Girls Marriage Age: ಸಮಾಜವಾದಿ ಪಕ್ಷದ (SP) ಹಲವು ಮುಖಂಡರು ಹೆಣ್ಣುಮಕ್ಕಳ ಕನಿಷ್ಠ ವಿವಾಹ ವಯಸ್ಸನ್ನು 18 ರಿಂದ 21 ಕ್ಕೆ ಏರಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಬು ಅಜ್ಮಿ (Abu Azmi) ನಂತರ, ಶಫೀಕರ್ ರಹಮಾನ್ ಬರ್ಕೆ (Shafiq Ur Rehman Bark) ಜೊತೆಗೆ ಇದೀಗ ಎಸ್ಪಿ ಸಂಸದ ಎಸ್ಟಿ ಹಸನ್ (ST Hasan) ಶುಕ್ರವಾರ ಕೇಂದ್ರದ ಪ್ರಸ್ತಾವನೆಯನ್ನು ವಿರೋಧಿಸಿ ವಿಚಿತ್ರ ವಾದಗಳನ್ನು ಮಂಡಿಸಿದ್ದಾರೆ. ಈ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಹಸನ್, ಹೆಣ್ಣು ಮಕ್ಕಳು ಸಂತಾನ ಹುಟ್ಟಿಸಲು ಲಾಯಕ್ಕಾದಾಗ ಅವರ ಮದುವೆ (Girls Marriage Minimum Age) ಮಾಡಿಸಬೇಕು. ಇಲ್ಲದಿದ್ದರೆ ವಯಸ್ಸಾದಂತೆ ಮಕ್ಕಳು ಪೋರ್ನ್ ಸಿನಿಮಾಗಳನ್ನು ನೋಡಲಾರಂಭಿಸುತ್ತಾರೆ ಮತ್ತು ಅವರಲ್ಲಿ ಅಶಿಸ್ತು ಹೆಚ್ಚುತ್ತದೆ ಎಂಬ ವಿಚಿತ್ರ ವಾದವನ್ನು ಅವರು ಮಂಡಿಸಿದ್ದಾರೆ.
ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, “ಹೆಣ್ಣುಗಳ ಸಂತಾನೋತ್ಪತ್ತಿ ವಯಸ್ಸು 16-17 ವರ್ಷದಿಂದ 30 ವರ್ಷಗಳವರೆಗೆ ಇರುತ್ತದೆ. ಮದುವೆಯ ಪ್ರಸ್ತಾಪಗಳು 16 ನೇ ವಯಸ್ಸಿನಿಂದ ಬರಲು ಪ್ರಾರಂಭಿಸುತ್ತವೆ. ಮದುವೆ ತಡವಾದರೆ ಅದರಿಂದ ಎರಡು ಅನಾನುಕೂಲತೆಗಳಿರುತ್ತವೆ, ಒಂದು ಬಂಜೆತನದ ಸಾಧ್ಯತೆ. ಎರಡನೆಯದು ವಯಸ್ಸಾದಂತೆ ಮಕ್ಕಳು ವ್ಯವಸ್ಥಿತವಾಗಿರುವುದಿಲ್ಲ. ನೀವು ನಿಮ್ಮ ಜೀವನದ ಕೊನೆಯ ದಶಕದಲ್ಲಿದ್ದರೂ ಕೂಡ ನಿಮ್ಮ ಮಕ್ಕಳು ಇನ್ನೂ ವಿದ್ಯಾರ್ಥಿಗಳೇ. ನಾವು ನೈಸರ್ಗಿಕ ಪ್ರಕ್ರಿಯೆಯನ್ನು ಮುರಿಯುತ್ತಿದ್ದೇವೆ" ಎಂದು ಅವರು ತರ್ಕ ಮಂಡಿಸಿದ್ದಾರೆ.
“ಒಂದು ಹುಡುಗಿ ಪ್ರಬುದ್ಧಳಾಗುತ್ತಾಳೆ ಮತ್ತು ಸಂತಾನೋತ್ಪತ್ತಿ ವಯಸ್ಸಿಗೆ ಬಂದಾಗ ಅವಳು ಮದುವೆಯಾಗಬೇಕು ಎಂದು ನಾನು ನಂಬುತ್ತೇನೆ. ಹುಡುಗಿ 16 ನೇ ವಯಸ್ಸಿನಲ್ಲಿ ಪ್ರಬುದ್ಧಳಾಗಿದ್ದರೆ, ಅವಳು 16 ನೇ ವಯಸ್ಸಿನಲ್ಲಿ ಮದುವೆಯಾಗಬಹುದು. ಅವಳು 18 ನೇ ವಯಸ್ಸಿನಲ್ಲಿ ಮತ ಚಲಾಯಿಸಬಹುದಾದರೆ ಅವಳು ಏಕೆ ಮದುವೆಯಾಗಬಾರದು? ಮಕ್ಕಳು ದೊಡ್ಡವರಾದಾಗ, ಪೋರ್ನ್ ವೀಡಿಯೋ, ಫೋಟೋಗಳನ್ನು ನೋಡತೊಡಗಿದಾಗ ಅವರಲ್ಲಿ ಅಶಿಸ್ತು ಹೆಚ್ಚುತ್ತದೆ" ಎಂದು ಸಪಾ ಸಂಸದರು ತಮ್ಮ ತರ್ಕದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ-RBI : ಈಗ ಹರಿದ ನೋಟುಗಳನ್ನು ಉಚಿತವಾಗಿ ಬದಲಾಯಿಸಿ : ಮರಳಿ ಪಡೆಯಿರಿ ಪೂರ್ಣ ಹಣ
"ನಾವು ಲಿವ್-ಇನ್ ಸಂಬಂಧಗಳಿಗೆ ಅವಕಾಶ ನೀಡಿದ್ದೇವೆ, ಇದು ಅಶಿಸ್ತು ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತಿದೆ. ಈ ವಯಸ್ಸಿನಲ್ಲಿ ಹಾರ್ಮೋನುಗಳ ಬದಲಾವಣೆಯು ಅಪರಾಧಕ್ಕೆ ಕಾರಣವಾಗಬಹುದು" ಎಂದು ಹಸನ್ ಹೇಳಿದ್ದಾರೆ. ಇದಕ್ಕೂ ಮುನ್ನ ಗುರುವಾರ ಎಸ್ಪಿ ನಾಯಕ ಅಬು ಅಜ್ಮಿ ಕೂಡ ಮದುವೆ ವಯಸ್ಸನ್ನು ಹೆಚ್ಚಿಸುವುದರಿಂದ ಹೆಣ್ಣುಮಕ್ಕಳು ತಪ್ಪು ದಾರಿಗೆ ಹೋಗಬಹುದು ಎಂದು ಹೇಳಿದ್ದರು. ಸ್ವಂತ ಮಕ್ಕಳಿಲ್ಲದವರಿಂದ ಈ ಕಾನೂನು ತರಲಾಗುತ್ತಿದೆ ಎಂದೂ ಅವರು ಹೇಳಿದ್ದರು. ಈ ವಿಚಾರದಲ್ಲಿ ಗ್ರಾಮಸ್ಥರು ಮತ್ತು ಗಿರಿಜನರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಅವರು ತಮ್ಮ ವಾದವನ್ನು ಮಂಡಿಸಿದ್ದರು.
ಇದನ್ನೂ ಓದಿ-ದೇಶದಲ್ಲಿ ಇದುವರೆಗೆ 101 ಓಮಿಕ್ರಾನ್ ಪ್ರಕರಣಗಳ ವರದಿ- ಕೇಂದ್ರ ಸರ್ಕಾರ
ಬಡತನದ ತರ್ಕ ನೀಡಿ ವಿರೋಧಿಸಿದ ಬರ್ಕ್, ಅಖಿಲೇಶ್ ಮಾತ್ರ ಸೈಲೆಂಟ್
ಇದಕ್ಕೂ ಮುನ್ನ ಎಸ್ಪಿ ಸಂಸದ ಶಫೀಕುರ್ ರೆಹಮಾನ್ ಬರ್ಕ ಕೂಡ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದರು. ಭಾರತ ಬಡ ದೇಶವಾಗಿದ್ದು, ಪ್ರತಿಯೊಬ್ಬರು ಮಗಳಿಗೆ ಚಿಕ್ಕವಯಸ್ಸಿನಲ್ಲಿ ಮದುವೆ ಮಾಡಬೇಕೆಂದು ಬಯಸುತ್ತಾರೆ. ನಾನು ಸಂಸತ್ತಿನಲ್ಲಿ ಈ ಮಸೂದೆಯನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ. ಆದರೆ, ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಮಾತ್ರ ತಮ್ಮ ಸಂಸದರ ಹೇಳಿಕೆಯಿಂದ ನುಣುಚಿಕೊಂಡಿದ್ದಾರೆ ಮತ್ತು "ತಮ್ಮ ಪಕ್ಷ ಪ್ರಗತಿಪರವಾಗಿದ್ದು, ಹೆಣ್ಣುಮಕ್ಕಳು ಮತ್ತು ಮಹಿಳೆಯರ ಅಭಿವೃದ್ಧಿಗೆ ತಮ್ಮ ಪಕ್ಷ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಹೇಳಿಕೆಗಳಿಗೂ ಸಮಾಜವಾದಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ" ಎಂಬ ಡಿಫೆನ್ಸಿವ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ-UIDAI Update : ಶೀಘ್ರದಲ್ಲೇ ನಿಮ್ಮ Voter ID ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಬೇಕು - ಯಾಕೆ ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.