Hardik Patel Will Join BJP : ಕಾಂಗ್ರೆಸ್ ಗೆ ಬಿಗ್ ಶಾಕ್ : ಬಿಜೆಪಿ ಸೇರಲು ಹಾರ್ದಿಕ್ ಪಟೇಲ್ ಮುಹೂರ್ತ ಫಿಕ್ಸ್!

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಹಾರ್ದಿಕ್ ಪಟೇಲ್, ಪಕ್ಷದ ರಾಜಕೀಯ ಕೇವಲ ಪ್ರತಿಭಟನೆಗೆ ಸೀಮಿತವಾಗಿದೆ ಎಂದು ಬರೆದುಕೊಂಡಿದ್ದಾರೆ.

Written by - Channabasava A Kashinakunti | Last Updated : May 31, 2022, 12:35 PM IST
  • ಹಾರ್ದಿಕ್ ನಿಂದ ಕಾಂಗ್ರೆಸ್ ಗೆ ಭಾರಿ ಹಿನ್ನಡೆ
  • ಜೂನ್ 2 ರಂದು ಬಿಜೆಪಿ ಸೇರಲಿದ್ದಾರೆ ಹಾರ್ದಿಕ್ ಪಟೇಲ್
  • ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಹಾರ್ದಿಕ್ ಪಟೇಲ್
Hardik Patel Will Join BJP : ಕಾಂಗ್ರೆಸ್ ಗೆ ಬಿಗ್ ಶಾಕ್ : ಬಿಜೆಪಿ ಸೇರಲು ಹಾರ್ದಿಕ್ ಪಟೇಲ್ ಮುಹೂರ್ತ ಫಿಕ್ಸ್! title=

Hardik Patel BJP : ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಜೂನ್ 2 ರಂದು ಬಿಜೆಪಿ ಸೇರಲಿದ್ದಾರೆ. ಇತ್ತೀಚೆಗೆ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಗುಡ್ ಬೈ ಹೇಳಿದ್ದರು. ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಹಾರ್ದಿಕ್ ಪಟೇಲ್, ಪಕ್ಷದ ರಾಜಕೀಯ ಕೇವಲ ಪ್ರತಿಭಟನೆಗೆ ಸೀಮಿತವಾಗಿದೆ ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ಸೇರುವ ಕುರಿತು ಜನತೆಗೆ ಪತ್ರ ಬರೆದಿರುವ ಹಾರ್ದಿಕ್ ಪಟೇಲ್, CAA-NRC ಮತ್ತು ಆರ್ಟಿಕಲ್ 370 ಅನ್ನು ಹಾರ್ದಿಕ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ದೇಶಕ್ಕೆ ಪ್ರತಿಭಟನೆ ಬೇಕಿಲ್ಲ ಬದಲಾಗಿ ಅವರ ಭವಿಷ್ಯದ ಬಗ್ಗೆ ಯೋಚಿಸುವ ಪರ್ಯಾಯ ಎಂದು ಬರೆದುಕೊಂಡಿದ್ದರು. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವಾಗಲಿ, ಸಿಎಎ-ಎನ್‌ಆರ್‌ಸಿ ಸಮಸ್ಯೆಯಾಗಲಿ, ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದತಿಯಾಗಲಿ ಅಥವಾ ಜಿಎಸ್‌ಟಿ ಜಾರಿಯಾಗಲಿ. ದೇಶವು ಬಹುಕಾಲದಿಂದ ಅವುಗಳಿಗೆ ಪರಿಹಾರವನ್ನು ಬಯಸುತ್ತಿತ್ತು ಮತ್ತು ಕಾಂಗ್ರೆಸ್ ಪಕ್ಷವು ಇದಕ್ಕೆ ಅಡ್ಡಿಯಾಗಿ ಕೆಲಸ ಮಾಡುತ್ತಲೇ ಇತ್ತು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : PPF, ಹಿರಿಯ ನಾಗರಿಕರ ಉಳಿತಾಯ, ಸುಕನ್ಯಾ ಸಮೃದ್ಧಿ ಯೋಜನೆಯ ಚಂದಾದಾರರಿಗೆ ಸಿಹಿ ಸುದ್ದಿ!

ಹಾರ್ದಿಕ್ ನಿಂದ ಕಾಂಗ್ರೆಸ್ ಗೆ ಭಾರಿ ಹಿನ್ನಡೆ

ರಾಜೀನಾಮೆ ನೀಡುವ ಮೊದಲು, ಹಾರ್ದಿಕ್ ಪಟೇಲ್ ತಮ್ಮ ಟ್ವಿಟರ್ ಖಾತೆಯಲ್ಲಿ, ಪಕ್ಷದ ಹೆಸರು ಮತ್ತು ಪೋಸ್ಟ್ ಅನ್ನು ತೆಗೆದುಹಾಕಿದ್ದರು. ಇದಾದ ಬಳಿಕ ಅವರು ಶೀಘ್ರದಲ್ಲೇ ಪಕ್ಷ ತೊರೆಯುವ ಘೋಷಣೆ ಮಾಡಲಿದ್ದಾರೆ ಎಂಬ ಊಹಾಪೋಹಗಳು ತೀವ್ರಗೊಂಡಿದ್ದವು. ಈ ವರ್ಷ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ, ಪಟೇಲ್ ನಿರ್ಗಮನ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಲಿದೆ.

ಪಾಟಿದಾರ್ ಚಳವಳಿಯಿಂದ ಕಾಂಗ್ರೆಸ್ ಲಾಭ ಪಡೆದಿತ್ತು

2017ರಲ್ಲಿ ಪಾಟಿದಾರರಿಗೆ ಮೀಸಲಾತಿ ನೀಡುವಂತೆ ಪಟೇಲರು ನಡೆಸಿದ ಆಂದೋಲನದಿಂದ ಕಾಂಗ್ರೆಸ್ ಲಾಭ ಪಡೆದಿತ್ತು, ಆದರೆ 2019ರಲ್ಲಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ನಂತರ ಪಕ್ಷಕ್ಕೆ ಸಮುದಾಯದ ಬೆಂಬಲ ದುರ್ಬಲಗೊಂಡಿದೆ. 2017ರ ಗುಜರಾತ್ ಚುನಾವಣೆಯಲ್ಲಿ ರಾಜ್ಯದ 182 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಕೇವಲ ಒಂಬತ್ತು ಸ್ಥಾನಗಳಿಂದ ಹಿನ್ನಡೆ ಅನುಭವಿಸಿತು. ಎರಡು ದಶಕಗಳಿಗೂ ಹೆಚ್ಚು ಕಾಲ ರಾಜ್ಯದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸುವ ಸಾಮರ್ಥ್ಯ ಅವರಿಗೆ ಇದೆ ಎಂದು ಆಗ ನಂಬಲಾಗಿತ್ತು. ಆದರೆ ಈಗ ಹಾರ್ದಿಕ್ ನಿರ್ಗಮನದಿಂದ ಕಾಂಗ್ರೆಸ್‌ಗೆ ಸ್ಪರ್ಧೆ ಕಷ್ಟಕರವಾಗಿದೆ.

ಇದನ್ನೂ ಓದಿ : ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಪತ್ರ: ತನ್ನ ತಾಯಿಯ ನೋವಿನ ಕಥೆ ಬರೆದ ಪ್ರಧಾನಿ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News