ಡೆಹರಾಡೂನ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ ! ನಾಲ್ಕು ಮಂದಿ ಸಾವು

Dehradun fire : ಬೆಂಕಿ ಹೊತ್ತಿಕೊಂಡ ಸಂದರ್ಭ ಓರ್ವ ವ್ಯಕ್ತಿ ಮತ್ತು ಮತ್ತೊಬ್ಬ  ಹುಡುಗ ಮನೆಯಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.  ಆದರೆ ನಾಲ್ಕು ಹೆಣ್ಣು ಮಕ್ಕಳು ಮಾತ್ರ ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. 

Written by - Ranjitha R K | Last Updated : Apr 7, 2023, 09:35 AM IST
  • ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮನೆಗೆ ಬೆಂಕಿ
  • ಬೆಂಕಿಯಲ್ಲಿ ಸಿಲುಕಿ ನಾಮ್ಕು ಮಂದಿ ಸಾವು
  • ಮೃತರು ಎರಡೂವರೆ ವರ್ಷದಿಂದ 12 ವರ್ಷದೊಳಗಿನವರು
ಡೆಹರಾಡೂನ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ ! ನಾಲ್ಕು ಮಂದಿ ಸಾವು   title=

ಡೆಹ್ರಾಡೂನ್‌ : ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು,  4 ಮಂದಿ ಮೃತಪಟ್ಟಿದ್ದಾರೆ. ಡೆಹ್ರಾಡೂನ್‌ನ ಚಕರತಾ ತಹಸಿಲ್‌ನ ಟಿಯುನಿ ಪ್ರದೇಶದಲ್ಲಿ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡ ನಂತರ 4 ಹುಡುಗಿಯರು ಬೆಂಕಿಯಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ.  ಮೃತ ನಾಲ್ಕು ಮಂದಿ ಎರಡೂವರೆ ವರ್ಷದಿಂದ 12 ವರ್ಷದೊಳಗಿನವರು ಎನ್ನಲಾಗಿದೆ. ಸುಮಾರು 5 ಗಂಟೆಗಳ ಪರಿಶ್ರಮದ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಯಿತು. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. 

ಬೆಂಕಿಯ ಕೆನ್ನಾಲಿಗೆಗೆ ನಾಲ್ಕು ಮಂದಿ ಬಲಿ  :
ತುಣಿ ಸೇತುವೆ ಬಳಿಯ ಮನೆಯೊಂದರಲ್ಲಿ ಎರಡು ಕುಟುಂಬಗಳು ವಾಸವಾಗಿವೆ. ಗುರುವಾರ ಸಂಜೆ ಘಟನೆ ನಡೆದಾಗ ಈ ಮಕ್ಕಳ ತಾಯಂದಿರು ಬಟ್ಟೆ ಒಗೆಯಲು ಮನೆಯಿಂದ ಹೊರಗೆ ಹೋಗಿದ್ದರು. ಇದಲ್ಲದೆ, ಬೆಂಕಿ ಹೊತ್ತಿಕೊಂಡ ಸಂದರ್ಭ ಓರ್ವ ವ್ಯಕ್ತಿ ಮತ್ತು ಮತ್ತೊಬ್ಬ  ಹುಡುಗ ಮನೆಯಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. 

ಇದನ್ನೂ ಓದಿ : ಕಾಶ್ಮೀರದಲ್ಲಿ ಬಂಧನಕ್ಕೊಳಗಾದ ನಕಲಿ ಅಧಿಕಾರಿ ಗುಜರಾತ್ ಪೊಲೀಸರಿಗೆ ಹಸ್ತಾಂತರ

ಬೆಂಕಿ ಹತ್ತಿಕೊಳ್ಳಲು ಕಾರಣ : 
ಪ್ರತ್ಯಕ್ಷದರ್ಶಿಗಳ ಪ್ರಕಾರ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮನೆಗೆ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ, ಘಟನೆಗೆ ನಿಖರ ಕಾರಣ ಏನು ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ. 

 

ಆದರೆ, ಅಗ್ನಿ ಅವಘಡ ಸಂಭವಿಸಿದ ಬಳಿಕ ಈ ಬಗ್ಗೆ ಟ್ವೀಟ್ ಮಾಡಿದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಇಂದು  ಚಕರಾತ ತಿಯುನಿ ಸೇತುವೆ ಬಳಿಯ 4 ಅಂತಸ್ತಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲವರು ಮೃತಪಟ್ಟಿರುವ ಸುದ್ದಿ ತಿಳಿದು ಬಂದಿದೆ. ಅಲ್ಲಿ ವಾಸಿಸುವ ಕುಟುಂಬಗಳು ಕ್ಷೇಮವಾಗಿರಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ. 

ಇದನ್ನೂ ಓದಿ : ಮಿಡ್ ನೈಟ್ ಹೈ ಡ್ರಾಮಾ ಬಂಧನದ ನಂತರ ಬಂಡಿ ಸಂಜಯ್ ಕುಮಾರ್ ಗೆ ಜಾಮೀನು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News