ಅಯೋಧ್ಯೆಯಲ್ಲಿ ಬೃಹತ್ ಶ್ರೀರಾಮನ ಮೂರ್ತಿ ನಿರ್ಮಾಣಕ್ಕೆ ಮುಂದಾದ ಸಿಎಂ ಯೋಗಿ

ಶ್ರೀರಾಮನ ಜಪವನ್ನು ಮುಂದುವರೆಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಈಗ ಅಯೋಧ್ಯೆಯಲ್ಲಿ ಬೃಹತ್ ಶ್ರೀರಾಮ್ ನ ಮೂರ್ತಿ ನಿರ್ಮಾಣಕ್ಕೆ  ಮುಂದಾಗಿದ್ದಾರೆ.

Last Updated : Nov 7, 2018, 01:39 PM IST
ಅಯೋಧ್ಯೆಯಲ್ಲಿ ಬೃಹತ್ ಶ್ರೀರಾಮನ ಮೂರ್ತಿ ನಿರ್ಮಾಣಕ್ಕೆ ಮುಂದಾದ ಸಿಎಂ ಯೋಗಿ  title=

ಲಕ್ನೋ: ಶ್ರೀರಾಮನ ಜಪವನ್ನು ಮುಂದುವರೆಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಈಗ ಅಯೋಧ್ಯೆಯಲ್ಲಿ ಬೃಹತ್ ಶ್ರೀರಾಮ್ ನ ಮೂರ್ತಿ ನಿರ್ಮಾಣಕ್ಕೆ  ಮುಂದಾಗಿದ್ದಾರೆ.

ಇತ್ತಿಚೆಗಷ್ಟೇ ರಾಮಮಂದಿರದ ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದ ಸಿಎಂ ಯೋಗಿ ಈಗ ಅಯೋಧ್ಯೆ ನಗರದಲ್ಲಿ ಶ್ರೀರಾಮನ ಬೃಹತ್ ಪ್ರತಿಮೆ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ ಸಿಎಂ ಯೋಗಿ" ಶ್ರೀ ರಾಮನ ಮೂರ್ತಿಗೆ ಅನುಗುಣವಾಗಿ ಭೂಮಿಯ ಅವಶ್ಯಕತೆಯ ಬಗ್ಗೆ ಚರ್ಚಿಸಲಾಗುವುದು.ಈ ಪ್ರತಿಮೆಯನ್ನು ದೇವಸ್ತಾನದಲ್ಲಿರಿಸಲಾಗುತ್ತದೆ. ಆದರೆ ಇದು ಅಯೋಧ್ಯೆಯ ಪ್ರತೀಕವಾಗಿರುತ್ತದೆ ಎಂದು ಯೋಗಿ ತಿಳಿಸಿದರು.

ಈಗಾಗಲೇ ಪ್ರತಿಮೆಗಾಗಿ ಭೂಮಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ ಯೋಗಿ " ಅಯೋಧ್ಯೆ  ನಮ್ಮ  ಗೌರವ,ಹೆಮ್ಮೆ ಮತ್ತು ಪ್ರತಿಷ್ಠೆಯ ಸಂಕೇತ  ಆದ್ದರಿಂದ ಅಯೋಧ್ಯೆಗೆ ಯಾರು ಅನ್ಯಾಯವೆಸಗಲು ಸಾಧ್ಯವಿಲ್ಲ ಎಂದು ತಿಳಿಸಿದರು. 

ಅಯೋಧ್ಯೆಯಲ್ಲಿ ದೀಪಾವಳಿಯ ಪ್ರಯುಕ್ತ ಆಯೋಜಿಸಿದ್ದ ದೀಪೋತ್ಸವದ ಸಂದರ್ಭದಲ್ಲಿ ಯೋಗಿ ಅಯೋಧ್ಯೆಯಲ್ಲಿ ಶ್ರೀರಾಮನ ಹೆಸರಿನಲ್ಲಿ ನೂತನ ಏರ್ಪೋರ್ಟ್ ದಶರಥನ ಹೆಸರಿನಲ್ಲಿ ವೈದಕೀಯ ಕಾಲೇಜ್ ನಿರ್ಮಿಸುವುದಾಗಿ ಘೋಷಿಸಿದ್ದರು.

 

Trending News