ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಇಹಲೋಕ ತ್ಯಜಿಸಿ ಇಂದಿಗೆ ವರ್ಷ

ಅಮ್ಮನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿರುವ ಜನತೆ ಇಂದಿಗೂ ಅಮ್ಮನನ್ನು ಸ್ಮರಿಸುತ್ತಿದೆ.

Last Updated : Dec 5, 2017, 11:59 AM IST
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಇಹಲೋಕ ತ್ಯಜಿಸಿ ಇಂದಿಗೆ ವರ್ಷ title=

ಚೆನ್ನೈ: 2016ರ ಈ ದಿನ ತಮಿಳುನಾಡು ಅಕ್ಷರಶಃ ಅನಾಥವಾಗಿತ್ತು. ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಮುಖ್ಯಮಂತ್ರಿ ಜಯಲಲಿತಾ ಇಹಲೋಕ ತ್ಯಜಿಸಿದ್ದಾರೆಂಬ ಸುದ್ದಿ ನಾಡಿನ ಜನತೆಯನ್ನು ದಿಗ್ಬ್ರಮೆಗೊಳಿಸಿತ್ತು. ಇದೀಗ ಜಯಾ ಇಲ್ಲದೆ ತಮಿಳುನಾಡು ಒಂದು ವರ್ಷ ಕಳೆದಿದೆ. 

2016ರ ಸೆಪ್ಟೆಂಬರ್ 22ರಂದು ಜಯಲಲಿತಾ ಹಟಾತ್ ಅನಾರೋಗ್ಯದಿಂದಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾದರು. 75ದಿನಗಳ ಜೀವನ್ಮರಣ ಹೋರಾಟದ ನಂತರ ಚಿಕಿತ್ಸೆ ಫಲಕಾರಿಯಾಗದೆ ಡಿ.5 ರಂದು ಜಯಾ ಇಹಲೋಕ ತ್ಯಜಿಸಿದರು. ತಮಿಳುನಾಡಿನ ನೆಚ್ಚನ 'ಅಮ್ಮಾ' ಮೃತದೇಹವನ್ನು ಮರೀನಾ ಬೀಚ್ ಬಳಿ ಸಮಾಧಿ ಮಾಡಲಾಯಿತು.

ಅಮ್ಮನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿರುವ ಜನತೆ ಇಂದಿಗೂ ಅಮ್ಮನನ್ನು ಸ್ಮರಿಸುತ್ತಿದೆ. ಇಂದು ಅವರ ಪುಣ್ಯ ತಿಥಿಯ ಹಿನ್ನೆಲೆಯಲ್ಲಿ ಜಯಾ ಅಭಿಮಾನಿಗಳು ಸಮಾಧಿ ಬಳಿ ಪುಷ್ಪ ನಮನ ಸಲ್ಲಿಸುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನೀರ್ ಸೆಲ್ವಂ, ಟಿಟಿವಿ ದಿನಕರನ್, ಜಯಾ ಸಂಬಂಧಿ ದೀಪಾ ಜಯಕುಮಾರ್ ಸೇರಿದಂತೆ ತಮಿಳುನಾಡಿನ ವಿವಿಧ ಭಾಗಗಳಿಂದ ಜನಸಾಗರವೇ ಜಯಾ ಸಮಾಧಿ ಬಳಿ ಹರಿದು ಬರುತ್ತಿದೆ.

Trending News