ನಿಂತಿದ್ದ ಲಾರಿಗೆ ಕಾರು ಢಿಕ್ಕಿ: ಐವರು ಸಾವು, 6 ಮಂದಿಗೆ ಗಾಯ

ಮೃತರು ಪಶ್ಚಿಮ ಗೋದಾವರಿಯ ಸಬ್ಬುವರಿಪಲೆಮ್ ಗ್ರಾಮದವರಾಗಿದ್ದು, ತಿರುಪತಿಗೆ ತೆರಳಿ ಬಾಲಾಜಿ ದರ್ಶನ ಪಡೆದು ಮನೆಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ. 

Last Updated : Jul 1, 2019, 12:52 PM IST
ನಿಂತಿದ್ದ ಲಾರಿಗೆ ಕಾರು ಢಿಕ್ಕಿ: ಐವರು ಸಾವು, 6 ಮಂದಿಗೆ ಗಾಯ title=
Pic Courtesy: ANI

ಗುಂಟೂರ್: ನಿಂತಿದ್ದ ಲಾರಿಗೆ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳೂ ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಿಳಕಲುರಿಪೇಟ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. 

ಮೃತರು ಪಶ್ಚಿಮ ಗೋದಾವರಿಯ ಸಬ್ಬುವರಿಪಲೆಮ್ ಗ್ರಾಮದವರಾಗಿದ್ದು, ತಿರುಪತಿಗೆ ತೆರಳಿ ಬಾಲಾಜಿ ದರ್ಶನ ಪಡೆದು ಮನೆಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ. 

ಡಿಎಸ್ಪಿ ರಾಮ ವರ್ಮ ಅವರು ಅಪಘಾತ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

Trending News