ಕಾರು ಪಲ್ಟಿ: ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು

ಪರೀಕ್ಷೆ ಮುಗಿದ ಬಳಿಕ ಬೊಮ್ಮಾಲಾಪುರಂನ ಖಾಸಗಿ ಫಾರ್ಮ್ ಹೌಸ್‌ಗೆ ಪಾರ್ಟಿ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಪಲ್ಟಿಯಾಗಿ ಈ ವೇಳೆ ಅವಘಡ ಸಂಭವಿಸಿದೆ

Last Updated : May 1, 2019, 02:43 PM IST
ಕಾರು ಪಲ್ಟಿ: ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು title=

ಹೈದರಾಬಾದ್: ನಗರದ ಹೊರವಲಯದಲ್ಲಿರುವ ಬೋಮ್ಮಲಾರಮರಂ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿನಿಯರೂ ಸೇರಿದಂತೆ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಪರೀಕ್ಷೆ ಮುಗಿದ ಬಳಿಕ ಬೊಮ್ಮಾಲಾಪುರಂನ ಖಾಸಗಿ ಫಾರ್ಮ್ ಹೌಸ್‌ಗೆ ಪಾರ್ಟಿ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಪಲ್ಟಿಯಾಗಿ ಈ ವೇಳೆ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಇಬ್ರಾಹಿಂಪಟ್ನಂನ ಶ್ರೀ ಇಂದು ಇಂಜಿನಿಯರಿಂಗ್ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿಗಳು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Trending News