Daily GK Quiz: ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಯಾರಿಗೆ ಇರುತ್ತದೆ..?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Dec 21, 2024, 05:24 PM IST
  • ಸಂವಿಧಾನದ ಯಾವ ಭಾಗವು ಕಾರ್ಯಾಂಗದೊಂದಿಗೆ ವ್ಯವಹರಿಸುತ್ತದೆ?
  • ಭಾರತದ ಅಟಾರ್ನಿ ಜನರಲ್ ಇವರಿಂದ ನೇಮಕಗೊಳ್ಳುತ್ತಾರೆ..?
  • ಭಾರತದ ರಾಜ್ಯದಲ್ಲಿ ರಾಜ್ಯ ಸರ್ಕಾರದ ಮುಖ್ಯಸ್ಥರು ಯಾರು?
Daily GK Quiz: ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಯಾರಿಗೆ ಇರುತ್ತದೆ..? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಭಾರತ ಸರ್ಕಾರವು ರಚಿಸಿದ 'ಒಂದು ರಾಷ್ಟ್ರ ಒಂದು ಚುನಾವಣೆ' ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?

ಉತ್ತರ: ರಾಮನಾಥ್ ಕೋವಿಂದ್

ಪ್ರಶ್ನೆ 2: ಪ್ರತಿ ವರ್ಷ ಪ್ರವಾಸಿ ಭಾರತೀಯ ದಿನವನ್ನಾಗಿ ಯಾವ ದಿನವನ್ನು ಆಚರಿಸಲಾಗುತ್ತದೆ?

ಉತ್ತರ: ಜನವರಿ 9

ಪ್ರಶ್ನೆ 3: ʼರಿಪಬ್ಲಿಕ್ʼ ಎಂಬ ಮಹಾಕೃತಿಯ ಕರ್ತೃ ಯಾರು? 

ಉತ್ತರ: ಪ್ಲೇಟೋ

ಪ್ರಶ್ನೆ 4: ಪ್ರಪಂಚದ ಮೊದಲ ಮರದ ಉಪಗ್ರಹ 'ಲಿಗ್ನೋಸ್ಯಾಟ್'ಅನ್ನು ಇತ್ತೀಚೆಗೆ ಉಡಾವಣೆ ಮಾಡಿದ ದೇಶ ಯಾವುದು.?

ಉತ್ತರ: ಜಪಾನ್

ಪ್ರಶ್ನೆ 5: ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯರೋಗ ವರದಿ 2024ರ ಪ್ರಕಾರ, ಟಿಬಿ ರೋಗಿಗಳ ಪ್ರಕರಣಗಳಲ್ಲಿ ಅಗ್ರ ರಾಷ್ಟ್ರ ಯಾವುದು?

ಉತ್ತರ: ಭಾರತ

ಇದನ್ನೂ ಓದಿ: ರಾಜ್ಯದ ಗಡಿ ಭಾಗದ ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌..! ಎಪಿಯಲ್ಲಿ ಮದ್ಯದ ಬೆಲೆ ಭಾರೀ ಇಳಿಕೆ 

ಪ್ರಶ್ನೆ 6: ರಾಜ್ಯಸಭಾ ಸದಸ್ಯನ ಅಧಿಕಾರದ ಅವಧಿ ಎಷ್ಟು..?

ಉತ್ತರ: 6 ವರ್ಷಗಳು

ಪ್ರಶ್ನೆ 7: ಭಾರತದ ರಾಜ್ಯದಲ್ಲಿ ರಾಜ್ಯ ಸರ್ಕಾರದ ಮುಖ್ಯಸ್ಥರು ಯಾರು?

ಉತ್ತರ: ಮುಖ್ಯಮಂತ್ರಿ

ಪ್ರಶ್ನೆ 8: ಭಾರತದ ಅಟಾರ್ನಿ ಜನರಲ್ ಇವರಿಂದ ನೇಮಕಗೊಳ್ಳುತ್ತಾರೆ..?

ಉತ್ತರ: ರಾಷ್ಟ್ರಪತಿ

ಪ್ರಶ್ನೆ 9: ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಯಾರಿಗೆ ಇರುತ್ತದೆ..?

ಉತ್ತರ: ರಾಷ್ಟ್ರಪತಿ

ಪ್ರಶ್ನೆ 10: ಸಂವಿಧಾನದ ಯಾವ ಭಾಗವು ಕಾರ್ಯಾಂಗದೊಂದಿಗೆ ವ್ಯವಹರಿಸುತ್ತದೆ?

ಉತ್ತರ: ಭಾಗ 5

ಇದನ್ನೂ ಓದಿ:  2024 ಕ್ಕಿಂತ 2025 ರಲ್ಲಿ ಹೆಚ್ಚಿವೆ ಸರ್ಕಾರಿ ಮತ್ತು ಬ್ಯಾಂಕ್‌ ರಜೆಗಳು..! ಸಂಪೂರ್ಣ ಲಿಸ್ಟ್‌ ಇಲ್ಲಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News