Actress Hema: ನಟಿ ಹೇಮಾಗೆ ಬಿಗ್ ರಿಲೀಫ್.. ರೇವ್ ಪಾರ್ಟಿ ಪ್ರಕರಣದಲ್ಲಿ ಜಾಮೀನು..!

Telugu actor Hema granted conditional bail: ನ್ಯಾಯಾಂಗ ಬಂಧನದ ಭಾಗವಾಗಿ ಪರಪ್ಪ ಅಗ್ರಹಾರ ಜೈಲಿನಲ್ಲಿರುವ ಹೇಮಾ ಅವರಿಗೆ ಬೆಂಗಳೂರು ಗ್ರಾಮಾಂತರ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ ನಿನ್ನೆ (ಜೂನ್ 12) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.  

Written by - Savita M B | Last Updated : Jun 13, 2024, 10:34 AM IST
  • ತೆಲುಗಿನ ಜನಪ್ರಿಯ ಹಿರಿಯ ನಟಿ ಹೇಮಾಗೆ ಭರ್ಜರಿ ರಿಲೀಫ್ ಸಿಕ್ಕಿದೆ.
  • ಕೆಲ ದಿನಗಳ ಹಿಂದೆ ಬೆಂಗಳೂರು ಪೊಲೀಸರು ಜಿಆರ್ ಫಾರಂಹೌಸ್ ಮೇಲೆ ದಾಳಿ ನಡೆಸಿದಾಗ ನಟಿ ಹೇಮಾ ಸಿಕ್ಕಿಬಿದ್ದಿದ್ದರು.
Actress Hema: ನಟಿ ಹೇಮಾಗೆ ಬಿಗ್ ರಿಲೀಫ್.. ರೇವ್ ಪಾರ್ಟಿ ಪ್ರಕರಣದಲ್ಲಿ ಜಾಮೀನು..! title=

Actress Hema: ತೆಲುಗಿನ ಜನಪ್ರಿಯ ಹಿರಿಯ ನಟಿ ಹೇಮಾಗೆ ಭರ್ಜರಿ ರಿಲೀಫ್ ಸಿಕ್ಕಿದೆ. ಪ್ರಸ್ತುತ ನ್ಯಾಯಾಂಗ ಬಂಧನ ಪರಪ್ಪ ಅಗ್ರಹಾರ ಜೈಲಿನಲ್ಲಿರುವ ಹೇಮಾ ಅವರಿಗೆ ಬೆಂಗಳೂರು ಗ್ರಾಮಾಂತರ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ ನಿನ್ನೆ (ಜೂನ್ 12) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ರೇವ್ ಪಾರ್ಟಿ ಪ್ರಕರಣದಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಹೇಮಾ ಅವರಿಂದ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ, ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಅವರ ವಕೀಲ ಮಹೇಶ್ ಕಿರಣ್ ಶೆಟ್ಟಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ನಂತರ ನ್ಯಾಯಾಲಯ ಹೇಮಾಗೆ ಷರತ್ತುಬದ್ಧ ಜಾಮೀನು ನೀಡಿದೆ..

ಇದನ್ನೂ ಓದಿ-ದರ್ಶನ್‌ ಗೆಳತಿ ಪವಿತ್ರಾ ಗೌಡ ಮೊದಲ ಪತಿಯಿಂದ ದೂರವಾಗಿದ್ದೇಕೆ?   

ಕೆಲ ದಿನಗಳ ಹಿಂದೆ ಬೆಂಗಳೂರು ಪೊಲೀಸರು ಜಿಆರ್ ಫಾರಂಹೌಸ್ ಮೇಲೆ ದಾಳಿ ನಡೆಸಿದಾಗ ನಟಿ ಹೇಮಾ ಸಿಕ್ಕಿಬಿದ್ದಿದ್ದರು. ಆದರೆ, ಆಕೆ ನಾನು ಬೆಂಗಳೂರಿನಲ್ಲಿ ಇಲ್ಲ.. ಹೈದರಾಬಾದ್‌ನಲ್ಲಿ ಇದ್ದೆನೆ ಎಂದು ಫಾರ್ಮ್‌ಹೌಸ್‌ನಿಂದ ವಿಡಿಯೋ ರೆಕಾರ್ಡ್ ಮಾಡಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು.. ಬೆಂಗಳೂರು ರೇವ್ ಪಾರ್ಟಿಯಲ್ಲಿ ಹೇಮಾ ಕೂಡ ಇದ್ದರು ಎಂದು ಪೊಲೀಸರು ತನಿಖೆ ವೇಳೆ ಬಹಿರಂಗವಾಗಿತ್ತು,. 

ಆ ಬಳಿಕ ಪೊಲೀಸರು ಕೂಡಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕಳುಹಿಸಿದ್ದರು. ಕಾರಣಾಂತರಗಳಿಂದ ವಿಚಾರಣೆಗೆ ಹಾಜರಾಗದ ನಟಿ ಹೇಮಾ ಅವರಿಗೆ ಬೆಂಗಳೂರು ಪೊಲೀಸರು ಎರಡನೇ ಬಾರಿ ನೋಟಿಸ್ ಕಳುಹಿಸಿದ್ದರು.. ವಿಚಾರಣೆಗೆ ಹಾಜರಾದ ನಂತರ ಹೇಮಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.. ಅದೇ ವೇಳೆಗೆ ಕಲಾವಿದರ ಸಂಘವೂ ಹೇಮಾ ಅವರ ಸದಸ್ಯತ್ವವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿತು.

ಇದನ್ನೂ ಓದಿ-ಅದಕ್ಕೇ ಪ್ರಭಾಸ್ ಮದುವೆ ಆಗಲ್ಲ..! ಅಸಲಿ ವಿಷಯ ಬಿಚ್ಚಿಟ್ಟ ನಿರ್ದೇಶಕ ರಾಜಮೌಳಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News