ಹರಿಯಾಣದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್‌ ಕಸರತ್ತು

Haryana Assembly Election Result 2019 : ಮತ್ತೊಂದೆಡೆ, ಹರಿಯಾಣ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾದ ಕುಮಾರಿ ಸೆಲ್ಜಾ ಕೂಡ ಅಹ್ಮದ್ ಪಟೇಲ್ ಅವರನ್ನು ಭೇಟಿಯಾದರು.  

Last Updated : Oct 24, 2019, 01:31 PM IST
ಹರಿಯಾಣದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್‌ ಕಸರತ್ತು title=
File image

ನವದೆಹಲಿ / ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶ 2019 (Haryana Assembly Election Result 2019 ): ಹರಿಯಾಣ ವಿಧಾನಸಭಾ ಚುನಾವಣೆಯ ಎಣಿಕೆಯ ಅಂತಿಮ ಪ್ರವೃತ್ತಿಗಳು ಹೊರಬರುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ರಚಿಸಲು ಸಕ್ರಿಯವಾಗಿದ್ದು, ಪಕ್ಷದೊಳಗಿನ ಚಟುವಟಿಕೆ ತೀವ್ರಗೊಂಡಿದೆ. 

ಮೂಲಗಳ ಪ್ರಕಾರ, ಸರ್ಕಾರ ರಚಿಸಲು ಕಾಂಗ್ರೆಸ್ ಪರವಾಗಿ ಜೆಜೆಪಿಯನ್ನು ಸಂಪರ್ಕಿಸಲಾಗಿದೆ. ಕಾಂಗ್ರೆಸ್ನ ಉನ್ನತ ನಾಯಕರು ಸರ್ಕಾರ ರಚಿಸುವ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಇದರ ಅಡಿಯಲ್ಲಿ ಭೂಪಿಂದರ್ ಸಿಂಗ್ ಹೂಡಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ನ ಚಾಣಕ್ಯ ಅಹ್ಮದ್ ಪಟೇಲ್ ಮತ್ತು ಗುಲಾಮ್ ನಬಿ ಆಜಾದ್ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ, ಹರಿಯಾಣ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾದ ಕುಮಾರಿ ಸೆಲ್ಜಾ ಕೂಡ ಅಹ್ಮದ್ ಪಟೇಲ್ ಅವರನ್ನು ಭೇಟಿಯಾದರು. ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡ ಅವರು ಮಧ್ಯಾಹ್ನ 2 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ವಾಸ್ತವವಾಗಿ, ಮತಎಣಿಕೆಯ ಆರಂಭಿಕ ಪ್ರವೃತ್ತಿಗಳು ಜನ್ನಾಯಕ್ ಜನತಾ ಪಕ್ಷ (ಜೆಜೆಪಿ) ಕಿಂಗ್ ಮೇಕರ್ ಎಂದು ಸಾಬೀತು ಪಡಿಸಿವೆ. ಬಳಿಕ ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ಸಂಖ್ಯೆಗಾಗಿ ಕಾಂಗ್ರೆಸ್ ಜೆಜೆಪಿಯನ್ನು ಸಂಪರ್ಕಿಸಿತು. ಸರ್ಕಾರ ರಚಿಸಲು ಜೆಜೆಪಿ ನಾಯಕ ದುಶ್ಯಂತ್ ಚೌತಲಾ ಅವರನ್ನು ಕಾಂಗ್ರೆಸ್ ಸಂಪರ್ಕಿಸಿದೆ ಎಂದು ಮೂಲಗಳಿಂದ ವರದಿಯಾಗಿದೆ.

ಇದೇ ವೇಳೆ ಆತುರದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ದುಶ್ಯಂತ್ ಚೌತಲಾ ಹೇಳಿದ್ದಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಜೆಜೆಪಿ ನಾಳೆ ಶಾಸಕರ ಸಭೆ ಕರೆದಿದೆ. ಮೂಲಗಳ ಪ್ರಕಾರ, ಜೆಜೆಪಿ ನಾಳೆ ಶಾಸಕರ ಸಭೆ ಕರೆದು ಶಾಸಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಯಾರೊಂದಿಗೆ ಕೈ ಜೋಡಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿ ಕೊಂಡಿದೆ.
 

Trending News