ಪುರಿಯಲ್ಲಿ ಚಂದನ್ ಯಾತ್ರೆ ವೇಳೆ ಪಟಾಕಿ ಸ್ಫೋಟ: 20 ಮಂದಿಗೆ ಗಾಯ, ಕೆಲವರ ಸ್ಥಿತಿ ಚಿಂತಾಜನಕ

Firecrackers Explode: ಒಡಿಶಾದ ಪೂರಿಯಲ್ಲಿ ಭಗವಾನ್ ಜಗನ್ನಾಥನ ಚಂದನ್ ಯಾತ್ರೆಯ ವೇಳೆ ಪಟಾಕಿ ಸಿಡಿದು ಸುಮಾರು 20ಕ್ಕೂ ಹೆಚ್ಚು  ಜನರು ಗಾಯಗೊಂಡಿರುವ ಘಟನೆ ನಡೆದಿದೆ. 

Written by - Yashaswini V | Last Updated : May 30, 2024, 08:30 AM IST
  • ಚಂದನ ಯಾತ್ರೆಯ ವೇಳೆ ದೇವಿ ಘಾಟ್ ದಡದಲ್ಲಿ ಪಟಾಕಿ ಸಿಡಿಸುವ ವ್ಯವಸ್ಥೆಯೂ ಇತ್ತು.
  • ಪಟಾಕಿ ಸಿಡಿಸಿದ ಕಿಡಿ ಪುಣ್ಯ ಕೊಳದಲ್ಲಿ ಜಲಕ್ರೀಡೆ ವೀಕ್ಷಿಸಲು ನೆರೆದಿದ್ದ ಭಕ್ತರ ಮೇಲೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ.
ಪುರಿಯಲ್ಲಿ ಚಂದನ್ ಯಾತ್ರೆ ವೇಳೆ ಪಟಾಕಿ ಸ್ಫೋಟ: 20 ಮಂದಿಗೆ ಗಾಯ, ಕೆಲವರ ಸ್ಥಿತಿ ಚಿಂತಾಜನಕ  title=

Jagannath Chandan Yatra Firecrackers Explode: ಪುರಿಯಲ್ಲಿ ಬುಧವಾರ (ಮೇ 29) ಭಗವಾನ್ ಜಗನ್ನಾಥನ ಚಂದನ್ ಯಾತ್ರೆಯ ಸಂದರ್ಭದಲ್ಲಿ  ಪಟಾಕಿಗಳು ಸ್ಫೋಟಗೊಂಡಿದ್ದು (Firecrackers Explode)  20ಕ್ಕೂ ಹೆಕ್ಕು ಮಂದಿ ಗಾಯಗೊಂಡಿದ್ದಾರೆ.  ಎಲ್ಲಾ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ದೇವಿ ಘಾಟ್ ಕೊಳದ ದಂಡೆಯಲ್ಲಿ ಪಟಾಕಿ ಸ್ಫೋಟ: 
ಜಗನ್ನಾಥನ ಚಂದನ್ ಯಾತ್ರೆಯ (Jagannath Chandan Yatra) ವೇಳೆ ದೇವಿ ಘಾಟ್ ದಡದಲ್ಲಿ ಪಟಾಕಿ ಸಿಡಿಸುವ ವ್ಯವಸ್ಥೆಯೂ ಇತ್ತು. ಪಟಾಕಿ ಸಿಡಿಸಿದ ಕಿಡಿ ಪುಣ್ಯ ಕೊಳದಲ್ಲಿ ಜಲಕ್ರೀಡೆ ವೀಕ್ಷಿಸಲು ನೆರೆದಿದ್ದ ಭಕ್ತರ ಮೇಲೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. 

ಈ ದುರ್ಘಟನೆಯಲ್ಲಿ ಗಾಯಗೊಂಡಿರುವವರಲ್ಲಿ ಸುಮಾರು ಆರು ಜನರ ಸ್ಥಿತಿ ಗಂಭೀರವಾಗಿದೆ. ಒಂದು ಮಗುವಿನ ಕೈ ತೀವ್ರವಾಗಿ ಸುಟ್ಟುಹೋಗಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. 

ಇದನ್ನೂ ಓದಿ- ಬಿಹಾರ: ಸರನ್‌ನಲ್ಲಿನ ಚುನಾವಣೋತ್ತರ ಹಿಂಸಾಚಾರದಲ್ಲಿ ಓರ್ವ ಸಾವು, ಇಬ್ಬರಿಗೆ ಗಾಯ

ಜಗನ್ನಾಥನ ಚಂದನ್ ಯಾತ್ರೆಯ (Jagannath Chandan Yatra) ವೇಳೆ ಸಂಭವಿಸಿರುವ ಈ ದುರ್ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ತಮ್ಮ ಮುಖ್ಯ ಆಡಳಿತ ಕಾರ್ಯದರ್ಶಿ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Chief Minister Naveen Patnaik), ''ಪುರಿ ನರೇಂದ್ರ ಕೊಳದ ಬಳಿ ನಡೆದ ಅಪಘಾತದ ಬಗ್ಗೆ ಕೇಳಿ ವಿಷಾದವಿದೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ವ್ಯವಸ್ಥೆ ಬಗ್ಗೆ ನಿಗಾ ವಹಿಸುವಂತೆ ಮುಖ್ಯ ಆಡಳಿತ ಕಾರ್ಯದರ್ಶಿ ಹಾಗೂ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಗಾಯಾಳುಗಳ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರದಿಂದ ಭರಿಸಲಾಗುವುದು. ಎಲ್ಲರಿಗೂ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ" ಎಂದು ಬರೆದಿದ್ದಾರೆ. 

ಇದನ್ನೂ ಓದಿ- ಭೂಕಂಪಕ್ಕೆ ನಲುಗಿದ ಅಸ್ಸಾಂನ ಗೌಹಾತಿ, ಮೇಘಾಲಯದ ಶಿಲ್ಲಾಂಗ್

ಘಟನೆ ಕುರಿತಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಕೂಡ ಬೇಸರ ವ್ಯಕ್ತಪಡಿಸಿದ್ದು, "ಪುರಿ ಚಂದನ ಯಾತ್ರೆಯ ವೇಳೆ ನರೇಂದ್ರ ಪುಷ್ಕರಿಣಿ ದೇವಿಘಾಟ್‌ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿರುವ ಸುದ್ದಿ ಕೇಳಿ ಬೇಸರವಾಗಿದೆ.ಭಗವಂತನ ಆಶೀರ್ವಾದದಿಂದ ಚಿಕಿತ್ಸೆ ಪಡೆಯುತ್ತಿರುವವರು ಬೇಗ ಗುಣಮುಖರಾಗಿ ಮನೆಗೆ ಹಿಂತಿರುಗಲಿ ಎಂದು ಹಾರೈಸುತ್ತೇನೆ" ಎಂದವರು  'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News