ಗುಡ್ ನ್ಯೂಸ್: LPG ಸಿಲಿಂಡರ್ ಬೆಲೆಯಲ್ಲಿ ನೆಮ್ಮದಿ ಸಿಗುವ ಸಾಧ್ಯತೆ..!

ಪ್ರತಿ ಆರು ತಿಂಗಳಿಗೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ ಹಾಗೂ ಹೊಸ ಬೆಳೆಗಳನ್ನು ಜಾರಿಗೊಳಿಸಲಾಗುತ್ತದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರ ಏರಿಕೆಯಾಗುತ್ತಿದೆ.

Last Updated : Mar 30, 2020, 08:34 PM IST
ಗುಡ್ ನ್ಯೂಸ್: LPG ಸಿಲಿಂಡರ್ ಬೆಲೆಯಲ್ಲಿ ನೆಮ್ಮದಿ ಸಿಗುವ ಸಾಧ್ಯತೆ..! title=

ಸಧ್ಯ ಇಡೀ ವಿಶ್ವ ಕೊರೊನಾವೈರಸ್ ನ ಮಹಾಮಾರಿಯ ಕಪಿಮುಷ್ಠಿಗೆ ಸಿಲುಕಿದೆ. ಇದರಿಂದ ವಿಶ್ವಾಧ್ಯಂತ ಮಾರುಕಟ್ಟೆಗಳು ಸ್ಥಬ್ಧಗೊಂಡಿವೆ. ಕೈಗಾರಿಕೆಗಳು ನಿಂತುಹೋಗಿವೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಘೋಷಿಸಲಾಗಿರುವ ಲಾಕ್ ಡೌನ್ ನಿಂದ ಅಡುಗೆ ಅನಿಲ, ಪೆಟ್ರೋಲ್-ಡಿಸೇಲ್ ಮತ್ತು ವಿದ್ಯುತ್ ಗೆ ಬೇಡಿಗೆ ಗಣನೀಯವಾಗಿ ಕುಸಿದಿದೆ. ಹೀಗಾಗಿ ಈ ವಸ್ತುಗಳ ಬೆಲೆಯೂ ಕೂಡ ಕುಸಿಯಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏಪ್ರಿಲ್ 1 ರಂದು ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ಅನಿಲ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ. ದೇಶೀಯ ಅಡುಗೆ ಅನಿಲ ಬೆಲೆ ಪರಿಷ್ಕರಣೆಯಲ್ಲಿ ಸಾಮಾನ್ಯ ಜನರಿಗೆ ದೊಡ್ಡ ಪರಿಹಾರ ಸಿಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಮತ ವ್ಯಕ್ತಪಡಿಸಿದ್ದು, ಅಡುಗೆ ಅನಿಲ ಬೆಲೆಯಲ್ಲಿ ಶೇ.20-25 ರಷ್ಟು ಇಳಿಕೆಯಾಗಲಿದೆ  ಎಂದು ನಿರೀಕ್ಷಿಸಲಾಗಿದೆ.

ಕುಸಿದ ಬೇಡಿಕೆಯಿಂದಾಗಿ, ಕಚ್ಚಾ ತೈಲ ಬೆಲೆಯಲ್ಲಿ ಕಳೆದ 17 ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಯುಎಸ್ನಲ್ಲಿ, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ನಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ ಶೇ. 5.3 ಇಳಿಕೆ ಕಂಡು 20 ಡಾಲರ್ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಬ್ರೆಂಟ್ ಕಚ್ಚಾ ತೈಲ ಶೇ.6.5 ಇಳಿಕೆ ಕಂಡು $ 23 ಕ್ಕೆ ತಲುಪಿದೆ. ಕಚ್ಚಾ ತೈಲ ಬೆಲೆ ಕುಸಿತದ ನೇರ ಪರಿಣಾಮ ಪೆಟ್ರೋಲಿಯಂ ಉತ್ಪನ್ನಗಳಾದ ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಕಂಡುಬರುತ್ತಿದೆ.

ಪ್ರತಿ 6 ತಿಂಗಳಿಗೊಮ್ಮೆ ದೇಶದಲ್ಲಿ ಅಡುಗೆ ಅನಿಲ ಬೆಲೆಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ನಂತರ ಹೊಸ ಬೆಲೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಅನಿಲ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿವೆ, ಆದರೆ ಈ ಬಾರಿ ದೊಡ್ಡ ಪ್ರಮಾಣದ ಇಳಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶೀಯ ಅಡುಗೆ ಅನಿಲ ಬೆಲೆ ಪ್ರತಿ ಯುನಿಟ್‌ಗೆ 3.23 ರಿಂದ 2.48 ಕ್ಕೆ ಇಳಿಯಬಹುದು ಎಂದು ಮಾರುಕಟ್ಟೆ ತಜ್ಞರು ನೀರಿಕ್ಷಿಸುತ್ತಿದ್ದಾರೆ.

ಈ ಬೆಲೆ ಇಳಿಕೆಯಿಂದ ದೇಶೀಯ ಅಡುಗೆ ಅನಿಲ ಉತ್ಪಾದಕ ಕಂಪನಿಗಳಾದ ಒಎನ್‌ಜಿಸಿ, ಆಯಿಲ್ ಇಂಡಿಯಾ, ರಿಲಯನ್ಸ್, ಗೇಲ್, ವೇದಾಂತ ಗಳಿಗೆ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

ದೇಶೀಯ ಅಡುಗೆ ಅನಿಲ ಮಾರುಕಟ್ಟೆಯ ಮೇಲೆ ಒಂದು ದೃಷ್ಟಿ

- ಪ್ರತಿ 6 ತಿಂಗಳಿಗೊಮ್ಮೆ ದೇಶೀಯ ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ.
- ಹೊಸ ಬೆಲೆಗಳನ್ನು ಏಪ್ರಿಲ್ 1 ರಂದು ಬಿಡುಗಡೆ ಮಾಡಲಾಗುತ್ತದೆ.
- ಅನಿಲ ಬೆಲೆಗಳು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ.
- ಅನಿಲ ಬೆಲೆ ಯುನಿಟ್‌ಗೆ 3.23 ರಿಂದ 2.48 ಕ್ಕೆ ಇಳಿಯಬಹುದು.
- 6 ವರ್ಷಗಳವರೆಗೆ ಅತಿದೊಡ್ಡ ಕಡಿತದ ಇದಾಗಲಿದೆ ಎಂದು ಅಂದಾಜಿಸಲಾಗಿದೆ.
- ಅಕ್ಟೋಬರ್ 2019 ರಲ್ಲಿ, ಎರಡು ವರ್ಷಗಳ ನಂತರ ಬೆಲೆಗಳನ್ನು ಕಡಿಮೆ ಮಾಡಲಾಗಿತ್ತು.
- ಇದಕ್ಕೂ ಮುನ್ನ ಸತತ 4 ಬಾರಿ ಬೆಲೆ ಏರಿಕೆ ಮಾಡಲಾಗಿದೆ.
- 1 ನವೆಂಬರ್ 2014 ರಿಂದ ಅನಿಲ ಬೆಲೆಗೆ ನೂತನ ಸೂತ್ರವನ್ನು ಜಾರಿಗೆ ತರಲಾಗಿತ್ತು.
- ಅಕ್ಟೋಬರ್ 1, 2016 ರಂದು ಅನಿಲದ ಬೆಲೆ $2.5 / ಯುನಿಟ್ ಆಗಿತ್ತು.
- ಏಪ್ರಿಲ್ 1, 2017 ರಂದು ಅನಿಲದ ಬೆಲೆ $2.48 / ಯುನಿಟ್ ಆಗಿತ್ತು.
- ಅಕ್ಟೋಬರ್ 1, 2017 ರಂದು ಅನಿಲದ ಬೆಲೆ $ 2.89 / ಯುನಿಟ್ ಆಗಿತ್ತು.
- ಅಕ್ಟೋಬರ್ 1, 2019 ರಂದು ಬೆಲೆಗಳು $ 3.23 / ಯುನಿಟ್ ತಲುಪಿದೆ.

Trending News