Flipkart Smart Pack Offer: ಎಲ್ಲ Smartphoneಗಳ ಖರೀದಿ ಮೇಲೆ ಸಿಗುತ್ತಿದೆ 100% ಕ್ಯಾಶ್ ಬ್ಯಾಕ್, ಏನಿದು ವಿಶೇಷ ಆಫರ್ ?

Flipkart Smart Pack Offer: ಈ ಆಫರ್ ಅಡಿ ನೀವು Flipkart ಮೇಲೆ ಉಚಿತವಾಗಿ ಸ್ಮಾರ್ಟ್ಫೋನ್ ಖರೀದಿಸಬಹುದು. ಈ ಪ್ರೋಗ್ರಾಮ್ ಗೆ ಫ್ಲಿಪ್ ಕಾರಟ್ ಸ್ಮಾರ್ಟ್ ಪ್ಯಾಕ್ ಎಂದು ಹೆಸರಿಸಲಾಗಿದೆ.

Written by - Nitin Tabib | Last Updated : Jan 23, 2021, 01:58 PM IST
  • ತನ್ನ ಗ್ರಾಹಕರಿಗೆ flipkart ನೂತನ ಕೊಡುಗೆಯೊಂದನ್ನು ನೀಡುತ್ತಿದ್ದೆ.
  • ಈ ಯೋಜನೆಯ ಲಾಭ ಪಡೆದು ಗ್ರಾಹಕರು ಶೇ.100 ಕ್ಯಾಶ್ ಬ್ಯಾಕ್ ನಲ್ಲಿ ಫೋನ್ ಖರೀದಿಸಬಹುದು.
  • ಈ ಯೋಜನೆಗೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
Flipkart Smart Pack Offer: ಎಲ್ಲ Smartphoneಗಳ ಖರೀದಿ ಮೇಲೆ ಸಿಗುತ್ತಿದೆ 100% ಕ್ಯಾಶ್ ಬ್ಯಾಕ್, ಏನಿದು ವಿಶೇಷ ಆಫರ್ ? title=
Flipkart Smartpack Offer (File Photo)

Flipkart Smart Pack Offer - ನವದೆಹಲಿ: ವಾಲ್ ಮಾರ್ಟ್ ಮಾಲೀಕತ್ವದ ದಿಗ್ಗಜ ಇ-ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ (Flipkart), ಇತ್ತೀಚಿಗೆ ತನ್ನ ಗ್ರಾಹಕರಿಗಾಗಿ ಹೊಸ ಹೊಸ ಕೊಡುಗೆಗಳನ್ನು ಹೊತ್ತುತರುತ್ತಿದೆ. ಜೊತೆಗೆ ಹಲವು ಸೆಲ್ ಗಳನ್ನು ಕೂಡ ಆಯೋಜಿಸುತ್ತಿದೆ. ಈ ಸೆಲ್ ನಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್, ಗ್ಯಾಜೆಟ್ಸ್, ಇಲೆಕ್ಟ್ರಿಕ್ ಉಪಕರಣ ಇತ್ಯಾದಿಗಳು ತುಂಬಾ ಕಡಿಮೆ ಬೆಲೆಗೆ ಸಿಗುತ್ತಿವೆ. ಈ ಬಾರಿ ಕಂಪನಿ ತನ್ನ ಗ್ರಾಹಕರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ಖರೀದಿಸುವ ಅವಕಾಶ ನೀಡುತ್ತಿದೆ.

ನಿಮ್ಮ ನೆಚ್ಚಿನ ಸ್ಮಾರ್ಟ್ ಫೋನ್ ಅನ್ನು ನೀವು ಖರೀದಿಸಬಹುದು
ಕಳೆದ ಕೆಲ ದಿನಗಳಿಂದ ಆರಂಭವಾಗಿರುವ ಫ್ಲಿಪ್ ಕಾರ್ಟ್ (Flipkart) ಸ್ಮಾರ್ಟ್ ಪ್ಯಾಕ್ ಪ್ರೊಗ್ರಾಮ್ ಅಡಿ ಕಂಪನಿ ಉಚಿತ ಸ್ಮಾರ್ಟ್ ಫೋನ್ ಖರೀದಿಸುವ ಅವಕಾಶ ನೀಡುತ್ತಿದೆ. ಇದರಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು. ಫ್ಲಿಪ್ ಕಾರ್ಟ್ ಸ್ಮಾರ್ಟ್ ಪ್ಯಾಕ್ ಒಂದು ಸಬ್ ಸ್ಕ್ರಿಪ್ಶನ್ ಸೇವೆಯಾಗಿದೆ. ಇದರಡಿ ಬಳಕೆದಾರರು ಸ್ಮಾರ್ಟ್ ಫೋನ್ ಖರೀದಿಸಲು 12 ಅಥವಾ 18 ತಿಂಗಳ ಅವಧಿಯ ಸಬ್ ಸ್ಕ್ರಿ ಪ್ಶನ್ ಪಡೆಯಬೇಕು. ಈ ಸಬ್ಸ್ಕ್ರಿಪ್ಶನ್ ಅವಧಿ ಪೂರ್ಣವಾಗುತ್ತಿದ್ದಂತೆ ಬಳಕೆದಾರರಿಗೆ ಆ ಸ್ಮಾರ್ಟ್ ಫೋನ್ ನ ಶೇ.100 ರಷ್ಟು ಹಣ ಕ್ಯಾಶ್ ಬ್ಯಾಕ್ ರೂಪದಲ್ಲಿ ಮರಳಿ ಸಿಗಲಿದೆ.

ಮಾಸಿಕ ಶುಲ್ಕ ರೂ.399 ರೂ.ನಿಂದ ಆರಂಭ
ಫ್ಲಿಪ್ ಕಾರ್ಟ್ ತನ್ನ ಬಳಕೆದಾರರಿಗೆ ಗೋಲ್ಡ್ ಸಿಲ್ವರ್ ಹಾಗೂ ಬ್ರಾಂಜ್ ಸ್ಮಾರ್ಟ್ ಪ್ಯಾಕ್ ಆಫರ್ ನೆದುತ್ತಿದೆ. ಸ್ಮಾರ್ಟ್ ಫೋನ್ ಖರೀದಿಸುವಾಗ ಬಳಕೆದಾರರು ಈ ಸ್ಮಾರ್ಟ್ ಪ್ಯಾಕ್ ಗಳಲ್ಲಿ ಒಂದನ್ನು ಆಯ್ದುಕೊಳ್ಳಬೇಕು. ಸ್ಮಾರ್ಟ್ ಪ್ಯಾಕ್ ಖರೀದಿಸಿದ ಬಳಿಕ ಗ್ರಾಹಕರಿಗೆ SonyLIV, Zee5 Preimum, Voot Select, Zomato Pro ಗಳಂತಹ ಸೇವೆಗಳು ಕೂಡ ಸಿಗಲಿವೆ. 

ಇದನ್ನು ಓದಿ- ಹತ್ತು ಸಾವಿರಕ್ಕಿಂತ ಕಡಿಮೆ ದರದಲ್ಲಿ ಹೊಸ Realme ಫೋನ್, ಇಲ್ಲಿದೆ ಬೆಲೆ, ವೈಶಿಷ್ಟ್ಯ

ಷರತ್ತುಗಳು ಏನಾಗಿರಲಿವೆ?
ಸ್ಮಾರ್ಟ್ ಪ್ಯಾಕ್ ಸಬ್ಸ್ಕ್ರಿಪ್ಶನ್ ಅವಧಿ ಮುಕ್ತಾಯದ ಬಳಿಕ ನಿಮಗೆ ಸ್ಮಾರ್ಟ್ ಫೋನ್ ನ ಶೇ.100 ರಷ್ಟು ಹಣ ಕ್ಯಾಶ್ ಬ್ಯಾಕ್ ರೂಪದಲ್ಲಿ ಸಿಗಲಿದೆ. ಆದರೆ, ಇದಕ್ಕಾಗಿ ನಿಮ್ಮ ಫೋನ್ ವರ್ಕಿಂಗ್ ಕಂಡಿಶನ್ ನಲ್ಲಿರಬೇಕು ಹಾಗೂ ಅದರಲ್ಲಿನ IMEI ನಂಬರ್ ಕಾಣಿಸುತ್ತಿರಬೇಕು. ಸ್ಮಾರ್ಟ್ ಪ್ಯಾಕ್ ಯೋಜನೆಯ ಆಧಾರದ ಮೇಲೆ ಡಿವೈಸ್ ವಾಪಸ್ ಮಾಡುತ್ತಲೇ ನಿಮಗೆ ನಿಮ್ಮ ಹಣ ವಾಪಸ್ ಸಿಗಲಿದೆ.

ಇದನ್ನು ಓದಿ- Amazon-Flipkart ಮೇಲೆ Shopping ಮಾಡುವ ವೇಳೆ ಎಚ್ಚರ!

ಈ ಕೊಡುಗೆಯಲ್ಲಿ ಈ ಕೆಳಗಿನ ಫೋನ್ ಗಳು ಶಾಮೀಲಾಗಿವೆ
ಈ ಸಬ್ಸ್ಕ್ರಿಪ್ಶನ್ ಆಫರ್ ಅಡಿ Realme, Poco, Samsung, Redmi, Motorola, Infinix, Oppo, Vivo ಹಾಗೂ ಇತರೆ ಜನಪ್ರೀಯ ಬ್ರಾಂಡ್  ಸ್ಮಾರ್ಟ್ ಫೋನ್ ಗಳು ಶಾಮೀಲಾಗಿವೆ.

ಇದನ್ನು ಓದಿ- Flipkart Big Saving Days: ಕಡಿಮೆ ದರದಲ್ಲಿ iPhone ಖರೀದಿಸಿ, ಸಿಗಲಿದೆ 26 ಸಾವಿರ ಡಿಸ್ಕೌಂಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News