ನವದೆಹಲಿ: ಕರೋನಾ ವೈರಸ್‌ನಿಂದಾಗಿ, ಲಾಕ್‌ಡೌನ್ ಮಧ್ಯೆ ದೇಶದಲ್ಲಿ ಒಳ್ಳೆಯ ಸುದ್ದಿ ಬರುತ್ತಿದೆ. ಲಾಕ್‌ಡೌನ್(LOCKDOWN) ನಂತರ ರೈತರಿಗೆ ಆರ್ಥಿಕ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ರೈತರು ಈ ಏಪ್ರಿಲ್ ತಿಂಗಳಲ್ಲಿ ಸರ್ಕಾರದ ಈ ಸೌಲಭ್ಯದ ಲಾಭ ಪಡೆಯಬಹುದು ಎಂದು ಸರ್ಕಾರ ಹೇಳಿದೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಏಪ್ರಿಲ್ ತಿಂಗಳಿನಿಂದ ರೈತರಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ತಮ್ಮ ಖಾತೆಗೆ ಆರಂಭಿಕವಾಗಿ 2000 ರೂಪಾಯಿಗಳನ್ನು ಹಾಕಲಿದೆ. ರೈತರಿಗೆ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
21 ದಿನಗಳ ಲಾಕ್‌ಡೌನ್: ಕೇಂದ್ರ ಸರ್ಕಾರದಿಂದ 1 ಲಕ್ಷ 70 ಸಾವಿರ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಣೆ
ಬಡವರಿಗೆ 1.70 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್:
ಬಡವರಿಗೆ 1 ಲಕ್ಷ 70 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ನೀಡಲು ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಈ ಹಣವನ್ನು ನೇರವಾಗಿ ಬಡವರ ಖಾತೆಗೆ ಕಳುಹಿಸಲಾಗುತ್ತದೆ. ಯಾವುದೇ ಬಡವರು ಹಸಿವಿನಿಂದ ಬಳಲುವುದಿಲ್ಲ. ಪ್ರತಿ ಬಡವರಿಗೆ 5 ಕೆಜಿ ಹೆಚ್ಚುವರಿ ಆಹಾರ ಧಾನ್ಯಗಳು ಮುಂದಿನ ಮೂರು ತಿಂಗಳವರೆಗೆ ಉಚಿತವಾಗಿ ಸಿಗುತ್ತವೆ. ಅಂದರೆ, 80 ಕೋಟಿ ಫಲಾನುಭವಿಗಳಿಗೆ ಪ್ರಧಾನ್ ಮಂತ್ರಿ ಅನ್ನ ಯೋಜನೆ ಅಡಿಯಲ್ಲಿ ಈ ಸೌಲಭ್ಯಗಳು ಸಿಗಲಿವೆ. ಇದು ಪಿಡಿಎಸ್ ಅಡಿಯಲ್ಲಿ ಒದಗಿಸಲಾದ ಪಡಿತರ ಹೆಚ್ಚುವರಿ ಸೌಲಭ್ಯವಾಗಿರುತ್ತದೆ.
CoronaVirus: ಈ ಸಂಖ್ಯೆಗಳಿಗೆ ಕರೆ /Whastapp ಮಾಡಿದ್ರೆ ಸಿಗುತ್ತೆ ಅಗತ್ಯ ವಸ್ತುಗಳ Home Delivery
ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ವಿಮೆ:
ಕರೋನವೈರಸ್ (Coronavirus) ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ವಿಮೆ ನೀಡಲಾಗುವುದು ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದರು. ಕರೋನಾ ವಿರುದ್ಧ ಯುದ್ಧ ಮಾಡುತ್ತಿರುವ ವೈದ್ಯರಂತಹ ಯೋಧರಿಗೆ 50 ಲಕ್ಷ ವಿಮೆ ಇರುತ್ತದೆ. ಈ ರೀತಿಯಾಗಿ 20 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಈ ವಿಮಾ ರಕ್ಷಣೆಯನ್ನು ನೀಡಲಾಗುವುದು.