ಸಿಹಿ ಸುದ್ದಿ: ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ 2.76 ಲಕ್ಷ ಉದ್ಯೋಗ!

ಟೀಮ್ ಲೀಸ್ ಸರ್ವೀಸಸ್ ನ ಅರ್ಧ ವಾರ್ಷಿಕ 'ಉದ್ಯೋಗ ಸನ್ನಿವೇಶ' ವರದಿಯಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರ ಮುಂದಿನ ದಿನಗಳಲ್ಲಿ ಶೇ.2ರಷ್ಟು ವೃದ್ಧಿಯಾಗಲಿದ್ದು, 1.66 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಹೇಳಿದೆ.

Last Updated : Jun 21, 2019, 02:09 PM IST
ಸಿಹಿ ಸುದ್ದಿ: ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ 2.76 ಲಕ್ಷ ಉದ್ಯೋಗ! title=

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ, ದೈನಂದಿನ ಬಳಕೆಯ ಚಿಲ್ಲರೆ ವ್ಯಾಪಾರ ಮತ್ತು 'ಗ್ರಾಹಕ ಉತ್ಪನ್ನಗಳು ಮತ್ತು ಬಾಳಿಕೆ ಬರುವ ವಸ್ತುಗಳ ಮಾರಾಟ(ಎಫ್‌ಎಂಸಿಜಿ ಮತ್ತು ಡಿ) ಕ್ಷೇತ್ರಗಳಲ್ಲಿ 2.76 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಯಾಗಲಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

ಟೀಮ್ ಲೀಸ್ ಸರ್ವೀಸಸ್ ನ ಅರ್ಧ ವಾರ್ಷಿಕ 'ಉದ್ಯೋಗ ಸನ್ನಿವೇಶ' ವರದಿಯಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರ ಮುಂದಿನ ದಿನಗಳಲ್ಲಿ ಶೇ.2ರಷ್ಟು ವೃದ್ಧಿಯಾಗಲಿದ್ದು, 1.66 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಹೇಳಿದೆ. ಅಂತೆಯೇ, ಎಫ್‌ಎಂಸಿಜಿ ಮತ್ತು ಡಿ ಕ್ಷೇತ್ರವು ಶೇ.1 ರಷ್ಟು ವ್ರುದ್ಧಿಯಾಗಲಿದ್ದು, ಇದು 1.10 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ವರದಿ ಮಾಡಿದೆ.

ಚಿಲ್ಲರೆ ವ್ಯಾಪಾರ ಕ್ಷೇತ್ರ(retail sector)ದಲ್ಲಿ ದೆಹಲಿಯಲ್ಲಿ 27,560 ಉದ್ಯೋಗಾವಕಾಶಗಳು ಸೃಷ್ಟಿ ಆಗುವುದರೊಂದಿಗೆ ಅಗ್ರಸ್ಥಾನ ಪಡೆಯಲಿದ್ದು,  22,770 ಅವಕಾಶಗಳೊಂದಿಗೆ ಬೆಂಗಳೂರು ಎರಡನೇ ಸ್ಥಾನ ಪಡೆಯಲಿದೆ. ಅಂತೆಯೇ, ಎಫ್‌ಎಂಸಿಜಿ ಮತ್ತು ಡಿ ಕ್ಷೇತ್ರದಲ್ಲಿ 14,770 ಉದ್ಯೋಗಾವಕಾಶಗಳೊಂದಿಗೆ ಮುಂಬೈ ಅಗ್ರ ಸ್ಥಾನದಲ್ಲಿದ್ದು, 10,800 ಅವಕಾಶಗಳೊಂದಿಗೆ ದೆಹಲಿ ಎರಡನೇ ಸ್ಥಾನದಲ್ಲಿದೆ. ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳ ಪ್ರವೇಶದಿಂದ ಈ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
 

Trending News