ನವದೆಹಲಿ: ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 66 ವಯಸ್ಸಾಗಿತ್ತು ಎನ್ನಲಾಗಿದೆ.ದೆಹಲಿ ಏಮ್ಸ್ ಆಸ್ಪತ್ರೆ ತನ್ನ ಸಂಕ್ಷಿಪ್ತ ಹೇಳಿಕೆಯಲ್ಲಿ ಅರುಣ್ ಜೇಟ್ಲಿ ಮಧ್ಯಾಹ್ನ 12.07 ಕ್ಕೆ ನಿಧನರಾದರು ಎಂದು ತಿಳಿಸಿದೆ.
ಆಗಸ್ಟ್ 9 ರಂದು ಆಸ್ಪತ್ರೆಗೆ ದಾಖಲಾಗಿದ್ದ ಜೈಟ್ಲಿ ಜೀವ ರಕ್ಷಾ ಕವಚವನ್ನು ಅಳವಡಿಸಲಾಗಿತ್ತು. ಆವರ ಆರೋಗ್ಯದ ಮೇಲೆ ವೈದ್ಯರ ಬಹುಶಿಸ್ತೀಯ ತಂಡವು ಮೇಲ್ವಿಚಾರಣೆ ನಡೆಸುತ್ತಿತ್ತು. ಆದರೂ ಅವರ ಆರೋಗ್ಯದಲ್ಲಿ ಅಂತಹ ಬದಲಾವಣೆ ಕಂಡು ಬಂದಿರಲಿಲ್ಲ.
Jaitleyji will always be remembered for pulling the economy out of the gloom and putting it back on the right track.
The BJP will miss Arunji’s presence. I extend my heartfelt condolences to his bereaved family.
— Rajnath Singh (@rajnathsingh) August 24, 2019
ಜೈಟ್ಲಿಯವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ' ಸಂಕಷ್ಟದಲ್ಲಿದ್ದ ಆರ್ಥಿಕತೆಯನ್ನು ಸರಿ ದಾರಿಗೆ ತಂದ ಜೈಟ್ಲಿ ಅವರು ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ ಎಂದು ಹೇಳಿದರು."ಅರುಣ್ ಜೇಟ್ಲಿ ಜಿ ಅವರು ಹಲವಾರು ಸಾಮರ್ಥ್ಯಗಳಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು ಮತ್ತು ಅವರು ಸರ್ಕಾರ ಮತ್ತು ಪಕ್ಷದ ಸಂಘಟನೆಗೆ ಆಸ್ತಿಯಾಗಿದ್ದರು. ಅವರು ಯಾವಾಗಲೂ ದಿನದ ವಿಷಯಗಳ ಬಗ್ಗೆ ಆಳವಾದ ಮತ್ತು ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿದ್ದರು. ಇದರಿಂದಾಗಿ ಅವರ ಜ್ಞಾನ ಮತ್ತು ಅಭಿವ್ಯಕ್ತಿ ಅವರಿಗೆ ಹಲವಾರು ಸ್ನೇಹಿತರನ್ನು ಗೆದ್ದಿತು" ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
Arun Jaitley ji served the nation in several capacities and he was an asset to the government and the party organisation.
He always had a deep and clear understanding of the issues of the day. His knowledge and articulation won him several friends.
— Rajnath Singh (@rajnathsingh) August 24, 2019
ಜೈಟ್ಲಿ ಆಸ್ಪತ್ರೆಗೆ ದಾಖಲಾದಾಗ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರೊಂದಿಗೆ ರಾಜಕೀಯ ಮುಖಂಡರಾದ ಮಾಯಾವತಿ, ಜ್ಯೋತಿರಾದಿತ್ಯ ಸಿಂಧಿಯಾ, ನಿತೀಶ್ ಕುಮಾರ್ ಮತ್ತು ಯೋಗಿ ಆದಿತ್ಯನಾಥ್ ಜೇಟ್ಲಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು.
ವೃತ್ತಿಯಲ್ಲಿ ವಕೀಲರಾಗಿದ್ದ ಜೈಟ್ಲಿ, ಬಿಜೆಪಿ ಸರ್ಕಾರದ ಮೊದಲ ಅವಧಿಯಲ್ಲಿ ಹಣಕಾಸು ಮತ್ತು ರಕ್ಷಣಾ ಖಾತೆಗಳನ್ನು ಹೊಂದಿದ್ದರು, ಮತ್ತು ಆಗಾಗ್ಗೆ ಸರ್ಕಾರದ ಟ್ರಬಲ್ ಶೂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಜೇಟ್ಲಿ ಅವರ ಅನಾರೋಗ್ಯದ ಕಾರಣದಿಂದಾಗಿ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಕಳೆದ ಮೇ 14 ರಂದು ಏಮ್ಸ್ನಲ್ಲಿ ಮೂತ್ರಪಿಂಡ ಕಸಿಗೆ ಒಳಗಾಗಿದ್ದರಿಂದಾಗಿ ರೈಲ್ವೆ ಸಚಿವ ಪಿಯುಶ್ ಗೋಯಲ್ ಅವರು ಹಣಕಾಸು ಸಚಿವ ಹುದ್ದೆಯನ್ನು ನಿರ್ವಹಿಸಿದ್ದರು. ಕಳೆದ ವರ್ಷದ ಏಪ್ರಿಲ್ ಆರಂಭದಿಂದ ಕಚೇರಿಗೆ ಹಾಜರಾಗುವುದನ್ನು ನಿಲ್ಲಿಸಿದ್ದ ಜೇಟ್ಲಿ ಅವರು ಆಗಸ್ಟ್ 23, 2018 ರಂದು ಮತ್ತೆ ಹಣಕಾಸು ಸಚಿವಾಲಯಕ್ಕೆ ಬಂದಿದ್ದರು.
ಸೆಪ್ಟೆಂಬರ್ 2014 ರಲ್ಲಿ, ಅವರು ದೀರ್ಘಕಾಲದ ಮಧುಮೇಹ ಸ್ಥಿತಿಯಿಂದಾಗಿ ಅವರು ಗಳಿಸಿದ ತೂಕವನ್ನು ಸರಿಪಡಿಸಲು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.