ಹೆಚ್ಚಾಗಿದೆ, ಏಕೆಂದರೆ ಗುರುವಾರ ನಾಲ್ವರು ಸ್ವತಂತ್ರ ಶಾಸಕರು ಬಿಜೆಪಿ ರಾಜ್ಯ ಉಸ್ತುವಾರಿ ಬಿಪ್ಲವ್ ದೇವ್ ಅವರನ್ನು ಭೇಟಿ ಮಾಡಿದ್ದಾರೆ. ಬಿಜೆಪಿ ಮತ್ತು ಜೆಜೆಪಿ ನಡುವಿನ ಕಚ್ಚಾಟದ ನಡುವೆ, ಈ ಸಭೆಯಿಂದ ಹಲವು ಅರ್ಥಗಳನ್ನು ಸೃಷ್ಟಿಸಿದೆ. ಆದರೆ, ಎರಡೂ ಪಕ್ಷಗಳ ನಾಯಕರು ಕೈ ಮಿಲಾಯಿಸುವ ಮೂಲಕ ಪರಸ್ಪರ ಮೇಲೆ ಯಾವುದೇ ಉಪಕಾರ ಮಾಡಿಲ್ಲ ಎಂಬಂತೆ ತೋರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.