ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ದ ಬಹುನಿರೀಕ್ಷಿತ ಯೋಜನೆಯ ನೇತೃತ್ವ ವಹಿಸಿದ್ದ ಡಾ. ಕೆ.ಶಿವನ್ ಜೀವನ ನಿಜಕ್ಕೂ ಅಚ್ಚರಿ ಎಂದೇ ಹೇಳಬಹುದು.
ಮಾವಿನ ಹಣ್ಣಿನ ತೋಟದಲ್ಲಿ ಕೂಲಿಯಾಗಿದ್ದ ಡಾ. ಕೆ.ಶಿವನ್ ಅವರು ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯ ನೇತೃತ್ವವನ್ನು ವಹಿಸಿದ್ದು ಅವರು ಬೆಳೆದು ಬಂದ ಸುದೀರ್ಘ ಪಯಣದ ಚಿತ್ರಣವನ್ನು ನೀಡುತ್ತದೆ. ಇಂದು ಪ್ರಧಾನಿ ಮೋದಿಯವರ ಜೊತೆ ಮಾತನಾಡುವ ಸಂದರ್ಭದಲ್ಲಿ ಅವರು ಏಕಾಏಕಿ ಭಾವುಕರಾಗಿರುವುದು ಚಂದ್ರಯಾನ 2 ಯೋಜನೆ ಬಗ್ಗೆ ಅವರಿಗಿರುವ ಬದ್ದತೆಯನ್ನು ತೋರಿಸುತ್ತದೆ. ಖಾಸಗಿ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿ ' ತಮ್ಮ ವಿದ್ಯಾರ್ಥಿ ಜೀವನದ ಬಹುತೇಕ ಭಾಗ ತಾವು ಪ್ಯಾಂಟ್ ನ್ನೇ ತೋಡುತ್ತಿರಲಿಲ್ಲ, ಬದಲಾಗಿ ತಾವು ಉಡುತ್ತಿದ್ದಿದ್ದು ಧೋತಿ ಎಂದು ಹೇಳಿದರು. ನನಗೆ ಏನು ಸಿಕ್ಕಿಲ್ಲ ಎನ್ನುವುದರ ಬಗ್ಗೆ ನಾನು ಚಿಂತಿಸಲಿಲ್ಲ, ಆದರೆ ನನಗೆ ಸಿಕ್ಕಿದ್ದರಲ್ಲೆ ಗುರಿಯನ್ನು ತಲುಪಿದೆ' ಎಂದು ಸಂತೃಪ್ತರಾದರು.
ಇದೇ ವೇಳೆ ಅವರು ತಮ್ಮ ಬಾಲ್ಯ ಜೀವನವನ್ನು ಸ್ಮರಿಸುತ್ತಾ 'ನನ್ನ ಗ್ರಾಮದಲ್ಲಿ ವಿಶೇಷ ಜೀವನವನ್ನು ಕಳೆದೆ. ನಾನು ಆಗ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದೆ. ರಜೆ ದಿನಗಳಲ್ಲಿ ನನ್ನ ತಂದೆಗೆ ಸಹಾಯ ಮಾಡಲು ಮಾವಿನ ಹಣ್ಣಿನ ತೋಟಕ್ಕೆ ಹೋಗುತ್ತಿದ್ದೆ. ನಾನು ಹೋದಾಗಲೆಲ್ಲಾ ನಮ್ಮಪ್ಪ ಕೂಲಿಗೆ ಹೇಳುತ್ತಿರಲಿಲ್ಲ' ಎಂದರು. ಇದೇ ವೇಳೆ ತಮ್ಮ ತಂದೆ ಕಾಲೇಜುಗಳನ್ನು ಆಯ್ಕೆ ಮಾಡುತ್ತಿರುವ ಬಗ್ಗೆ ವಿವರಿಸಿದ ಅವರು 'ಬಹುತೇಕರು ತಮ್ಮ ಕಾಲೇಜನ್ನು ಆಯ್ಕೆ ಮಾಡಬೇಕಾದರೆ ಹಲವು ಮಾನದಂಡಗಳನ್ನು ಹೊಂದಿರುತ್ತಾರೆ. ಆದರೆ ನನ್ನ ತಂದೆ ಅವರಿಗಿಂತ ಭಿನ್ನವಾಗಿದ್ದರು. ಅವರು ಹೆಚ್ಚಾಗಿ ಮನೆಗೆ ಹತ್ತಿರವಿರುವ ಕಾಲೇಜಿಗೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಿದ್ದರು. ಆ ಮೂಲಕ ಕಾಲೇಜು ಮುಗಿದ ನಂತರ ಮನೆಯಲ್ಲಿ ಅವರಿಗೆ ಸಹಾಯ ಮಾಡಲಿ ಎಂದು ಅವರು ಹೀಗೆ ಮಾಡುತ್ತಿದ್ದರು. ನಮ್ಮ ಮನೆ ಪರಿಸ್ಥಿತಿ ಅಷ್ಟಕಷ್ಟೇ ಎನ್ನುವಂತಿತ್ತು' ಎಂದು ತಿಳಿಸಿದರು
"ನಾನು ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದಾಗ ಸ್ಯಾಂಡಲ್ ಧರಿಸಲು ಪ್ರಾರಂಭಿಸಿದೆ. ಅಲ್ಲಿಯವರೆಗೆ ನಾವು ಬರಿಗಾಲಿನಲ್ಲಿ ನಡೆಯುತ್ತಿದ್ದೆ. ನಮ್ಮಲ್ಲಿ ಯಾವುದೇ ಪ್ಯಾಂಟ್ ಇರಲಿಲ್ಲ, ನಾವು ಯಾವಾಗಲೂ ಧೋತಿಯಲ್ಲಿರುತ್ತಿದ್ದೆನು" ಎಂದು ಡಾ.ಶಿವನ್ ನಗುವಿನೊಂದಿಗೆ ಸ್ಮರಿಸಿಕೊಳ್ಳುತ್ತಾರೆ. ತಮ್ಮ ಇಂತಹ ಕಷ್ಟಕರ ಸಂದರ್ಭದಲ್ಲಿಯೂ ಪೋಷಕರು ಮೂರು ಹೊತ್ತು ಊಟ ನೀಡಲು ಸಮರ್ಥರಾಗಿದ್ದರು. ಇದಕ್ಕ್ಕೆತಾವು ಕೃತಜ್ನರಾಗಿರಬೇಕು 'ಎಂದು ಹೇಳಿದರು
ಇನ್ನು ತಮ್ಮ ಉನ್ನತ ವ್ಯಾಸಂಗದ ಬಗ್ಗೆ ಮಾತನಾಡುತ್ತಾ ಡಾ.ಶಿವನ್ ಅವರು ತಮ್ಮ ತಂದೆಗೆ ಎಂಜಿನಿಯರಿಂಗ್ ಕೋರ್ಸ್‌ಗೆ ಹಣ ನೀಡುವ ಸಾಮರ್ಥ್ಯವಿಲ್ಲದ ಕಾರಣ ಬಿಎಸ್ಸಿ ಮಾಡಬೇಕಾಗಿಯಿತು ಎಂದರು. "ನಾನು ಎಂಜಿನಿಯರಿಂಗ್‌ಗೆ ಹೋಗಬೇಕೆಂದು ಬಯಸಿದ್ದೆ, ಆದರೆ ಕೋರ್ಸ್ ತುಂಬಾ ದುಬಾರಿ ನೀನು ಬಿಎಸ್ಸಿ ಮಾಡಬೇಕು ಎಂದು ನನ್ನ ತಂದೆ ಹೇಳಿದರು. ಇದಕ್ಕೆ ನಾನು ವಿರೋಧಿಸಿದೆ. ನಿಜ ಹೇಳಬೇಕೆಂದರೆ ನನ್ನ ತಂದೆಯ ಮನಸ್ಸನ್ನು ಬದಲಾಯಿಸಲು ನಾನು ಒಂದು ವಾರ ಉಪವಾಸ ಮಾಡಿದ್ದೇನೆ. ಆದರೆ ಅಂತಿಮವಾಗಿ, ನಾನೇ ಬದಲಾಗಬೇಕಾಯಿತು' ಎಂದು ವಿವರಿಸಿದರು.
"ನಂತರ ನಾನು ಗಣಿತದಲ್ಲಿದೆ ಬಿಎಸ್ಸಿ ಮಾಡಿದೆ. ನಂತರ, ನನ್ನ ತಂದೆ 'ಒಮ್ಮೆ ನಾನು ನಿನಗೆ ಬೇಕಾದುದನ್ನು ಮಾಡುವುದಕ್ಕೆ ತಡೆದಿದ್ದೇನೆ, ಆದರೆ ಈ ಬಾರಿ ನಿನ್ನನ್ನು ತಡೆಯುವುದಿಲ್ಲ. ನಿನ್ನ ಎಂಜಿನಿಯರಿಂಗ್ ಕೋರ್ಸ್‌ಗಾಗಿ ಭೂಮಿಯನ್ನು ಮಾರಾಟ ಮಾಡುತ್ತೇನೆ' ಎಂದು ಹೇಳಿದರು. ಇದಾದ ನಂತರ ಬಿಟೆಕ್ ಮಾಡಿದೆ. ಆ ಸಮಯದಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಬಹಳ ಸೀಮಿತ ಉದ್ಯೋಗಗಳು ಇದ್ದ ಕಾರಣ ನಾನು ಕೆಲಸಕ್ಕಾಗಿ ಕಷ್ಟಪಡಬೇಕಾಯಿತು. ಎಚ್‌ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಮತ್ತು ಎನ್‌ಎಎಲ್ (ನ್ಯಾಷನಲ್ ಏರೋನಾಟಿಕ್ಸ್ ಲಿಮಿಟೆಡ್) ನಲ್ಲಿ ಮಾತ್ರ ವ್ಯಾಪ್ತಿ ಇತ್ತು. ನನಗೆ ಕೆಲಸ ಸಿಗಲಿಲ್ಲ, ಆದ್ದರಿಂದ ನಾನು ಐಐಎಸ್ಸಿಯಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಹೋದೆ 'ಎಂದು ಹೇಳಿದರು.
ಡಾ. ಶಿವನ್ ತಮ್ಮ ಇಡೀ ವೃತ್ತಿ ಜೀವನದಲ್ಲಿ, ಅವರು ಬಯಸಿದ್ದನ್ನು ಎಂದಿಗೂ ಪಡೆಯಲಿಲ್ಲ, ಆದರೆ ಅವರಿಗೆ ನೀಡಲಾದ ಯಾವುದೇ ಉದ್ಯೋಗದಲ್ಲಿ ಅವರು ಉತ್ತಮ ಸಾಧನೆ ಮಾಡಿರುವುದಾಗಿ ಹೇಳಿದರು. ಮೊದಲು ನಾನು ಉಪಗ್ರಹ ಕೇಂದ್ರಕ್ಕೆ ಸೇರಲು ಬಯಸಿದ್ದೆ, ಆದರೆ ನನಗೆ ವಿಕ್ರಮ್ ಸಾರಾಭಾಯ್ ಕೇಂದ್ರ ಸಿಕ್ಕಿತು. ಅಲ್ಲಿಯೂ ನಾನು ಏರೋಡೈನಾಮಿಕ್ಸ್ ಗೆ ಸೇರಲು ಬಯಸಿದ್ದೆ, ಆದರೆ ನನ್ನದು ಪಿಎಸ್‌ಎಲ್‌ವಿ ಯೋಜನೆಗೆ ಸೇರಿದೆ. ಎಲ್ಲ ಕಡೆ ನನಗೆ ಬೇಕಾದುದನ್ನು ಎಂದಿಗೂ ಪಡೆಯಲಿಲ್ಲ ಎಂದರು.