ಆಸ್ಪತ್ರೆಗಳಲ್ಲಿ ಪ್ರಮಾಣಿತ ಶುಲ್ಕ ನಿಗದಿಪಡಿಸಿ, ಇಲ್ಲದಿದ್ದರೆ CGHS ದರ ಪರಿಗಣನೆ ಖಚಿತ: ಸುಪ್ರೀಂ ಕೋರ್ಟ್ ಸೂಚನೆ

Supreme Court on Hospital Bills: “ಕೇಂದ್ರ ಸರ್ಕಾರ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾದರೆ, ಸಿಜಿಎಚ್‌ಎಸ್‌ ಪ್ರಕಾರ ಪ್ರಮಾಣಿತ ದರವನ್ನು ನಿಗದಿಪಡಿಸುವಂತೆ ಅರ್ಜಿದಾರರ ಮನವಿಯನ್ನು ಪರಿಗಣಿಸುತ್ತೇವೆ” ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಧ್ವನಿಯಲ್ಲಿ ಹೇಳಿದೆ.

Written by - Bhavishya Shetty | Last Updated : Feb 28, 2024, 12:55 PM IST
    • ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶುಲ್ಕದಲ್ಲಿ ಏಕೆ ಇಷ್ಟೊಂದು ವ್ಯತ್ಯಾಸ?
    • ಪ್ರಮಾಣಿತ ದರ ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ
    • ‘ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ (ಕೇಂದ್ರ ಸರ್ಕಾರ) ನಿಯಮ’ಗಳನ್ನು ಜಾರಿಗೆ ತರಲು ಸುಪ್ರೀಂ ಆದೇಶ
ಆಸ್ಪತ್ರೆಗಳಲ್ಲಿ ಪ್ರಮಾಣಿತ ಶುಲ್ಕ ನಿಗದಿಪಡಿಸಿ, ಇಲ್ಲದಿದ್ದರೆ CGHS ದರ ಪರಿಗಣನೆ ಖಚಿತ: ಸುಪ್ರೀಂ ಕೋರ್ಟ್ ಸೂಚನೆ title=
Supreme Court

Supreme Court on Hospital Bills: ಸರ್ಕಾರಿ ಆಸ್ಪತ್ರೆಯಲ್ಲಿ 10,000 ರೂ.ಗಳಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಬಹುದು. ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಶಸ್ತ್ರಚಿಕಿತ್ಸೆಗೆ 30 ಸಾವಿರದಿಂದ 1.40 ಲಕ್ಷ ರೂ. ಪಾವತಿಸಬೇಕು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶುಲ್ಕದಲ್ಲಿ ಏಕೆ ಇಷ್ಟೊಂದು ವ್ಯತ್ಯಾಸ? ಇದನ್ನು ಸುಪ್ರೀಂ ಕೋರ್ಟ್ ಪರಿಗಣನೆಗೆ ತೆಗೆದುಕೊಂಡಿದ್ದು, ರಾಜ್ಯಗಳ ಸಹಯೋಗದಲ್ಲಿ ಪ್ರಮಾಣಿತ ದರ ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅಷ್ಟೇ ಅಲ್ಲದೆ, ಈ ಸಂಬಂಧ ಒಂದು ತಿಂಗಳೊಳಗೆ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಇದನ್ನೂ ಓದಿ: ʻಲಕ್ಷ್ಮೀ ನಿವಾಸʼ ಸಿದ್ಧೇ ಗೌಡ ಪಾತ್ರದಲ್ಲಿ ಮಿಂಚುತ್ತಿರುವ ಈ ನಟ ಯಾರು ಗೊತ್ತೇ!

“ಕೇಂದ್ರ ಸರ್ಕಾರ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾದರೆ, ಸಿಜಿಎಚ್‌ಎಸ್‌ ಪ್ರಕಾರ ಪ್ರಮಾಣಿತ ದರವನ್ನು ನಿಗದಿಪಡಿಸುವಂತೆ ಅರ್ಜಿದಾರರ ಮನವಿಯನ್ನು ಪರಿಗಣಿಸುತ್ತೇವೆ” ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಧ್ವನಿಯಲ್ಲಿ ಹೇಳಿದೆ.

14 ವರ್ಷ ಹಳೆಯ ಕಾನೂನು ‘ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ (ಕೇಂದ್ರ ಸರ್ಕಾರ) ನಿಯಮ’ಗಳನ್ನು ಜಾರಿಗೆ ತರಲು ಸುಪ್ರೀಂ ಕೇಳಿದೆ. ಇದರ ಅಡಿಯಲ್ಲಿ, ರಾಜ್ಯಗಳೊಂದಿಗೆ ಮಾತುಕತೆ ನಡೆಸುವುದು ಮತ್ತು ಮೆಟ್ರೋಪಾಲಿಟನ್ ನಗರಗಳು, ನಗರಗಳು ಮತ್ತು ಪಟ್ಟಣಗಳಲ್ಲಿ ಚಿಕಿತ್ಸೆ ಮತ್ತು ವಿವಿಧ ರೀತಿಯ ಕಾರ್ಯಾಚರಣೆಗಳಿಗೆ ಪ್ರಮಾಣಿತ ದರಗಳನ್ನು ನಿಗದಿಪಡಿಸುವುದು ಕಡ್ಡಾಯವಾಗಿದೆ.

ಈ ಕುರಿತು ರಾಜ್ಯಗಳಿಗೆ ಹಲವು ಬಾರಿ ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸರ್ಕಾರ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದೆ. ಈ ಬೆನ್ನಲ್ಲೇ, “ಆರೋಗ್ಯ ರಕ್ಷಣೆ ನಾಗರಿಕರ ಮೂಲಭೂತ ಹಕ್ಕು, ಈ ಆಧಾರದ ಮೇಲೆ ಕೇಂದ್ರವು ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಒಂದು ತಿಂಗಳೊಳಗೆ ಪ್ರಮಾಣೀಕರಣವನ್ನು ಪೂರ್ಣಗೊಳಿಸುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ: IND vs ENG: 5ನೇ ಟೆಸ್ಟ್ ಗೆ ಈ ಸ್ಟಾರ್ ಬ್ಯಾಟ್ಸ್ ಮ್ಯಾನ್ ಅಲಭ್ಯ ! ಮೈದಾನಕ್ಕೆ ಇಳಿಯುತ್ತಾರೆಯೇ ಬುಮ್ರಾ ? 

ಆಸ್ಪತ್ರೆ ದರಗಳು ಏನು ಹೇಳುತ್ತವೆ?

'ವೆಟರನ್ಸ್ ಫೋರಂ ಫಾರ್ ಟ್ರಾನ್ಸ್‌’ಪರೆನ್ಸಿ ಇನ್ ಪಬ್ಲಿಕ್ ಲೈಫ್' ಎಂಬ ಎನ್‌’ಜಿಒ ಸುಪ್ರೀಂ ಕೋರ್ಟ್‌’ನಲ್ಲಿ ಈ ಪಿಐಎಲ್ ಸಲ್ಲಿಸಿದೆ. ಕೋವಿಡ್ ಸಮಯದಲ್ಲಿ ಚಿಕಿತ್ಸೆಯ ಪ್ರಮಾಣಿತ ದರವನ್ನು ನಿಗದಿಪಡಿಸುವಲ್ಲಿ ಕೇಂದ್ರವು ತ್ವರಿತತೆಯನ್ನು ತೋರಿಸಿದೆ ಎಂದು ಅವರ ವಕೀಲ ಡ್ಯಾನಿಶ್ ಜುಬೇರ್ ನ್ಯಾಯಾಲಯಕ್ಕೆ ತಿಳಿಸಿದರು. ಈಗ ರಾಜ್ಯಗಳು ಸಹಕರಿಸದಿದ್ದರೆ ಅದೇ ಕೇಂದ್ರ ಕಾನೂನುಗಳನ್ನು ಬಳಸಿಕೊಂಡು ಶುಲ್ಕವನ್ನು ನಿಗದಿಪಡಿಸಬಹುದು. ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ (ಕೇಂದ್ರ ಸರ್ಕಾರ) ನಿಯಮಗಳ ಅಡಿಯಲ್ಲಿ, ಎಲ್ಲಾ ಆಸ್ಪತ್ರೆಗಳು ಮತ್ತು ಕ್ಲಿನಿಕಲ್ ಸಂಸ್ಥೆಗಳು ರೋಗಿಗಳಿಗೆ ಪ್ರತಿ ಸೇವೆ ಮತ್ತು ಸೌಲಭ್ಯಕ್ಕಾಗಿ ವಿಧಿಸಬೇಕಾದ ದರಗಳನ್ನು ಸ್ಥಳೀಯ ಭಾಷೆಯಲ್ಲಿ ಮತ್ತು ಇಂಗ್ಲಿಷ್‌’ನಲ್ಲಿ ಎದ್ದುಕಾಣುವ ಸ್ಥಳದಲ್ಲಿ ಪ್ರದರ್ಶಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News