ಪ್ರವಾಸದಲ್ಲಿ ಮಜಾ ಮಾಡುತ್ತಿದ್ದ ಗೆಳೆಯ.! ಬಾಯ್ ಫ್ರೆಂಡ್ ಪರವಾಗಿ ಪರೀಕ್ಷೆಗೆ ಹಾಜರಾದ ಯುವತಿ.!

ಉತ್ತರಾಖಂಡ್‌ಗೆ ವಿಹಾರಕ್ಕೆ ತೆರಳಿದ್ದ ತನ್ನ ಪ್ರಿಯಕರನ ಪರವಾಗಿ ಯುವತಿ  ಪರೀಕ್ಷೆಗೆ ಹಾಜರಾಗಿದ್ದಾಳೆ. ಡಮ್ಮಿ ಪರೀಕ್ಷಾರ್ಥಿಯಾಗಿ ಪರೀಕ್ಷೆಗೆ ಹಾಜರಾಗಿದ್ದ 24 ವರ್ಷದ ಯುವತಿ ಸಿಕ್ಕಿಬಿದ್ದಿದ್ದಾಳೆ .

Written by - Ranjitha R K | Last Updated : Dec 27, 2022, 01:12 PM IST
  • ಗೆಳೆಯನ ಪರವಾಗಿ ಪರೀಕ್ಷೆಗೆ ಹಾಜರಾದ ಯುವತಿ
  • ಉತ್ತರಾಖಂಡ್ ನಲ್ಲಿ ಮಜಾ ಮಾಡುತ್ತಿದ್ದ ಯುವಕ
  • ಇದೀಗ ಯುವತಿಯ ಭವಿಷ್ಯಕ್ಕೆ ಪೆಟ್ಟು
ಪ್ರವಾಸದಲ್ಲಿ ಮಜಾ ಮಾಡುತ್ತಿದ್ದ ಗೆಳೆಯ.!  ಬಾಯ್ ಫ್ರೆಂಡ್ ಪರವಾಗಿ ಪರೀಕ್ಷೆಗೆ ಹಾಜರಾದ ಯುವತಿ.!  title=

ಗುಜರಾತ್ : ಬಾಯ್ ಫ್ರೆಂಡ್ ಪ್ರವಾಸದ ಮೋಜಿನಲ್ಲಿದ್ದರೆ ಆತನ ಗೆಳತಿ, ಆತನ ಪರವಾಗಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಹೌದು,  24 ವರ್ಷದ ಯುವತಿ ಗೆಳೆಯನ ಪರವಾಗಿ, ಬಿಕಾಂ ಪರೀಕ್ಷೆಗೆ ಹಾಜರಾಗಿ ಸಿಕ್ಕಿಬಿದ್ದಿದ್ದಾಳೆ. ಗೆಳತಿಯನ್ನು ಪರೀಕ್ಷೆ ಬರೆಯಲು ಬಿಟ್ಟು ಗೆಳೆಯ ಮಾತ್ರ ಉತ್ತರಾಖಂಡ್‌ನಲ್ಲಿ  ರಜಾ ದಿನಗಳನ್ನು ಕಳೆಯುತ್ತಿದ್ದ. 

ಗೆಳೆಯನ ಪರವಾಗಿ ಪರೀಕ್ಷೆಗೆ ಹಾಜರಾಗಿದ್ದ ಯುವತಿ ಸಿಕ್ಕಿ ಬಿದ್ದಿದ್ದು ಆಕೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಇಬ್ಬರೂ ಶಾಲಾ ದಿನಗಳಿಂದಲೇ ಸ್ನೇಹಿತರು ಎನ್ನುವುದು ತಿಳಿದು ಬಂದಿದೆ. ಕಂಪ್ಯೂಟರ್ ಸಹಾಯದಿಂದ  ಹಾಲ್  ಟಿಕೆಟ್ ನಲ್ಲಿ ಗೆಳೆಯನ ಫೋಟೋದ ಬದಲಿಗೆ ತನ್ನ ಫೋಟೋವನ್ನು ಯುವತಿ ಬಳಸಿದ್ದಾಳೆ. ಈ ಮೂಲಕ ಪರೀಕ್ಷಾ ಕೊಠಡಿಗೆ  ಪ್ರವೇಶ ಪಡೆದುಕೊಂಡಿದ್ದಾಳೆ. 

ಇದನ್ನೂ ಓದಿ : Viral Video: ಶಾಲೆಯಲ್ಲಿಯೇ ಜುಟ್ಟು ಹಿಡಿದು ಕಿತ್ತಾಡಿಕೊಂಡ ಪ್ರಿನ್ಸಿಪಾಲ್-ಟೀಚರ್: ಶಿಕ್ಷಕರ ಜಡೆಜಗಳ ಕಂಡ ಮಕ್ಕಳು ಮಾಡಿದ್ದೇನು?

ಯುವತಿ ಪರೀಕ್ಷಾ ಹಾಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾಳೆ ನಿಜ, ಆದರೆ ತನ್ನ ಗುರುತನ್ನು ಬಹಳ ಹೊತ್ತು ಮುಚ್ಚಿಡುವಲ್ಲಿ ವಿಫಲವಾಗಿದ್ದಾಳೆ. ಪ್ರಿಯಕರನ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬಂದ ಯುವತಿ ಕಾಲೇಜು ಸಿಬ್ಬಂದಿಯ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಯುವತಿ ಸಿಕ್ಕಿ ಬೀಳುತ್ತಿರುವಂತೆಯೇ ಆಕೆಯ ಗೆಳಯನಿಗೆ ಫೋನ್ ಮಾಡಿ ವಿಚಾರಿಸಲಾಗಿದೆ. ಈ ವೇಳೆ ಆತ ಉತ್ತರಾಖಂಡ್‌ನಲ್ಲಿರುವುದಾಗಿ ತಿಳಿಸಿದ್ದಾನೆ. 

ಆಕೆಯ ಗೆಳೆಯ ತೃತೀಯ ವರ್ಷದ ಬಿ.ಕಾಂ ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗಿದ್ದ. ಇದಾದ ನಂತರ ಆತನನ್ನು ಪಾಸ್ ಮಾಡಿಸುವ ಉದ್ದೇಶದಿಂದ ಆತನ ಪರವಾಗಿ ಗೆಳತಿ ಪರೀಕ್ಷೆ ಬರೆಯಲು ಮುಂದಾಗಿದ್ದಾಳೆ. 
 
 ಇದನ್ನೂ ಓದಿ : Shocking News: ಚಹಾ ಮಾಡಿಕೊಡದ ಪತ್ನಿಯನ್ನು ಹತ್ಯೆ ಮಾಡಿದ ಪತಿ!

ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿರುವ ವೀರ್ ನರ್ಮದ್ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯ (VNSGU) ಸಿಂಡಿಕೇಟ್‌ ಶಿಕ್ಷೆಯನ್ನು ಶಿಫಾರಸು ಮಾಡಿದೆ. ಯುವತಿ ಮಾಡಿರುವ ಈ ಅಪರಾಧ ಆಕೆಯ ಭವಿಷ್ಯದ ಮೇಲೆ ಭಾರೀ ಹೊಡೆತ ನೀಡಲಿದೆ ಎಂದೇ ಹೇಳಲಾಗುತ್ತಿದೆ.   

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News