ಮಧ್ಯರಾತ್ರಿ ನಟ ಅಕ್ಷಯ್ ಕುಮಾರ್ ಮನೆಗೆ ನುಸುಳಲೆತ್ನಿಸಿದ ಅಭಿಮಾನಿ ಬಂಧನ

ಮುಂಬೈನ ಉಪನಗರ ಜೂಹುನಲ್ಲಿರುವ ಬಾಲಿವುಡ್ ನಟ ಅಕ್ಷಯಕುಮಾರ್ ಮನೆಗೆ ಪ್ರವೆಶಿಸಲೆತ್ನಿಸಿದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. 

Last Updated : Feb 7, 2019, 11:33 AM IST
 ಮಧ್ಯರಾತ್ರಿ ನಟ ಅಕ್ಷಯ್ ಕುಮಾರ್ ಮನೆಗೆ ನುಸುಳಲೆತ್ನಿಸಿದ ಅಭಿಮಾನಿ ಬಂಧನ  title=

ಮುಂಬೈ: ಮುಂಬೈನ ಉಪನಗರ ಜೂಹುನಲ್ಲಿರುವ ಬಾಲಿವುಡ್ ನಟ ಅಕ್ಷಯಕುಮಾರ್ ಮನೆಗೆ ಪ್ರವೆಶಿಸಲೆತ್ನಿಸಿದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. 

ಬಂಧಿತನಾಗಿರುವ ವ್ಯಕ್ತಿಯನ್ನು ಅಂಕಿತ್ ಗೋಸ್ವಾಮಿ ಎನ್ನಲಾಗಿದ್ದು, ತಮ್ಮ ನೆಚ್ಚಿನ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ರನ್ನು ಭೇಟಿ ಮಾಡಲು ಮುಂಬೈವರೆಗೆ ಬಂದಿದ್ದನು ಎಂದು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೂಗಲ್ ಮೂಲಕ ಅಕ್ಷಯ್ ಕುಮಾರ್ ಅವರ ವಿಳಾಸವನ್ನು ಪತ್ತೆ ಹಚ್ಚಿದ ಆ ವ್ಯಕ್ತಿ ನಂತರ ಸೋಮವಾರ ರಾತ್ರಿ ಅವರ ಮನೆಗೆ ನುಸುಳಲು ಯತ್ನಿಸಿದ್ದಾನೆ. ಆದರೆ ಸೆಕ್ಯುರಿಟಿ ಗಾರ್ಡ್ಗಳು ಆತನನ್ನು ಹಿಡಿದಿದ್ದಾರೆ ಎನ್ನಲಾಗಿದೆ. ನಂತರ ಜೂಹು ಪೋಲಿಸ್ ಆತನನ್ನು ಪರ್ಶ್ನಿಸಿ ಮಂಗಳವಾರದಂದು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಈಗ ಆತನನ್ನು ಅಕ್ರಮವಾಗಿ ನುಸುಳಲೆತ್ನಿಸಿದ ಆರೋಪದ ಮೇಲೆ ಅವನ್ನು ಬಂಧಿಸಲಾಗಿದ್ದು ಈಗ ನ್ಯಾಯಾಂಗ ಬಂಧನಕ್ಕೆ ಅವನನ್ನು ಒಪ್ಪಿಸಲಾಗಿದೆ.

Trending News