ಎರಡು ರಾಜ್ಯಕ್ಕೆ ಸಿಎಂ ಆಗಿದ್ದ ಎನ್.ಡಿ.ತಿವಾರಿ ಜನ್ಮದಿನದಂದೇ ನಿಧನ

ಉತ್ತರಪ್ರದೇಶಕ್ಕೆ ಮೂರು ಬಾರಿ ಉತ್ತರಖಂಡಕ್ಕೆ ಒಮ್ಮೆ ಸಿಎಂ ಆಗಿದ್ದ ಎನ್.ಡಿ ತಿವಾರಿ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತಮ್ಮ 93ನೇ ಜನ್ಮದಿನದಂದೆ ನಿಧನ ಹೊಂದಿದ್ದಾರೆ.

Last Updated : Oct 18, 2018, 04:41 PM IST
ಎರಡು ರಾಜ್ಯಕ್ಕೆ ಸಿಎಂ ಆಗಿದ್ದ ಎನ್.ಡಿ.ತಿವಾರಿ ಜನ್ಮದಿನದಂದೇ ನಿಧನ  title=

ನವದೆಹಲಿ: ಉತ್ತರಪ್ರದೇಶಕ್ಕೆ ಮೂರು ಬಾರಿ ಉತ್ತರಖಂಡಕ್ಕೆ ಒಮ್ಮೆ ಸಿಎಂ ಆಗಿದ್ದ ಎನ್.ಡಿ ತಿವಾರಿ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತಮ್ಮ 93ನೇ ಜನ್ಮದಿನದಂದೆ ನಿಧನ ಹೊಂದಿದ್ದಾರೆ.

ಎನ್ ಡಿ ತಿವಾರಿ ಅವರು ರಾಜೀವ್ ಗಾಂಧಿ ಅವರ ಕ್ಯಾಬಿನೆಟ್ ನಲ್ಲಿ ವಿದೇಶಾಂಗ ಖಾತೆ ಸಚಿವರಾಗಿ ಮತ್ತು ಆಂಧ್ರಪ್ರದೇಶದ ಗವರ್ನರ್ ಆಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಆದರೆ ಅವರ ಮೇಲೆ  ಸೆಕ್ಸ್ ಹಗರಣದ ಆರೋಪ ಬಂದ ನಂತರ ಆಂಧ್ರಪ್ರದೇಶ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.

ಸೆಪ್ಟೆಂಬರ್ 20 ರಂದು ಬ್ರೇನ್ ಸ್ಟ್ರೋಕ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಅಕ್ಟೋಬರ್ 18 ರಂದು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ನಿಧನರಾದರು.1925 ಅಕ್ಟೋಬರ್ 18 ರಂದು ಜನಿಸಿದ ತಿವಾರಿ ಅವರು 1963 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿ 1965 ರಲ್ಲಿ ಕಾಶಿಪುರದಿಂದ ಶಾಸಕರಾಗಿ ಆಯ್ಕೆಯಾದರು. 1979-80ರ ಅವಧಿಯಲ್ಲಿ, ಅವರು ಚೌಧರಿ ಚರಣ್ ಸಿಂಗ್ ಸರ್ಕಾರದಲ್ಲಿ  ಹಣಕಾಸು ಸಚಿವ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು.

ಅಲ್ಲದೆ ಅವರು  1976-77, 1984-85 ಮತ್ತು 1988 ರಲ್ಲಿ ಸಂಕ್ಷಿಪ್ತ ಅವಧಿಯವರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದಾದ ನಂತರ ಅವರು 2002-07ರಲ್ಲಿ ಹೊಸದಾಗಿ ರಚಿಸಿದ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು, ಹೀಗಾಗಿ ಎರಡು ರಾಜ್ಯಗಳಿಗೆ  ಮುಖ್ಯಮಂತ್ರಿಯಾಗಿದ್ದ ಏಕೈಕ ಭಾರತೀಯ ರಾಜಕಾರಣಿಯಾಗಿದ್ದಾರೆ. 90 ರ ದಶಕದ ಆರಂಭದಲ್ಲಿ ಭಾರತದ ಪ್ರಧಾನಿ ಹುದ್ದೆಗೆ ಸ್ಪರ್ಧಿಯಾಗಿದರು.

2007 ರಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾಗಿ ತಿವಾರಿಯನ್ನು ನೇಮಿಸಲಾಯಿತು. ಆದರೆ ಲೈಂಗಿಕ ಹಗರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಕ್ಕಾಗಿ 2009 ರಲ್ಲಿ ರಾಜೀನಾಮೆ ನೀಡಿದರು.

Trending News