ಇನ್ಮುಂದೆ ವಿಮಾನಗಳಲ್ಲಿಯೂ ಸಾರಾಯಿ, ನಾನ್ವೆಜ್ ಊಟ, ನಿಯಮಗಳಲ್ಲಿ ಬದಲಾವಣೆ ಮಾಡಿದ ಸರ್ಕಾರ

ಒಂದು ವೇಳೆ ನೀವು ವಿಮಾನದಲ್ಲಿ ಪ್ರಯಾಣ ಬೆಳೆಸಲು ಬಯಸುತ್ತಿದ್ದರೆ ಅಥವಾ ವಿಮಾನಯಾನ ಮಾಡುವುದು ನಿಮ್ಮ ನಿರಂತರ ಪ್ರಕ್ರಿಯೇಯಾಗಿದ್ದರೆ ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ, ಏಕೆಂದರೆ ಇನ್ಮುಂದೆ ನೀವು ವಿಮಾನದಲ್ಲಿಯೂ ಕೂಡ ನಾನ್ ವೆಜ್ ಆಹಾರ ಸೇವಿಸಬಹುದು. ಇದರ ಜೊತೆಗೆ ನೀವು ವಿಮಾನದಲ್ಲಿ ಮದ್ಯ ಕೂಡ ಸೇವಿಸಬಹುದು. ಇದುವರೆಗೆ ಈ ಸೇವೆಗಳಿಗೆ ವಿಮಾನದಲ್ಲಿ ಅನುಮತಿ ನೀಡಲಾಗಿರಲಿಲ್ಲ.

Last Updated : Aug 28, 2020, 02:57 PM IST
ಇನ್ಮುಂದೆ ವಿಮಾನಗಳಲ್ಲಿಯೂ ಸಾರಾಯಿ, ನಾನ್ವೆಜ್ ಊಟ, ನಿಯಮಗಳಲ್ಲಿ ಬದಲಾವಣೆ ಮಾಡಿದ ಸರ್ಕಾರ title=

ನವದೆಹಲಿ: ಒಂದು ವೇಳೆ ನೀವು ವಿಮಾನದಲ್ಲಿ ಪ್ರಯಾಣ ಬೆಳೆಸಲು ಬಯಸುತ್ತಿದ್ದರೆ ಅಥವಾ ವಿಮಾನಯಾನ ಮಾಡುವುದು ನಿಮ್ಮ ನಿರಂತರ ಪ್ರಕ್ರಿಯೇಯಾಗಿದ್ದರೆ ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ, ಏಕೆಂದರೆ ಇನ್ಮುಂದೆ ನೀವು ವಿಮಾನದಲ್ಲಿಯೂ ಕೂಡ ನಾನ್ ವೆಜ್ ಆಹಾರ ಸೇವಿಸಬಹುದು. ಇದರ ಜೊತೆಗೆ ನೀವು ವಿಮಾನದಲ್ಲಿ ಮದ್ಯ ಕೂಡ ಸೇವಿಸಬಹುದು. ಇದುವರೆಗೆ ಈ ಸೇವೆಗಳಿಗೆ ವಿಮಾನದಲ್ಲಿ ಅನುಮತಿ ನೀಡಲಾಗಿರಲಿಲ್ಲ. ಪ್ರಸ್ತುತ ಸರ್ಕಾರ ವಿಮಾನದಲ್ಲಿ ಯ್ತಾತ್ರೆ ಮಾಡುವ ಯಾತ್ರಿಗಳ Standard Operating Procedure(SOP)ನಲ್ಲಿ ಬದಲಾವಣೆ ಮಾಡಿದೆ.  ಕೊರೊನಾ ಲಾಕ್ ಡೌನ್ ಕಾಲಾವಧಿಯಲ್ಲಿ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಸೇವೆಯನ್ನು ಪುನರಾರಂಭಿಸಿದರೂ ಕೂಡ ಹಲವು ರೀತಿ ನಿಬಂಧನೆಗಳನ್ನು ವಿಧಿಸಲಾಗಿದೆ. 

ಸದ್ಯ ಬಿಡುಗಡೆಯಾಗಿರುವ ನೂತನ ಮಾರ್ಗಸೂಚಿಗಳ ಅಡಿ ವಿಮಾನಯಾನ ಕಂಪನಿಗಳು ತಮ್ಮ ಪ್ರಯಾಣಿಕರಿಗೆ ದೆಸಿ ಪ್ರಯಾಣದ ವೇಳೆ  ಪ್ರೀ ಪ್ಯಾಕ್ಡ್ ಫುಡ್, ಡ್ರಿಂಕ್ಸ್  ಇತ್ಯಾದಿಗಳನ್ನು ನೀಡಬಹುದಾಗಿದೆ. ಅಂತಾರಾಷ್ಟ್ರೀಯ ವಿಮಾನಯಾನದ ವೇಳೆಯೂ ಕೂಡ ಪ್ರಯಾಣಿಕರು ಮದ್ಯ ಹಾಗೂ ಬಿಸಿಯೂಟ ಸೇವಿಸಬಹುದಾಗಿದೆ.

ಡೊಮೆಸ್ಟಿಕ್ ವಿಮಾನಯಾನಕ್ಕೆ ನೂತನ ಮಾರ್ಗಸೂಚಿಗಳು
- ಇದುವರೆಗೆ ಯಾತ್ರಿಗಳಿಗಾಗಿ ಮೀಲ್ಸ್ ಸರ್ವಿಸೆಸ್ ಇರಲಿಲ್ಲ. ನೀರು ಗ್ಯಾಲರಿಯಿಂದ ಅಥವಾ ಸೀಟ್ ಬಳಿಯೇ ಸೇವೆ ನೀಡಲಾಗುತ್ತಿತ್ತು. ಯಾತ್ರಿಗಳು ಫ್ಲೈಟ್ ಒಳಗಡೆ ಏನನ್ನೂ ಸೇವಿಸುವ ಹಾಗಿರಲಿಲ್ಲ.
- ನೂತನ SOPಗಳ ಅಡಿ ಏರ್ಲೈನ್ಸ್ ಕಂಪನಿಗಳು ಪ್ರೀಪ್ಯಾಕ್ಡ್ ಸ್ನ್ಯಾಕ್ಸ್/ಡ್ರಿಂಕ್ಸ್ ತನ್ನ ಯಾತ್ರಿಗಳಿಗೆ ನೀಡಬಹುದಾಗಿದೆ.
- ಈ ಸೇವೆಯನ್ನು ಕೇವಲ ಡಿಸ್ಪೋಸೆಬಲ್ ಪ್ಲೇಟ್, ಕಟಲರಿ ಹಾಗೂ ಗ್ಲಾಸ್ ಗಳಲ್ಲಿ ಮಾತ್ರ ಒದಗಿಸಬೇಕು. ಹಾಗೂ ಅವುಗಳನ್ನು ಪುನಃ ಬಳಕೆ ಮಾಡಬಾರದು.
- ಕ್ರೂ ಮೆಂಬರ್ ಗಳು ಒಂದು ವೇಳೆ ಯಾತ್ರಿಗಳಿಗೆ ಆಹಾರ ನೀಡಿದರೆ, ಪ್ರತಿ ಬಾರಿ ಅವರು ಗ್ಲೋಸ್ ಗಳನ್ನು ಬದಲಾಯಿಸಬೇಕು. 
- ಈ ವೇಳೆ ಯಾತ್ರಿಗಳು ಆನ್ ಬೋರ್ಡ್ ಮನರಂಜನೆಯ ಮಜಾ ಕೂಡ ಸವಿಯಬಹುದು.
- ಎಲ್ಲ ಇಯರ್ ಬಡ್ಸ್ ಹಾಗೂ ಹೆಡ್ ಫೋನ್ ಗಳನ್ನು ಸ್ಯಾನಿಟೈಸ್ ಮಾಡಬೇಕು.

ಅಂತಾರಾಷ್ಟ್ರೀಯ ವಿಮಾನಯಾನದ SOPಗಳು
- ಮೊದಲು  ಬೋರ್ಡಿಂಗ್ ವೇಳೆ  ಪ್ರೀಪ್ಯಾಕ್ಡ್ ಫುಡ್ ಗೆ ಅನುಮತಿ ಇರಲಿಲ್ಲ. ಚಹಾ, ಕಾಫಿ ಸಹ ನಿಷೇಧಿಸಲಾಗಿತ್ತು.
- ಇದೀಗ ವಿಮಾನಯಾನದ ವೇಳೆ ಹಾಟ್ ಮೀಲ್ಸ್ ಹಾಗೂ ಡ್ರಿಂಕ್ಸ್ ಗೆ ಅನುಮತಿ ನೀಡಲಾಗಿದ್ದು, ಯಾತ್ರಿಗಳು ಪ್ರಯಾಣದ ವೇಳೆ ಸೀಮಿತ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಲು ಸಾಧ್ಯವಾಗಲಿದೆ.
- ಆಲ್ಕೋಹಾಲ್ ಅನ್ನು ಡಿಸ್ಪೋಸೆಬಲ್ ಕಂಟೇನರ್ ನಲ್ಲಿ ಮಾತ್ರ ನೀಡಬೇಕು.
- ಸಿಬ್ಬಂದಿ ಸದಸ್ಯರು ಪ್ರಯಾಣಿಕರಿಗೆ ಆಹಾರವನ್ನು ನೀಡಿದರೆ, ನಂತರ ಅವರು ಪ್ರತಿ ಬಾರಿ ತಮ್ಮ ಗ್ಲೋಸ್ ಗಳನ್ನು ಬದಲಾಯಿಸಬೇಕು.
- ಎಲ್ಲ ಇಯರ್ ಬಡ್ಸ್ ಹಾಗೂ ಹೆಡ್ ಫೋನ್ ಗಳನ್ನು ಸ್ಯಾನಿಟೈಸ್ ಮಾಡಬೇಕು.

ಪ್ರಸ್ತುತ  ಪರಿಸ್ಥಿತಿಯ ಹಿನ್ನೆಲೆ ಯಾತ್ರಿಗಳು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಪ್ರಯಾಣದ ವೇಳೆ ಆಲ್ಕೊಹಾಲ್ ಸೇವನೆ ಮತ್ತು ಮನರಂಜನಾ ವ್ಯವಸ್ಥೆ ಮಾಡಲು ಕೂಡ ಸಹ ಅನುಮತಿಸಲಾಗಿದೆ. ಸರ್ಕಾರದ ಈ ನಿರ್ಧಾರವು ಕಡಿಮೆ ದರವನ್ನು ವಿಮಾನಯಾನ ಸೇವೆ ನೀಡುವ  ಕಂಪನಿಗಳಿಗೆ ಪ್ರಯೋಜನವನ್ನು ನೀಡಲಿದೆ. ಇದರಿಂದ ಅವರು ಪ್ರಯಾಣಿಕರಿಂದ ಹೆಚ್ಚಿನ ಹಣವನ್ನು ಪಡೆಯಬಹುದು ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಕೂಡ ಗಣನೀಯ ಏರಿಕೆಯಾಗುವ ಸಾಧಯ್ತೆ ಇದೆ.

Trending News