ನವದೆಹಲಿ: ಈಗಾಗಲೇ ಮಹಾದಾಯಿ ವಿಚಾರದಲ್ಲಿ ಸುಪ್ರೀಂಕೋರ್ಟ್ ನ ನಿರ್ದೇಶನದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.ಆದಾಗ್ಯೂ ಕೂಡ ಈಗ ಗೋವಾ ಮತ್ತೆ ಈ ವಿಚಾರದಲ್ಲಿ ಕ್ಯಾತೆ ತೆಗೆದಿದೆ.
ಸೋಮವಾರದಂದು ಈ ವಿಚಾರವಾಗಿ ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್ 'ಮಹಾದಾಯಿ ನ್ಯಾಯಾಧೀಕರಣ ಕೇಂದ್ರ ಸರ್ಕಾರ ಸಂಪೂರ್ಣ ಒಪ್ಪಿಗೆ ಕೊಡುವವರೆಗೆ ಚಾಲನೆಯಲ್ಲಿರುತ್ತದೆ ಎಂದು ಹೇಳಿದ್ದಾರೆ.
SC has clarified that no work can be started by K'taka without all permissions of central govt: Goa CM#MhadeiTribunal#PramodSawant#Goahttps://t.co/jEFf7V77RK pic.twitter.com/15nduVdSqs
— United News of India (@uniindianews) March 2, 2020
ಈ ಕುರಿತಾಗಿ ಪ್ರಕಟಣೆಯಲ್ಲಿ ತಿಳಿಸಿರುವ ಸಿಎಂ ಗೋವಾ, ಸುಪ್ರೀಂ ಕೋರ್ಟ್ ಗೆ ಮಾಡಿರುವ ಮನವಿ ಹಿನ್ನಲೆಯಲ್ಲಿ ಸುಪ್ರೀಂ 17/04/2014 ರಂದು ನೀಡಿರುವ ಆದೇಶದಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ಒಪ್ಪಿಗೆ ಇಲ್ಲದೆ ಈ ಯೋಜನೆಗೆ ವಿವರವಾದ ದಾಖಲೆಯನ್ನು ಸಿದ್ಧಪಡಿಸದ ಹೊರತು ಯಾವುದೇ ಕೆಲಸವನ್ನು ಆರಂಭಿಸುವಂತಿಲ್ಲ ಎಂದು ಅವರು ಸುಪ್ರೀಂ ಆದೇಶವನ್ನು ಉಲ್ಲೇಖಿಸಿದ್ದಾರೆ.
ಇತ್ತೀಚಿಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಅಧಿಸೂಚನೆ ಹೊರಡಿಸಲು ಆದೇಶಿಸಿತ್ತು, ಇದರ ಅನುಗುಣವಾಗಿ ಕೇಂದ್ರ ಸರ್ಕಾರ ಮಹಾದಾಯಿ ವಿಚಾರವಾಗಿ ಗೆಜೆಟ್ ನೋಟಿಫಿಕೇಶನ್ ನಲ್ಲಿ ಪ್ರಕಟಿಸಿತ್ತು.