Parliament Of India ಕ್ಯಾಂಟೀನ್ ಸಬ್ಸಿಡಿಗೆ ಬ್ರೇಕ್

Parliament Of India - ಲೋಕಸಭೆಯ ಬಜೆಟ್ ಅಧಿವೇಶನ ಜನವರಿ 29 ರಿಂದ ಫೆಬ್ರವರಿ 15 ರವರೆಗೆ ನಡೆಯಲಿದೆ. ಸಂಸತ್ತಿನ ಅಧಿವೇಶನದ ಮೊದಲ ಹಂತದೊಳಗೆ  ಒಟ್ಟು12 ಸಭೆಗಳು ನಡೆಯಲಿವೆ, ಎರಡನೇ ಹಂತದಲ್ಲಿ ಅಂದರೆ ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ 21 ಸಭೆಗಳು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ಹೇಳಿದ್ದಾರೆ. 

Written by - Nitin Tabib | Last Updated : Jan 19, 2021, 07:09 PM IST
  • ಸಂಸತ್ತಿನ ಕ್ಯಾಂಟೀನ್ ಸಬ್ಸಿಡಿ ತೆಗೆದುಹಾಕಲಾಗಿದೆ.
  • ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಂದ ಮಾಹಿತಿ.
  • ಜನವರಿ 29ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭ.
Parliament Of India ಕ್ಯಾಂಟೀನ್ ಸಬ್ಸಿಡಿಗೆ ಬ್ರೇಕ್  title=
Parliament Of India (File Photo)

Parliament Of India- ನವದೆಹಲಿ : ಲೋಕಸಭೆಯ ಬಜೆಟ್ ಅಧಿವೇಶನ ಜನವರಿ 29 ರಿಂದ ಫೆಬ್ರವರಿ 15 ರವರೆಗೆ ನಡೆಯಲಿದೆ. ಸಂಸತ್ತಿನ ಅಧಿವೇಶನದ ಮೊದಲ ಹಂತದೊಳಗೆ  ಒಟ್ಟು12 ಸಭೆಗಳು ನಡೆಯಲಿವೆ, ಎರಡನೇ ಹಂತದಲ್ಲಿ ಅಂದರೆ ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ 21 ಸಭೆಗಳು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ಹೇಳಿದ್ದಾರೆ. ಎಲ್ಲರ ಸಹಕಾರದಿಂದ ಸದನದ ಕಾರ್ಯಕಲಾಪ ನಡೆಸುವುದು ನಮ್ಮ ಪ್ರಯತ್ನ ಎಂದು ಅವರು ಹೇಳಿದ್ದಾರೆ. ಸಂಸತ್ತಿನ ಕ್ಯಾಂಟೀನ್‌ನಲ್ಲಿ ಆಹಾರಕ್ಕಾಗಿ ನೀಡಲಾಗುವ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಲೋಕಸಭಾ ಸ್ಪೀಕರ್ ಹೇಳಿದ್ದಾರೆ.

ಆದರೆ, ಓಂ ಬಿರ್ಲಾ ಅವರು ಕ್ಯಾಂಟೀನ್ ಗೆ ಸಂಬಂಧಿಸಿದ ಆರ್ಥಿಕ ಅಂಶಗಳ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. ಸಂಸದರು ಮತ್ತು ಇತರರಿಗೆ ಸಂಪೂರ್ಣವಾಗಿ ಸಬ್ಸಿಡಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.  ಲೋಕಸಭೆಯ ಬಿಸಿನೆಸ್ ಅಡ್ವೈಸರಿ ಸಮಿತಿಯಲ್ಲಿರುವ ಎಲ್ಲಾ ಪಕ್ಷಗಳ ಸದಸ್ಯರು ಒಮ್ಮತದ ಮೂಲಕ ಇದನ್ನು ತೆಗೆದುಹಾಕಲು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಇನ್ಮುಂದೆ ಕ್ಯಾಂಟೀನ್ ನಲ್ಲಿ ಸಿಗುವ ಆಹಾರ ಈ ಮೊದಲೇ ನಿರ್ಧರಿಸಲಾದ ದರದಲ್ಲಿ ಸಿಗಲಿದೆ.

ಪ್ರತಿ ವರ್ಷ ಸಂಸತ್ತಿನ (Parliament) ಕ್ಯಾಂಟೀನ್ ಗೆ ವಾರ್ಷಿಕವಾಗಿ 17 ಕೋಟಿ ರೂ. ಸಬ್ಸಿಡಿ ನೀಡಲಾಗುತ್ತಿತ್ತು. 2017-18 ನಲ್ಲಿ RTI ಮೂಲಕ ಪಡೆಯಲಾಗಿರುವ ಸಂಸತ್ತಿನ ಕ್ಯಾಂಟೀನ್ ರೇಟ್ ಲಿಸ್ಟ್ ಪ್ರಕಾರ, ಸಂಸತ್ತಿನ ಕ್ಯಾಂಟೀನ್ ನಲ್ಲಿ ಚಿಕನ್ ಕರಿ ರೂ.50 ಹಾಗೂ ವೆಜ್ ಥಾಲಿ ರೂ.35ಕ್ಕೆ ನೀಡಲಾಗುತ್ತಿತ್ತು. ಇನ್ನೊಂದೆಡೆ ಮೂರು ಕೋರ್ಸ್ ಲಂಚ್ ಬೆಲೆ ಸುಮಾರು 106 ನಿಗದಿಪಡಿಸಲಾಗಿತ್ತು. ಸೌತ್ ಇಂಡಿಯಾ ಆಹಾರಗಳಲ್ಲಿ ಸಂಸದರಿಗೆ ಮಾತ್ರ ರೂ.12ಕ್ಕೆ ಪ್ಲೇನ್ ದೋಸಾ ನೀಡಲಾಗುತ್ತಿತ್ತು.

ಉತ್ತರ ರೈಲ್ವೆ ಬದಲು ಐಟಿಡಿಸಿ ಈಗ ಸಂಸತ್ತಿನ ಕ್ಯಾಂಟೀನ್ ಇನ್ನು ಮುಂದೆ ಮುನ್ನಡೆಸಿಕೊಂಡು ಹೋಗಲಿದೆ ಎಂದು ಲೋಕಸಭಾ ಸ್ಪೀಕರ್ ಬಜೆಟ್ ಅಧಿವೇಶನದ ಸಿದ್ಧತೆಗಳ ಬಗ್ಗೆ ಸುದ್ದಿಗಾರರೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದ್ದಾರೆ. ಸಂಸತ್ ಅಧಿವೇಶನ ಪ್ರಾರಂಭವಾಗುವ ಮುನ್ನ ಎಲ್ಲಾ ಸಂಸದರಿಗೆ ಕೋವಿಡ್ -19 ಟೆಸ್ಟ್ ನಡೆಸುವಂತೆ ಕೋರಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ- Modi ಸರ್ಕಾರದ ಮಹತ್ವಾಕಾಂಕ್ಷೆಯ Central Vista Redevelopment Planಗೆ SC ಹಸಿರು ನಿಶಾನೆ

ಸಂಸದರ ನಿವಾಸದ ಹತ್ತಿರ ಕೂಡ RT-PCR ಕೊವಿಡ್ 19 ಟೆಸ್ಟ್ ಗಳಿಗಾಗಿ ವ್ಯವಸ್ಥೆ ಮಾಡಲಾಗುವುದು ಎಂದು ಲೋಕಸಭಾ ಅಧ್ಯಕ್ಷರು ಹೇಳಿದ್ದಾರೆ. ಕೇಂದ್ರ, ರಾಜ್ಯಗಳ ವತಿಯಿಂದ ನಿರ್ಧರಿಸಲಾಗಿರುವ ಲಸಿಕಾಕರಣ ಅಭಿಯಾನ ನೀತಿ ಸಂಸದರಿಗೂ ಅನ್ವಯಿಸಲಿದೆ ಎಂದು ಅವರು ಹೇಳಿದ್ದಾರೆ. ಸಂಸತ್ತಿನ ಆವರಣದಲ್ಲಿ ಜನವಿ 27-28ರಂದು RT-PCR ಟೆಸ್ಟ್ ನಡೆಸಲಾಗುವುದು. ಸಂಸದರ ಕುಟುಂಬ, ನೌಕರರ ಟೆಸ್ಟ್ ಗೂ ಕೂಡ ವ್ಯವಸ್ಥೆ ಮಾಡಲಾಗುವುದು ಎಂದು ಓಂ ಬಿರ್ಲಾ ಹೇಳಿದ್ದಾರೆ.

ಇದನ್ನು ಓದಿ-COVID-19: ಚಳಿಗಾಲದ ಅಧಿವೇಶನಕ್ಕೆ ಬ್ರೇಕ್ ಜನವರಿಯಲ್ಲಿ ಬಜೆಟ್ ಅಧಿವೇಶನ

ಜನವರಿ 29 ರಿಂದ ಪ್ರಾರಂಭವಾಗುವ ಸಂಸತ್ ಅಧಿವೇಶನದಲ್ಲಿ (Budget Session) ರಾಜ್ಯಸಭೆ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಮತ್ತು ಲೋಕಸಭೆ ಸಂಜೆ 4 ರಿಂದ ರಾತ್ರಿ 8 ರವರೆಗೆ ನಡೆಯಲಿದೆ ಎಂದು ಬಿರ್ಲಾ ಹೇಳಿದ್ದಾರೆ . 

ಇದನ್ನು ಓದಿ-ಸಿದ್ಧವಾಗಲಿದೆ ನೂತನ ಸಂಸತ್ ಭವನ, ಸಂಸದರಿಗೆ ಸಿಗಲಿವೆ ಆಧುನಿಕ ಸೌಲಭ್ಯಗಳು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News